More

    ನನ್ನ ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಸಾಕಷ್ಟು ವ್ಯತ್ಯಾಸ ಇದೆ: ಬಿ.ಕೆ. ಹರಿಪ್ರಸಾದ್​

    ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್​ ಸರ್ಕಾರದ ಮಂತ್ರಿ ಮಂಡಲ ರಚನೆಯಲ್ಲಿ ಹಿರಿಯ ನಾಯಕ ಪರಿಷತ್​ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್​ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು.

    ಬಿಜೆಪಿ ವಿರುದ್ಧ ಸೈದ್ಧಾಂತಿಕವಾಗಿ ತೀವ್ರ ವಾಗ್ದಾಳಿ ನಡೆಸುತ್ತ ಬಂದಿರುವ ಹರಿಪ್ರಸಾದ್​ ಅವರಿಗೆ ಕಾಂಗ್ರೆಸ್​ ಹೈಕಮಾಂಡ್​ ನಿರಾಸೆ ಮೂಡಿಸಿದ್ದು ಈ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಯೂ ಜೋರಾಗಿ ಹರಡಿತ್ತು.

    ಸುಳ್ಳು ಸುದ್ದಿ

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಹರಿಪ್ರಸಾದ್​ ತಾವು ಯಾವುದೇ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿಲ್ಲ ಇದೆಲ್ಲ ವಾಟ್ಸ್​ಆ್ಯಪ್​ ಯೂನಿವರ್ಸಿಟಿಯಲ್ಲಿ ಹುಟ್ಟಿಕೊಂಡಿರುವ ವಿಷಯ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

    ಪದ್ದತಿ ಸಂಪ್ರದಾಯ ಇತ್ತು, ಮೇಲ್ಮನೆ ವಿಪಕ್ಷ ನಾಯಕರು ಸಭಾನಾಯಕರನ್ನ ಮಾಡೊದು ಸಂಪ್ರದಾಯ. ಆದರೆ, ಪದ್ದತಿಯನ್ನು ಮುರಿದಿದ್ದಾರೆ ನಾನೆಂದೂ ಯಾರ ಬಳಿಯೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ ಎಂದು ಹೇಳಿದ್ದಾರೆ.

    ಪರಿಷತ್ ನಲ್ಲಿ ಸಭಾನಾಯಕರನ್ನ ಯಾರನ್ನ ಮಾಡಬೇಕೆಂದು ಸಿಎಂ ಅವರನ್ನ ಡಿಸಿಎಂ ಶಿವಕುಮಾರ್ ಅವರನ್ನ ಕೇಳಿ ನಾನು ಸಾಮಾನ್ಯ ಸದಸ್ಯನಾಗಿರುತ್ತೇನೆ. ಎಲ್ಲಿಯವರೆಗೂ ಇರು ಅಂತಾರೊ, ಅಲ್ಲಿಯವರೆಗೂ ಇರುತ್ತೇನೆ ಎಂದಿದ್ದಾರೆ.

    ನನ್ನ ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಸಾಕಷ್ಟು ವ್ಯತ್ಯಾಸ ಇದೆ: ಬಿ.ಕೆ. ಹರಿಪ್ರಸಾದ್​

    ಇದನ್ನೂ ಓದಿ: ಮಹಿಳೆಯರ ಮೇಲೆ ಪೊಲೀಸರ ದಾಳಿ; ಮನಸೋ ಇಚ್ಛೆ ಥಳಿತ

    ಕಾಲ ಬಂದಾಗ ಹೇಳ್ತೀನಿ

    ಪಕ್ಷದಲ್ಲಿ ನಾನಾ ರೀತಿಯ ವಿಚಾರ ನಡೆಯುತ್ತಿರುತ್ತೆ ಕಾಲ ಬಂದಾಗ ಅದನೆಲ್ಲ ಹೇಳ್ತೀನಿ.ಅಧಿಕಾರ ಹಂಚಿಕೆ ಗೊತ್ತಿರುವುದು 7 ಜನಕ್ಕೆ ಮಾತ್ರ ಗೊತ್ತಿದೆ ಬಾಕಿಯವರು ಹೇಳುತ್ತಿರುವುದು ಸುಳ್ಳು ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

    ಸಚಿವ ಸ್ಥಾನ ಕೈ ತಪ್ಪಿದ ವಿಚಾರವಾಗಿ ಪ್ರತಿಕ್ರಿಯಿಸಿ ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಲ್ಲರೂ ಅವರವರ ರೀತಿಯಲ್ಲಿ ಪಕ್ಷಕ್ಕಾಗಿ ದುಡಿದಿರುತ್ತಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

    ಟೈಮ್ ಇಸ್ ದ ಮೆಡಿಸಿನ್ ಕಾಲ ಬಂದಾಗ ಎಲ್ಲ ಹೇಳ್ತೀನಿ. ಪಕ್ಷದಲ್ಲಿ ಸಕ್ರಿಯ ವಾಗಿರುವವರಿಗೆ ಮಣೆ ಹಾಕುವುದು ಪದ್ದತಿ. ಸಾಂಧರ್ಬಿಕವಾಗಿ ನಾನು ಹೇಳ ಬೇಕಾದಾಗ ಹೇಳ್ತೀನಿ ಎಂದು ಹೊಸ ಬಾಂಬ್​ ಒಂದನ್ನು ಸ್ಪೋಟಿಸಿದ್ದಾರೆ.

    ಪರೋಕ್ಷವಾಗಿ ಟಾಂಗ್​

    ನಾನೂ ಪಕ್ಷ ಕಟ್ಟಿದವನು ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತಗೊಂಡು ಬಂದವನು ಅಲ್ಲ. ನನ್ನ ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ನಾನು ಯೋಚನೆ ಮಾಡುವ ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಹಕ್ಕು ಎಂದು ತಿಳಿದವನು.

    ನಾನು ಅಹಿಂದ ಅಂತ ಯೋಚನೆ ಮಾಡುವವನಲ್ಲ ನಾನು ಕಾಂಗ್ರೆಸ್‌ನ ಸಿದ್ದಾಂತ ಸರ್ವಧರ್ಮ ಸಮಭಾವ್ ಎಂದು ನಂಬಿದವನು ಎಂದು ಹೇಳುತ್ತಾ ಸಿಎಂ ಸಿದ್ದರಾಮಯ್ಯ ಹೆಸರೇಳದೆ ಹರಿಪ್ರಸಾದ್​ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts