More

    ಸಭೆಯಲ್ಲಿ ವರಿಷ್ಠರ ಮೇಲೆ ಡಿ.ವಿ. ಸದಾನಂದಗೌಡ ಬೇಸರ


    ಬೆಂಗಳೂರು:
    ಹಿಂದೆ ಚುನಾವಣೆಗೆ ನಿಲ್ಲುವ ಆಸೆಯಿಂದಲೇ ವರಿಷ್ಠರ ಭೇಟಿಗೆ ಹೋಗಿದ್ದೆ. ಆದರೆ ಭೇಟಿಗೆ ಅವಕಾಶ ಕೊಡದೇ ನಿರ್ಲಕ್ಷ್ಯ ಮಾಡಿದ್ದರು. ಮುಂದೆಯೂ ಹಾಗೇ ನಡೆಸಿಕೊಳ್ಳಬಹುದೆಂಬ ಭಯ ಇದೆ. ಅದಕ್ಕಾಗಿಯೇ ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸಭೆಯಲ್ಲಿಯೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಎಲ್ಲರೂ ಮನೆಗೆ ಬಂದಿದ್ದು ಸಂತೋಷವಾಗಿದೆ. ಆದರೆ, ಈಗಾಗಲೇ ಯುವಕರು ಅಂತಾ ಹೇಳಿಕೊಂಡು, ಹಿರಿಯರನ್ನು ಮೂಲೆ ಗುಂಪು ಮಾಡ್ತಿದ್ದಾರೆ. ನೀವು ಈಶ್ವರಪ್ಪ ಕೂಡ ಇವಾಗ ರಾಜಕೀಯದಲ್ಲಿ ಇಲ್ಲ. ಹೀಗಿರುವಾಗ ನಾನು ಹೇಗೆ ಮುಂದೆ ನಡೆಯಲಿ? ಚುನಾವಣೆ ಸೋತ ನಂತರ ಹೈಕಮಾಂಡ್ ನಾಯಕರು ಬರ್ತಾನೆ ಇಲ್ಲ. ಅರುಣ್ ಸಿಂಗ್ ಕೂಡ ಸದ್ದೇ ಇಲ್ಲ ಎಂದು ಬೇಸರದಮಾತು ಮುಂದುವರಿಸಿದ್ದಾಗ ಖುದ್ದು ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಸಮಾಧಾನ ಮಾಡಿದರೆಂದು ತಿಳಿದುಬಂದಿದೆ.

    *ಸದಾನಂದಗೌಡರು ನಮ್ಮ ಪಕ್ಷದ ಹಿರಿಯನಾಯಕರು. ಅವರು ಚುನಾವಣೆ ನಿವೃತ್ತಿ ೋಷಿಸಿದ್ದ ಕಾರಣಕ್ಕಾಗಿ ಅವರ ಮನವೊಲಿಕೆಗಾಗಿ ಮನೆಗೆ ಹೋಗಿ ಮಾತನಾಡಿದ್ದೇವೆ. ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕ್ಷೇತ್ರಕ್ಕೆ ಬೇರೆ ನಾಯಕರು ಬರುವ ಬಗ್ಗೆ ಮಾಹಿತಿ ಇಲ್ಲ. ಆ ಬೆಳವಣಿಗೆಯೂ ಆಗಿಲ್ಲ.
    -ಡಾ.ಸಿ.ಎನ್.ಅಶ್ವತ್ಥನಾರಾಯಣಗೌಡ, ಮಾಜಿ ಸಚಿವರು.

    *ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ. ಆರ್.ಅಶೋಕ್ ನನ್ನ ಅಣ್ಣ. ಡಾ.ಅಶ್ವತ್ಥನಾರಾಯಣ್ ನನ್ನ ನೆಂಟ. ಎಲ್ಲರ ಜೊತೆಗೆ ಚೆನ್ನಾಗಿದ್ದೇನೆ. ನನಗಾಗಿ ಏನೂ ಪಕ್ಷದಲ್ಲಿ ಕೇಳಿದವನಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಹಾಗೆ ನಡೆದುಕೊಳ್ಳುವೆ. ಬಾರದು ಬಪ್ಪುದು, ಬಪ್ಪುದು ತಪ್ಪದು.
    -ಸಿ.ಟಿ.ರವಿ, ಮಾಜಿ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts