More

    ಮತಾಂತರಗೊಂಡವರಿಗೆ ಮೀಸಲಾತಿ ಬೇಡ: ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ

    ಕಾರ್ಕಳ: ನಾನಾ ಕಾರಣಗಳಿಂದಾಗಿ ಮತಾಂತರ ಹೊಂದಿರುವ ಬುಡಕಟ್ಟು ಸಮುದಾಯದವರು ಮೀಸಲಾತಿ ಪಡೆಯುತ್ತಿದ್ದಾರೆ. ಇದು ಸಮುದಾಯದವರ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಮತಾಂತರ ಹೊಂದಿದವರಿಗೆ ಸವಲತ್ತು ನೀಡಬಾರದೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.

    ಬಾಹುಬಲಿ ಪ್ರವಚನ ಮಂದಿರದಲ್ಲಿ ತಾಲೂಕು ಬಿಜೆಪಿ ಪ್ರಥಮ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
    ರಾಷ್ಟ್ರ ವ್ಯಾಪ್ತಿ ನೆಲೆಸಿರುವ ಸುಮಾರು 12 ಕೋಟಿ ಜನಸಂಖ್ಯೆ ಹೊಂದಿರುವ ಬುಡಕಟ್ಟು ಜನಾಂಗವನ್ನು ಗುರುತಿಸಿ ಅವರನ್ನು ಸಮಾಜಮುಖಿಗಳನ್ನಾಗಿರಿಸಬೇಕು. ಅದಕ್ಕಾಗಿ ಬಿಜೆಪಿ ದೇಶವ್ಯಾಪಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಅದನ್ನು ಕೇಂದ್ರ ಹಾಗೂ ರಾಜ್ಯಗಳು ಕಾರ್ಯಗತಗೊಳಿಸಲಿವೆ ಎಂದರು.
    ಜಿಲ್ಲಾ ಬಿಜೆಪಿ ಪ್ರಭಾರಿ ಉಮಾನಾಥ ಕೋಟ್ಯಾನ್ ಮಾತನಾಡಿ, ಯಾವುದೇ ವೃತ್ತಿ, ಹುದ್ದೆಯನ್ನು ಜವಾಬ್ದಾರಿಯಿಂದ ಪ್ರಾಮಾಣಿಕವಾಗಿ ನಿಭಾಯಿಸಿದಾಗ ಯಶಸ್ಸು ಕಾಣಬಹುದು ಎಂದರು.

    ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಪ್ರಸ್ತಾವಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಹಿರಿಯರಾದ ಬೋಳ ಪ್ರಭಾಕರ ಕಾಮತ್ ಶಾಂತಾರಾಮ ಸಿದ್ದಿ ಅವರನ್ನು ಸನ್ಮಾನಿಸಿದರು.
    ಪಕ್ಷದ ಮುಖಂಡರಾದ ಎಂ.ಕೆ.ವಿಜಯಕುಮಾರ್, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಮಂಡಲ ಪ್ರಭಾರಿ ಕುತ್ಯಾರು ನವೀನ್ ಶೆಟ್ಟಿ, ಸಹ ಪ್ರಭಾರಿ ರವಿ ಅಮೀನ್, ಜಿಲ್ಲಾ ಪದಾಧಿಕಾರಿಗಳಾದ ಮಣಿರಾಜ್ ಶೆಟ್ಟಿ, ರೇಷ್ಮಾ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಸಾಲ್ಯಾನ್, ಗೋಪಾಕೃಷ್ಣ ಹೇರಳೆ ಉಪಸ್ಥಿತರಿದ್ದರು. ಜ್ಯೋತಿ ರಮೇಶ್ ವಂದೇ ಮಾತರಂ ಹಾಡು ಹಾಡಿದರು. ರವೀಂದ್ರ ಕುಮಾರ್ ಸ್ವಾಗತಿಸಿದರು. ನವೀನ್ ನಾಯಕ್ ನಿರೂಪಿಸಿದರು. ಮಾಲಿನಿ ಜೆ. ಶೆಟ್ಟಿ ವಂದಿಸಿದರು.

    ವನವಾಸಿಗಳು ಅಪ್ಪಟ ಸನಾತನ ಧರ್ಮದ ಪ್ರತಿಪಾದಕರು. ಬುಡಕಟ್ಟು ಜನಾಂಗದವರಲ್ಲಿ ಜಾತಿ ವ್ಯವಸ್ಥೆಗಳಿಲ್ಲ. ಆದರೆ ಕಳೆದ 70 ವರ್ಷಗಳಿಂದ ಜಾತ್ಯತೀತ ವಿಚಾರದಲ್ಲಿ ವಿಷಬೀಜ ಬಿತ್ತಿ ರಾಜಕೀಯ ಮಾಡುತ್ತಾ ಬಂದಿರುವುದು ವಿಷಾದನೀಯ. ಬುಡಕಟ್ಟು ಸಮುದಾಯದವರನ್ನು ಒಂದೇ ನೆಲೆಗಟ್ಟಿನಲ್ಲಿ ಮೀಸಲಾತಿ ತಂದಾಗ ಒಳಮೀಸಲಾತಿ ವಿವಾದಕ್ಕೆ ತೆರೆಬೀಳಲಿದೆ.
    ಶಾಂತಾರಾಮ ಸಿದ್ದಿ, ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts