More

    ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್​ ನಾಯಕರ ಚಿತಾವಣೆ ಆರೋಪ

    ಲಖನೌ: ಆರೋಗ್ಯ ಶಿಬಿರವೊಂದಕ್ಕೆ ನೆರೆದಿದ್ದ ಜನರು ಬಿಜೆಪಿ ಸಂಸದ ಸಂಗಂ ಲಾಲ್​ ಗುಪ್ತ ಅವರನ್ನು ಥಳಿಸಿ, ಪಕ್ಷದ ಇತರ ಕಾರ್ಯಕರ್ತರನ್ನು ತಳ್ಳಾಡಿರುವ ಘಟನೆ ಉತ್ತರಪ್ರದೇಶದ ಪ್ರತಾಪಗಡದಲ್ಲಿ ಶನಿವಾರ ನಡೆದಿದೆ. ಥಳಿತಕ್ಕೊಳಗಾಗಿ ತಮ್ಮ ಕಾರಿನಲ್ಲಿ ಸ್ಥಳದಿಂದ ತೆರಳುತ್ತಿದ್ದ ಸಂಸದರ ವಾಹನದ ಮೇಲೆ ಹಲವು ಜನರು ಕಲ್ಲು ತೂರಿದ್ದಾರೆ ಎನ್ನಲಾಗಿದೆ.

    ಈ ಘಟನೆಗೆ ಹಿರಿಯ ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಮಗಳು ಶಾಸಕಿ ಆರಾಧನಾ ಮಿಶ್ರ ಅವರೇ ಚಿತಾವಣೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಧರಣಿ ನಡೆಸಿದರು. ಸಂಜೆಯ ವೇಳೆಗೆ ಲಾಲ್​ಗಂಜ್​ ಪೊಲೀಸರು ಮಾಜಿ ಸಂಸದ ತಿವಾರಿ, ಶಾಸಕಿ ಮಿಶ್ರ ಮತ್ತು ಇನ್ನೂ 25 ಜನರ ವಿರುದ್ಧ ಕೊಲೆ ಯತ್ನ ಮತ್ತು ಇತರ ಆರೋಪಗಳೊಂದಿಗೆ ಎಫ್​ಐಆರ್​ ದಾಖಲಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ

    ಸರ್ಕಾರಿ ಕಾರ್ಯಕ್ರಮದಲ್ಲಿ ವ್ಯವಸ್ಥೆಗಳು ಸರಿಯಾಗಿಲ್ಲದ್ದರಿಂದ ಸಿಟ್ಟಿಗೆದ್ದು ಜನರೇ ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿ ಓಡಿಸಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದಾರೆ. ಮತ್ತೊಂದೆಡೆ, ರಾಜ್ಯದ ಡೆಪ್ಯುಟಿ ಸಿಎಂ ಕೇಶವಪ್ರಸಾದ್​ ಮೌರ್ಯ ಅವರು, ಒಬ್ಬರು ತಪ್ಪಿತಸ್ಥರನ್ನೂ ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)

    ಕರೊನಾ ವಿರುದ್ಧದ ಹೋರಾಟದಲ್ಲಿ ಟೀಂ ಇಂಡಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

    ಅಫ್ಘನ್​ ಮಹಿಳೆಯರು ಹಿಜಾಬ್​ ತೊಡುವುದಿಲ್ಲ! ತಾಲಿಬಾನ್​​ ಕಟ್ಟಾವಾದಕ್ಕೆ ಟ್ರೆಂಡಿಂಗ್ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts