More

    ಕ್ರೀಡೆಗಳಿಂದ ಸ್ನೇಹ ವೃದ್ಧಿ

    ಸಂಡೂರು: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿವೆ. ಆಟದಲ್ಲಿ ಸೋಲು ಮತ್ತು ಗೆಲುವಿನ ಸಮನಾಗಿ ಸ್ವೀಕರಿಸಬೇಕು ಎಂದು ಬಿಕೆಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಿ.ನಾಗನಗೌಡ ಹೇಳಿದರು.

    ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸಹಕಾರಿ

    ತಾಲೂಕಿನ ಕೃಷ್ಣಾನಗರದ ಬಿಕೆಜಿ ಸಮೂಹ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಪಂದ್ಯಾವಳಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಪರಿಚಯ ಜತೆಗೆ ಸ್ನೇಹ ವೃದ್ಧಿಯಾಗಲಿದೆ ಎಂದರು.

    ಇದನ್ನೂ ಓದಿ:

    ಕ್ರಿಕೆಟ್‌ನಲ್ಲಿ 8 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಆರ್‌ಪಿಸಿಎಲ್-2 ತಂಡ ಜಯಗಳಿಸಿತು. ಇನ್ನು ಬಿಕೆಜಿ ಮೈನ್ಸ್ ತಂಡ ರನ್ನರ್‌ಆಪ್‌ಗೆ ತೃಪ್ತಿ ಪಡಬೇಕಾಯಿತು. ವಾಲಿಬಾಲ್‌ನಲ್ಲಿ 6 ತಂಡಗಳ ಪೈಕಿ ಆರ್‌ಪಿಸಿಎಲ್-2 ಗೆಲುವು ಸಾಧಿಸಿತು. ಅರ್‌ಪಿಸಿಎಲ್-1 ತಂಡ ರನ್ನರ್‌ಆಪ್ ಸ್ಥಾನ ಪಡೆದುಕೊಂಡಿತು. ಮಹಿಳಾ ಥ್ರೋ ಬಾಲ್ ಸ್ಪರ್ಧೆಯಲ್ಲಿ ಬಿಕೆಜಿ ಕಚೇರಿ ಮೊದಲ ಸ್ಥಾನ ಗಳಿಸಿತು. ಆರ್‌ಪಿಸಿಎಲ್ ಎರಡನೇ ಸ್ಥಾನ ಗಳಿಸಲು ಶಕ್ತವಾಯಿತು.
    ಬಿಕೆಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಬಿ.ರುದ್ರಗೌಡ, ಬಿ.ಕೆ.ಬಸವರಾಜ, ವಿನಾಯಕ ಗೌಡ, ಮುಖಂಡರಾದ ಬಷೀರ್, ರಾಜಶೇಖರ್ ಬೆಲ್ಲದ್, ಪರಶುರಾಮ್ ಮೋರೆ ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts