More

    VIDEO| ವೈಜಾಗ್​ ವಿಷಾನಿಲ ದುರಂತದ ಭೀಕರತೆಗೆ ಸಾಕ್ಷಿಯಾದ ಭಯಾನಕ ವಿಡಿಯೋಗಳಿವು….

    ವಿಶಾಖಪಟ್ಟಣಂ: ವೈಜಾಗ್​ ವಿಷಾನಿಲ ಸೋರಿಕೆಯಿಂದ ಎಲ್​.ಜಿ. ಪಾಲಿಮರ್ ಸಮೀಪದ ನಿವಾಸಿಗಳು ಯಾವ ಪ್ರಮಾಣದಲ್ಲಿ ತೊಂದರೆ ಅನುಭವಿಸಿದರು ಎಂಬುದಕ್ಕೆ ಸಿಸಿಟಿವಿಯಲ್ಲಿ ದಾಖಲಾದ ವಿಡಿಯೋಗಳಲ್ಲಿನ ಎರಡು ಭಯಾನಕ ದೃಶ್ಯಗಳು ಸಾಕ್ಷಿಯಾಗಿದೆ.​

    ಇದನ್ನೂ ಓದಿ: VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ

    ವಿಡಿಯೋಗಳಲ್ಲಿ ಏನಿದೆ?: ಒಂದು ಗಂಡು ಹಾಗೂ ಹೆಣ್ಣು ಮಗು ರಸ್ತೆಯ ಮೇಲೆ ಪ್ರಜ್ಞೆಯಿಲ್ಲದೇ ಬಿದ್ದಿರುವುದನ್ನು ಕಾಣಬಹುದಾಗಿದೆ. 4 ವರ್ಷದ ಬಾಲಕ ಮೇಲೇಳಲು ಯತ್ನಿಸಿ, ಕೊನೆಗೆ ಕಷ್ಟಪಟ್ಟು ಮೇಲೆ ಎದ್ದಾಗ ಬಳಿಕ ದೇಹದ ನಿಂಯಂತ್ರಣವಿಲ್ಲದೇ ತೂರಾಡಿ ಮುಗ್ಗರಿಸಿ ಮತ್ತೆ ಬೀಳುತ್ತಾನೆ.

    ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಕಾರಿನಲ್ಲಿ ಸಿಲುಕಿಕೊಂಡಿರುತ್ತಾರೆ. ಕಾರಿನ ಒಳಗೆ ಪ್ರಜ್ಞೆ ತಪ್ಪಿ ಬಿದ್ದಿರುವಂತೆ ಕಾಣುತ್ತಾರೆ. ವ್ಯಕ್ತಿಯೊಬ್ಬ ಬಂದು ಕಾರಿನ ಗಾಜನ್ನು ಹೊಡೆದು ರಕ್ಷಣೆ ಮಾಡುತ್ತಾನೆ. ಬಳಿಕ ಕಾರಿನಿಂದ ಹೊರ ಬರುವ ಮಹಿಳೆ ನೋಡಲು ತುಂಬಾ ದುರ್ಬಲಳಂತೆ ಕಾಣುತ್ತಾಳೆ. ಬಳಿಕ ತನ್ನ ಮಗಳನ್ನು ಮೇಲೆತ್ತಿಕೊಂಡು ನಡೆಯಲು ಸಾಧ್ಯವಾಗದೇ ಹೇಗೋ ಮನೆ ಸೇರಲು ಪ್ರಯತ್ನಿಸುತ್ತಾಳೆ.

    ಇದನ್ನೂ ಓದಿ: VIDEO-PHOTO| ಆಂಧ್ರ ಅನಿಲ ದುರಂತದ ಮನಕಲಕುವ ಚಿತ್ರಣ

    ಈ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನಿಲ ದುರಂತದ ಭೀಕರತೆಗೆ ಸಾಕ್ಷಿಯಾಗಿದೆ. ಅಂದಹಾಗೆ ಘಟನೆಯು ಮೇ 7ರಂದು ವಿಶಾಪಟ್ಟಣಂನ ಆರ್​. ಆರ್​. ವೆಂಕಟಪುರಂ ಸಮೀಪದ ಎಲ್​.ಜಿ. ಪಾಲಿಮರ್ಸ್​ನಲ್ಲಿ ಬೆಳಗಿನ ಜಾವ ಸಂಭವಿಸಿತ್ತು. ದುರಂತಕ್ಕೆ 12 ಮಂದಿ ಬಲಿಯಾದರು. ಅಲ್ಲದೆ, ಅನೇಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡು. ಇಡೀ ಊರನ್ನೇ ಖಾಲಿ ಮಾಡಿಸಿ, ಎರಡ್ಮೂರು ದಿನಗಳ ಬಳಿಕ ಗ್ರಾಮಕ್ಕೆ ಮರಳಿ ಕರೆತರಲಾಯಿತು. (ಏಜೆನ್ಸೀಸ್​)

    ಇದನ್ನೂ ಓದಿ: ಆಂಧ್ರ ಅನಿಲ ದುರಂತ: ಸೋರಿಕೆಯಾಗಿರುವುದು ಸ್ಟೈರೀನ್ ಗ್ಯಾಸ್, ಇದರಿಂದಾಗುವ ದುಷ್ಪರಿಣಾಮಗಳೇನು?​

    ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆ ಇತಿಹಾಸ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts