More

    ಬಿಎಸ್​​ವೈ ನಿವಾಸಕ್ಕೆ ಶಾಸಕರ ನಿಯೋಗ ! ಯೋಗೇಶ್ವರ್​ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

    ಬೆಂಗಳೂರು : ಸಿಎಂ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವ ಸಚಿವ ಸಿ.ಪಿ.ಯೋಗೇಶ್ವರ್ ಅವರ ನಡೆ ಬಗ್ಗೆ ಸಿಎಂ ಆಪ್ತ ಶಾಸಕರ ಟೀಂ ಕೆಂಗಣ್ಣು ತೋರಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಡಾ‌.ಶಿವರಾಜ್ ಪಾಟೀಲ್, ಬಸವರಾಜ ಧಡೆಸುಗೂರು, ರಾಜೂ ಗೌಡ, ಬೆಳ್ಳಿ ಪ್ರಕಾಶ್, ನಿರಂಜನ ಕುಮಾರ್ ಮುಂತಾಗಿ 15 ಕ್ಕೂ ಹೆಚ್ಚು ಬಿಜೆಪಿ ಶಾಸಕರ ನಿಯೋಗ ಇಂದು ಸಿಎಂ ನಿವಾಸಕ್ಕೆ ತೆರಳಿ, ಯೋಗೇಶ್ವರ್​ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ.

    ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಎಸ್​​ವೈ ಮುಂದೆ ಅಹವಾಲು ಮಂಡಿಸಿರುವ ಶಾಸಕರು, ಸಚಿವ ಯೋಗೇಶ್ವರ್ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಉಚ್ಚಾಟಿಸುವಂತೆ ಒತ್ತಾಯಿಸಿದ್ದಾರೆ. ‘ಇಂತಹವರ ವಿರುದ್ಧ ಕಠಿಣ ಕ್ರಮ ಆಗದಿದ್ರೆ ಬೇರೆಯವರಿಗೆ ತಪ್ಪು ಸಂದೇಶ ರವಾನೆ ಆಗುತ್ತೆ. ಪಕ್ಷದಿಂದ ಪಕ್ಷಕ್ಕೆ ಹಾರಿಬಂದವರ ಬಗ್ಗೆ ಮೌನವೇಕೆ? ನಿಮ್ಮ ಮೌನ ವಿರೋಧಿಗಳಿಗೆ ಬೇರೆ ರೀತಿಯ ಸಂದೇಶ ರವಾನೆ ಮಾಡುತ್ತೆ. ಸಿಪಿವೈ ಸಂಪುಟದಿಂದ ಕೈಬಿಡುವ ಬಗ್ಗೆ ವರಿಷ್ಠರ ಗಮನಕ್ಕೆ ತನ್ನಿ. ಕ್ಷೇತ್ರ ಮರೆತು ಕರೋನ ಸಮಯದಲ್ಲಿ ರಾಜಕೀಯ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿ’ ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ‘ಮನ್​​ ಕಿ ಬಾತ್’​​ನಲ್ಲಿ ಬೆಂಗಳೂರಿನ ರೈಲ್ವೆ ಪೈಲೆಟ್​ಗೆ ಮೆಚ್ಚುಗೆ

    ರೇಣುಕಾಚಾರ್ಯ ಹೇಳಿಕೆ: “ಚನ್ನಪಟ್ಟಣ ಸೋತು ಸುಣ್ಣ ಆಗಿಲ್ವಾ. ಮೆಗಾಸಿಟಿ ಹಗರಣ ಮಾಡಿಲ್ವಾ.. ಕಾಂಗ್ರೆಸ್​​ಗೆ ಹೋದ್ರು..ಬಿಜೆಪಿ ಬಂದ್ರು..ಸೈಕಲ್ ಏರಿದ್ರು… ನೀನು ಪಕ್ಷಾಂತರಿ. ಮೊದಲು ಪಕ್ಷ ಬಿಟ್ಟು ಹೊರಹೋಗು. ಅರಣ್ಯ ಸಚಿವನಾಗಿ ಲೂಟಿ ಹೊಡೆದಿದ್ದಾನೆ. ಲೂಟಿ ಹೊಡೆದು ಮಾತನಾಡ್ತಾನೆ. ಇವನಿಗೆ ನಾಚಿಕೆ ಆಗಬೇಕು. ಸಿ.ಪಿ.ಯೋಗೇಶ್ವರ್ ವಿರುದ್ಧ ತೊಡೆ ತಟ್ಟುತ್ತೇನೆ. ಬರಲಿ ನೋಡೋಣ” ಎಂದು ಶಾಸಕ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

    “ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ. ಇಂತಹ ಸಂದರ್ಭದಲ್ಲಿ ಸೇವಕರಾಗಿ ಕೆಲಸ ಮಾಡ್ಬೇಕು. ಇದು ಬಿಜೆಪಿ ಸರ್ಕಾರ, ಮೂರು ಪಕ್ಷದ ಸರ್ಕಾರ ಅಲ್ಲ. ಆ ರೀತಿ ಇದ್ರೆ ರಾಜೀನಾಮೆ ಕೊಟ್ಟು ಹೋಗಲಿ.‌ ಯಾರೋ ಒಬ್ಬಿಬ್ಬರು ಪಕ್ಷಕ್ಕೆ ಧಕ್ಕೆ ಮಾಡಿದ್ರೆ ಏನೂ ಆಗಲ್ಲ. ಪಕ್ಷದ ಹೈಕಮಾಂಡ್ ನಾಯಕರು, ಯಡಿಯೂರಪ್ಪನವರೇ ನಾಯಕರು ಅಂತ ಹೇಳಿದ್ದಾರೆ. ಯಾರೋ ಒಬ್ಬರು ಬೊಗಳುತ್ತಿದ್ದಾರೆ, ಬೊಗಳಿಕೊಂಡ್ಲೇ ಇರಲಿ. ದೆಹಲಿಗೆ ಹೋಗಿ ಗೇಟ್ ಮುಟ್ಟಿ ಬರ್ಬೇಕು ಅಷ್ಟೇ. ದೆಹಲಿಯಲ್ಲಿ ಛೀಮಾರಿ ಹಾಕಿದ್ದಾರೆ. ಯಾರೋ ಒಬ್ಬಿಬ್ಬರು ಆಟ ಆಡಿದ್ರೂ ಏನೂ ಪ್ರಯೋಜನ ಆಗಲ್ಲ. ನಾವು 18 ಜನ ಶಾಸಕರು ಪ್ರಾಮಾಣಿಕವಾಗಿ ಬಂದು ಹೇಳಿದ್ದೇವೆ” ಎಂದು ರೇಣುಕಾಚಾರ್ಯ ಸುದ್ದಿಗಾರರಿಗೆ ಹೇಳಿದರು.

    ಲಾಕ್​ಡೌನ್ ವಿಸ್ತರಣೆ : ಸಿಎಂ ಯಡಿಯೂರಪ್ಪ ಹೇಳಿದ್ದೇನು ?

    ರಕ್ಷಿತ್ ಶೆಟ್ಟಿ ಚಿತ್ರ ‘777ಚಾರ್ಲಿ’ಯ ಟೀಸರ್​ ಬಿಡುಗಡೆಗೆ ಡೇಟ್​ ಫಿಕ್ಸ್

    ಸೋಂಕು ಕಡಿಮೆ ಆಗ್ತಿದೆ, ಈಗ ಮೈಮರೆಯಬೇಡಿ : ಗೃಹ ಸಚಿವ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts