More

    ನಂದಿನಿ​​ ಬಗ್ಗೆ ಕೇರಳ ಅಪಸ್ವರ ಎತ್ತಿದೆ; ಈ ಬಗ್ಗೆ ರಾಹುಲ್ ಗಾಂಧಿ ತುಟಿಪಿಟಿಕ್‌ ಎನ್ನುತ್ತಿಲ್ಲ ಯಾಕೆ?: ಬಿಜೆಪಿ

    ಬೆಂಗಳೂರು: ನಂದಿನಿ(Nandini) ಬ್ರ್ಯಾಂಡ್​​ ವಿರುದ್ಧ ಕೇರಳ(Kerala) ಅಪಸ್ವರ ಎತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿ ತುಟಿಪಿಟಿಕ್‌ ಎನ್ನುತ್ತಿಲ್ಲ ಯಾಕೆ? ಎಂದು ರಾಜ್ಯ ಬಿಜೆಪಿ(BJP) ಟ್ವೀಟ್ ಮೂಲಕ ಕಾಂಗ್ರೆಸ್ ಅನ್ನು ಪ್ರಶ್ನಿಸಿದೆ.

    ಇದನ್ನೂ ಓದಿ: ಸುಳ್ಳು​ ಸುದ್ದಿ ಹರಡುವವರ ಮೇಲೆ ಖಾಕಿ ನಿಗಾ: ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ಪರಂಪರೆ, ಇತಿಹಾಸ ಇರುವ ಏನನ್ನೇ ಆದರೂ ವ್ಯವಸ್ಥಿತವಾಗಿ ನಾಶಪಡಿಸುವುದು ಕಾಂಗ್ರೆಸ್ ಅಸ್ತಿತ್ವವಾದ. ಆ ಸ್ವಾರ್ಥಕ್ಕೆ ದುರಾದೃಷ್ಟವಶಾತ್‌ ಬಲಿಯಾಗಬೇಕಾಗಿ ಬಂದಿರುವುದು ನಮ್ಮ ರಾಜ್ಯದ ಹೆಮ್ಮೆಯ ನಂದಿನಿ. ತನಗೆ ಸುದ್ದಿಯ ಕೊರತೆಯಾದಾಗ ಅಮುಲ್‌(Amul) ವಿರುದ್ಧ ಎತ್ತಿಕಟ್ಟಿ ನಂದಿನಿ ಬ್ರ್ಯಾಂಡನ್ನು ಸಂಕುಚಿತಗೊಳಿಸಿತು. ಪರಿಣಾಮವಾಗಿ ಇಂದು ಹೊರ ರಾಜ್ಯಗಳಲ್ಲಿ ನಂದಿನಿ ಬ್ರ್ಯಾಂಡ್‌ಗೆ ಹೊಡೆತ ಬೀಳುತ್ತಿದೆ” ಎಂದು ಹೇಳಿದೆ.

    “ಈಗಾಗಲೇ ನಂದಿನಿಯ ಬಗ್ಗೆ ಕೇರಳ ಅಪಸ್ವರ ಎತ್ತಿದೆ. ಇಡೀ ದೇಶದ ಬಗ್ಗೆಯೇ ಮಾತನಾಡುವ ಕೇರಳದ ವಯನಾಡು ಸಂಸದ ರಾಹುಲ್ ಗಾಂಧಿ(Rahul Gandhi) ಈ ಬಗ್ಗೆ ತುಟಿಪಿಟಿಕ್‌ ಎನ್ನುತ್ತಿಲ್ಲ ಯಾಕೆ? ಕೇರಳದ ಶಾಸಕರು ನಂದಿನಿಯ ಗುಣಮಟ್ಟವನ್ನೇ ಪ್ರಶ್ನಿಸುತ್ತಿರುವಾಗ ರಾಜ್ಯ ಸರ್ಕಾರವೇಕೆ ಆ ಬಗ್ಗೆ ಮೌನವಾಗಿದೆ ಸಿದ್ದರಾಮಯ್ಯರವರೇ?” ಎಂದು ಟ್ವೀಟ್ ಮಾಡಿದೆ.

    ಇದನ್ನೂ ಓದಿ: ದೊಡ್ಡ ಬಜೆಟ್ ಚಿತ್ರಗಳಿಂದ ಪೂಜಾ ಹೆಗ್ಡೆ ಔಟ್; ಟಾಪ್ ನಟರ ಚಿತ್ರದಲ್ಲಿ ಪೂಜಾಗೆ ಯಾಕಿಲ್ಲ ಅವಕಾಶ?

    “ಈಗ ಪ್ರತಿ ಲೀಟರ್‌ಗೆ 5 ಹೆಚ್ಚು ಮಾಡುವ ಮೂಲಕ ನಂದಿನಿಯ ಮಾರುಕಟ್ಟೆ ಗಾತ್ರವನ್ನೇ ಭಾರಿ ಪ್ರಮಾಣದಲ್ಲಿ ಕುಗ್ಗಿಸಲಿದ್ದೀರಿ. ನಿಮಗೆ ನಿಜಕ್ಕೂ ಹೈನುಗಾರರ ಮೇಲೆ ಕಾಳಜಿ ಇದ್ದರೆ ಪಶು ಆಹಾರವನ್ನು ಅಗ್ಗವಾಗಿ ಒದಗಿಸಿ, ಅಥವಾ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಿ. ಲಕ್ಷಾಂತರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಹುನ್ನಾರವೇಕೆ?” ಎಂದು ಟ್ವೀಟ್ ಮಾಡಿದೆ.

    “ನೀವು ಈಗಾಗಲೇ ನಿಮ್ಮ ಹೈಕಮಾಂಡ್‌ ಪಾಲಿನ ಎಟಿಎಂ ಸರ್ಕಾರವಾಗಿ ಕೆಲಸ ಶುರು ಮಾಡಿರುವ ಕಾರಣ ಯಾರು ಏನೇ ಹೇಳಿದರೂ ಅದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ” ಎಂದು ಸರಣಿ ಟ್ವೀಟ್ ಮೂಲಕ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರವನ್ನು ಬಿಜೆಪಿ ಟೀಕಿಸಿದೆ.

    ಈತನ ಬೈಕ್ ಬೆಲೆ 85 ಸಾವಿರ ರೂ.; ಕಟ್ಟಬೇಕಿದೆ 70,000 ರೂ. ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts