More

    ಕಬಿನಿ ಕಾಡಿನಲ್ಲಿ ಕಾಣಿಸಿಕೊಂಡಿದೆ ಕರಿ ಚಿರತೆ…! ಅತ್ಯಪರೂಪದ ವಿದ್ಯಮಾನ

    ಬೆಂಗಳೂರು: ವನ್ಯಜೀವಿ ಲೋಕ ಅದ್ಭುತ, ಅನೂಹ್ಯ, ರೋಮಾಂಚನಕಾರಿ ಹಾಗೂ ಸಾಹಸದಾಯಕ. ಇನ್ನು ವನ್ಯಜೀವಿಗಳ ಛಾಯಾಗ್ರಹಣ ನೀಡುವ ಅನುಭವವೇ ವಿಶಿಷ್ಟ. ಅದರಲ್ಲೂ ಅಪರೂಪದ ಪ್ರಾಣಿಗಳು ಕಣ್ಣಿಗೆ ಬಿದ್ದರಂತೂ ಹಬ್ಬವೋಹಬ್ಬ…!

    ಅಂಥದ್ದೇ ಒಂದು ಹಬ್ಬಕ್ಕೆ ಸಾಕ್ಷಿಯಾಗಿದೆ ಕಬಿನಿ ನದಿಯಂಚಿನ ಕಾಡು. ಹೌದು ಇಲ್ಲಿ ಅತ್ಯಪರೂಪದ ಪ್ರಸಂಗಕ್ಕೆ ಕ್ಯಾಮರಾ ಕಣ್ಣು ಸಾಕ್ಷಿಯಾಗಿದೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.

    ಇದನ್ನೂ ಓದಿ; ಭೂತಾನ್​​ ಸಕ್ಟೆಂಗ್​ ವನ್ಯಜೀವಿ ಅಭಯಾರಣ್ಯವೂ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಗಡಿ ತಂಟೆ ಶುರು ಮಾಡಿದ ಚೀನಾ

    ಕಬಿನಿ ಕಾಡಿನಲ್ಲಿ ಕಾಣಿಸಿಕೊಂಡಿದೆ ಕರಿ ಚಿರತೆ...! ಅತ್ಯಪರೂಪದ ವಿದ್ಯಮಾನ

    ಕಬಿನಿ ಕಾಡಿನಲ್ಲಿ ಕಾಣಿಸಿಕೊಂಡಿದೆ ಕರಿ ಚಿರತೆ...! ಅತ್ಯಪರೂಪದ ವಿದ್ಯಮಾನ

    ಇಲ್ಲಿ ಕರಿ ಚಿರತೆಯೊಂದು ಕಾಣಿಸಿಕೊಂಡಿದೆ. ಭಾರತದಲ್ಲಿ ಕರಿ ಚಿರತೆಗಳೂ ಭಾರಿ ಅಪರೂಪ. ಅದರಲ್ಲೂ ಇವುಗಳ ಸಂಖ್ಯೆ ವಿರಳಾತಿವಿರಳ. ಹೀಗಾಗಿ ಕಣ್ಣಿಗೆ ಬಿದ್ದಿತೆಂದರೆ ಅದೊಂದು ಸುಸಂದರ್ಭ. ಆ ಅಮೂಲ್ಯ ಕ್ಷಣಗಳು ಸೆರೆಯಾದರೆ, ಅದಕ್ಕಿಂತ ಭಾಗ್ಯ ಇನ್ನೊಂದಿಲ್ಲ ಎನ್ನುತ್ತಾರೆ ವನ್ಯಜೀವಿ ಛಾಯಾಚಿತ್ರಗ್ರಾಹಕರು.

    ಈಗ ಸೋಷಿಯಲ್​ ಮಿಡಿಯಾದಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಫೋಟೋಗಳನ್ನು ಸೆರೆ ಹಿಡಿದಿರುವುದು ಶಾಜ್​ಝಂಗ್​ ಎಂಬುವರು. ಅರ್ಥ ಎಂಬ ಟ್ವಿಟರ್​ ಪುಟದಲ್ಲಿ ಇದನ್ನು ಅಪ್​ಲೋಡ್​ ಮಾಡಲಾಗಿದೆ.

    ಕಾಲೇಜು, ವಿಶ್ವವಿದ್ಯಾಲಯಗಳ ಪರೀಕ್ಷೆಗಳೂ ರದ್ದು; ಇವರೇ ಭಾಗ್ಯವಂತರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts