More

    ದಾನಗಳಲ್ಲಿ ರಕ್ತದಾನ ಎಲ್ಲಕ್ಕಿಂತ ಶ್ರೇಷ್ಠ

    ರಾಯಚೂರು: ದಾನಗಳಲ್ಲಿ ನಾನಾ ರೀತಿಯ ದಾನಗಳಿದ್ದು, ಅವುಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು, ಮತ್ತೊಬ್ಬರಿಗೆ ಜೀವದಾನ ನೀಡುವಂತಹ ರಕ್ತದಾನದಿಂದ ದೇವರ ಅನುಗ್ರಹವೂ ದೊರೆಯಲಿದೆ ಎಂದು ಶಿಲ್ಪಾ ಮೆಡಿಕೇರ್ ಸಂಸ್ಥೆ ಹಿರಿಯ ಅಕಾರಿ ಶರತ್‌ರೆಡ್ಡಿ ಹೇಳಿದರು.
    ಸ್ಥಳೀಯ ಶಿಲ್ಪಾ ಾರ್ಮಾ ಲ್ೈಸೈನ್ಸ್ ಲಿಮಿಟೆಡ್ ಸಭಾಂಗಣದಲ್ಲಿ ಶಿಲ್ಪಾ ಮೆಡಿಕೇರ್ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ ಬುತಡಾ ಜನ್ಮದಿನದ ನಿಮಿತ್ತ ರಿಮ್ಸ್ ಆಸ್ಪತ್ರೆ, ಐಎಂಎ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬರು ಸ್ವಾರ್ಥಕ್ಕಾಗಿ ಬದುಕುವುದನ್ನು ಬಿಟ್ಟು, ಇತರರ ಒಳಿತಿಗಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವುದರ ಜತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಪ್ರಮುಖವಾಗಿ ಯುವಕರು ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಶರತ್‌ರೆಡ್ಡಿ ಹೇಳಿದರು.
    ಈ ಸಂದರ್ಭಲ್ಲಿ ಸುಮಾರು 162ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಐಎಂಎ ಮಾಜಿ ಅಧ್ಯಕ್ಷ ಡಾ.ರವಿರಾಜೇಶ್ವರ, ವೈದ್ಯರಾದ ಡಾ.ಮಲ್ಲಿಕಾ ಬಿರಾದರ, ಡಾ.ಹೈಮದ್ ಹುಸೇನ್, ಡಾ.ನಾಗರಾಜ ಹಾಗೂ ಶಿಲ್ಪಾ ಮೆಡಿಕೇರ್ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts