More

    ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮೀಸಲು ಹೋರಾಟ ಸಮಿತಿ ಖಂಡನೆ

    ಹೂವಿನಹಡಗಲಿ: ಸಂವಿಧಾನವೇ ಗೊತ್ತಿಲ್ಲದ ಸಂಸದ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕರ್ನಾಟಕ ಮೀಸಲು ಸಂರಕ್ಷಣಾ ಹೋರಾಟ ಸಮಿತಿ ತಾಲೂಕು ಅಧ್ಯಕ್ಚ ಬಿ.ಪರಮೇಶ್ವರನಾಯ್ಕ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಶಿರಾ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಒಳ ಮೀಸಲಿಗೆ ನಮ್ಮ ಸರ್ಕಾರ ಬದ್ಧ ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿರುವುದರ ಜತೆಗೆ ಮಾದಿಗರ ಮತಗಳನ್ನು ಸೆಳೆಯುವ ಕುತಂತ್ರವಾಗಿದೆ. ಅವರ ಹೇಳಿಕೆಯಿಂದ 101 ಜಾತಿಗಳಿಗೆ ಅವಮಾನವಾಗಿದೆ. ಒಳ ಮೀಸಲು ಜಾರಿಗೆ ತರುತ್ತೇವೆಂದು ಹೇಳಲು ಇವರು ರಾಜ್ಯದ ಸಿಎಂ ಅಲ್ಲ. ಕೂಡಲೇ ಸಮುದಾಯದ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಕಠಾರಿ ನಾಯ್ಕ ಮಾತನಾಡಿ ಲಂಬಾಣಿ, ಕೊರಮ, ಕೊರಚ, ಬುಡ್ಗ ಜಂಗಮ ಸೇರಿ 101 ಸಮುದಾಯದ ಜನರು ಸೇರಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ತಿಳಿಸಿದರು.

    ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್ ಭೋವಿ, ಬಂಜಾರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ್ ನಾಯ್ಕ, ಹೊಳಗುಂದಿ ಮಹಾಬಲೇಶ್ವರ, ಸೋಮ್ಯಾನಾಯ್ಕ, ಯೇಸುನಾಯ್ಕ, ಚಂದ್ರಶೇಖರ್ ನಾಯ್ಕ , ಭೀಮಾನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts