More

    ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಹಾನಗಲ್​: ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ. ಇದರ ಪರಿಣಾಮವಾಗಿ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಹಾನಗಲ್​ನಲ್ಲಿ ಭಜಂತ್ರಿ ಸಮುದಾಯದ ಮುಖಂಡರು ಹಾಗೂ ಜನರನ್ನು ಉದ್ದೇಶಿಸಿ ಮಾಡಿದ ಚುನಾವಣಾ ಪ್ರಚಾರ ಭಾಷಣದ ಸಂದರ್ಭದಲ್ಲಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು.‌

    ಪ್ರತಿ ಊರಿನಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನೆಲಕಚ್ಚಿದ್ದು, ಹಾನಗಲ್‌ನಲ್ಲಿಯೂ ಅವರನ್ನು ಮನೆಗೆ ಕಳಿಸಿದರೆ, ಅವರು ಖಾಯಂ ಆಗಿ ಮನೆಯಲ್ಲಿ ಇರುತ್ತಾರೆ ಎಂದರು. ಸುಳ್ಳು ಹೇಳುವವರಿಗೆ ಮನ್ನಣೆ ಕೊಡಬೇಡಿ ಎಂದು ಕರೆ ನೀಡಿದ ಮುಖ್ಯಮಂತ್ರಿಗಳು, ಎಲ್ಲಾ ಸಮುದಾಯಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

    ಇಷ್ಟು ದಿನ ಕಾಂಗ್ರೆಸ್ ಜನರನ್ನು ಮತ ಬ್ಯಾಂಕ್ ಎಂದು ತಿಳಿದುಕೊಂಡಿತ್ತು. ಅಧಿಕಾರ ಪಡೆದವರು ಜನರನ್ನು ಮರೆತು ಅಧಿಕಾರದಲ್ಲಿ ಮೆರೆಯುತ್ತಿದ್ದರು. ಈಗ ನೀವು ಜಾಗೃತರಾಗಿ ಇರುವುದರಿಂದ ನಿಮ್ಮನ್ನು ವಂಚಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.

    ಇದನ್ನೂ ಓದಿ: ಇಂಟೆಲಿಜೆನ್ಸ್ ವರದಿಯಿಂದ ಬಿಜೆಪಿ ಹೈಕಮಾಂಡ್ ಪುಲ್ ಖುಷ್; ಏನಿದೆ ಗೊತ್ತಾ ವರದಿಯಲ್ಲಿ?!

    ಕಾಂಗ್ರೆಸ್​ ಪಕ್ಷ ಹತಾಶಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ, ಸಮಾಜಗಳಿಗೆ ಅನ್ಯಾಯ ಮಾಡುವ ಕೆಲಸವನ್ನು ಮಾಡಿದ್ದಾರೆ. ಇಂದಿಗೂ ಅಲ್ಲಲ್ಲಿ ಅಸಮಾನತೆಯ ಕೂಗು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಮೊದಲಿನಿಂದಲೂ ಸಮಾನತೆ ತರುವ ಕೆಲಸ ಮಾಡಿದ್ದರೆ, ಈ ಕೂಗು ಇರುತ್ತಿರಲಿಲ್ಲ. ಹಾಗಾಗಿ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಬೇಕು ಎಂದರು. ನನ್ನ ಜನರನ್ನು, ನನ್ನನ್ನು ನಂಬಿದವರಿಗೆ ನ್ಯಾಯ ಕೊಡುವುದು ನನ್ನ ಧರ್ಮ. ದನಿ ಇಲ್ಲದವರಿಗೆ ದನಿ ಕೊಡುವ ಕೆಲಸವನ್ನು ಮಾಡುವುದಾಗಿ ಸಿಎಂ ಅಭಯ ನೀಡಿದರು.

    ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಇದನ್ನೂ ಓದಿ: ಮತಬ್ಯಾಂಕ್ ಪರಿಕಲ್ಪನೆ ಹುಟ್ಟುಹಾಕಿದ್ದೇ ಕಾಂಗ್ರೆಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ನಮ್ಮದು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಅವರ ಮಾತುಗಳನ್ನು ಕೇಳುವ ಸರ್ಕಾರ ಎಂದು ಮುಖ್ಯಮಂತ್ರಿಗಳು, ಜನರಿಗೆ ಅಧಿಕಾರ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಯುವಕರಿಗೆ ಉದ್ಯೋಗ, ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಬಲ ಕೊಡುವ ಕೆಲಸವನ್ನು ಸರ್ಕಾರ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ಶೀಘ್ರದಲ್ಲಿಯೇ ನೇಮಿಸುವುದಾಗಿ ತಿಳಿಸಿದರು.

    ಮಾವನ ಮನೆಗೆ ಹೋಗಿ ಮತ ಯಾಚಿಸಿದ ಮುಖ್ಯಮಂತ್ರಿ; ಸಿಎಂ ಆದ ಬಳಿಕ ಅತ್ತೆ ಮನೆಗೆ ಇದೇ ಮೊದಲ ಭೇಟಿ

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts