More

    ನಗರದಲ್ಲಿ 402 ಯೂನಿಟ್ ರಕ್ತಸಂಗ್ರಹ: ತಮ್ಮ ದಾಖಲೆಯನ್ನೇ ಮುರಿದ ತೇರಾಪಂಥ್ ಸಭಾ

    ಮಂಡ್ಯ: ನಗರದ ತೇರಾಪಂಥ್ ಸಮುದಾಯ ಭವನದಲ್ಲಿ ತೇರಾಪಂಥ್ ಸಭಾ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ 402 ಯೂನಿಟ್ ರಕ್ತಸಂಗ್ರಹ ಮಾಡಲಾಯಿತು. ಇದರೊಂದಿಗೆ ಕಳೆದ ವರ್ಷ ತಮ್ಮ ಸಂಘದಿಂದ ಮಾಡಿದ್ದ ದಾಖಲೆಯನ್ನೇ ತಾವೇ ಮುರಿದರು. ಅಂದರೆ ಕಳೆದ ವರ್ಷ 200 ಯೂನಿಟ್ ರಕ್ತಸಂಗ್ರಹ ಮಾಡಿದ್ದರು.
    ಸಭಾ ಸದಸ್ಯ ರೋಷನ್ ಛೋಪ್ರಾ ಮಾತನಾಡಿ, ರಕ್ತದಾನ ವಾಡುವುದರಿಂದ ಅದೆಷ್ಟೋ ಜೀವಗಳನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ತೇರಾಪಂಥ್ ಸಭಾ ವತಿಯಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಕ್ತಕ್ಕೆ ಪರ್ಯಾಯವಾಗಿ ಯಾವುದೇ ವಸ್ತುವೂ ಇಲ್ಲ. ರಕ್ತವನ್ನು ದಾನದಿಂದಲೇ ಸಂಗ್ರಹ ವಾಡಬೇಕೇ ವಿನಾ ಬೇರೆ ಏನನ್ನೂ ವಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನ ವಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಸಭಾ ಅಧ್ಯಕ್ಷ ಪ್ರವೀಣ್, ಕಮಲೇಶ್ ಗೋಕರ್, ರಾಕೇಶ್ ಬಂಸಾಲಿ, ನರೇಂದ್ರ ಮಹಾವೀರ್ ಬಂಸಾಲಿ, ಮುಕೇಶ್ ಸಂಚೇತಿ ಸಂದೀಪ್, ನೇಮ್ ಸೇಠಿಯಾ, ಪ್ರಮೋದ್ ಭಂಸಾಲಿ, ಪ್ರದೀಪ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts