More

    ಬಿಜೆಪಿ ನಾಯಕರ ಕಛೇರಿಯಲ್ಲಿ ಕಾರ್ಯಕರ್ತೆ ಮೇಲೆ ಲೈಂಗಿಕ ಶೋಷಣೆ ಆರೋಪ

    ಮುಂಬೈ: ಮುಂಬೈನ ಮಹಿಳಾ ಬಿಜೆಪಿ ಕಾರ್ಯಕರ್ತರೊಬ್ಬರು ಪಕ್ಷದ ಮತ್ತೊಬ್ಬ ಕಾರ್ಯಕರ್ತರು ಬೋರಿವಿಲಿಯಲ್ಲಿರುವ ಬಿಜೆಪಿ ನಾಯಕರ ಕಾರ್ಯಾಲಯದಲ್ಲಿ ತಮ್ಮನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದುಷ್ಕೃತ್ಯವು ಆಗಸ್ಟ್​ 15 ರಂದು ನಡೆದಿತ್ತು ಎನ್ನಲಾಗಿದ್ದು, ಮಹಿಳೆಯು ಬುಧವಾರ ನೀಡಿದ ದೂರಿನ ಮೇಲೆ ಬೋರಿವಿಲಿ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಮುಂಬೈ ಮೇಯರ್​ ಹಾಗೂ ಶಿವಸೇನಾ ನಾಯಕಿ ಕಿಶೋರಿ ಪೆಡ್ನೇಕರ್​ ಅವರು ಸಂತ್ರಸ್ತೆಯನ್ನು ಮತ್ತು ಪೊಲೀಸ್​ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರ ಮಾಡುವುದಾಗಿ ಹೇಳಿದ್ದಾರೆ. “ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ?” ಎಂದು ಪ್ರಶ್ನಿಸಿರುವ ಪೆಡ್ನೆಕರ್​, ಸಂತ್ರಸ್ತೆಯು ಬಿಜೆಪಿಯ ಶಾಸಕರು ಮತ್ತು ಸಂಸದರ ಸಹಾಯ ಕೇಳಿದ್ದಾಳೆ. ಆದರೆ ಏನೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

    ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?

    ಗಂಡ ಬಿಡುತ್ತಾನೆಂದು ಲೋಕವನ್ನೇ ಬಿಟ್ಟಳು! 5ನೇ ಮಹಡಿಯಿಂದ ಕೆಳಗೆ ಹಾರಿದ ಮಹಿಳೆ

    ಕಾಲುಗಳಿಗೆ ಶಕ್ತಿ ನೀಡುವ ಸರಳ ಯೋಗಾಸನವಿದು; ಎಲ್ಲರೂ ಮಾಡಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts