More

    ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ಬಿಜೆಪಿ ಶಾಸಕರ ಸಭೆ ಆರಂಭ; ತಡವಾಗಿ ಎಂಟ್ರಿ ಕೊಟ್ಟ ಯೋಗೇಶ್ವರ್!

    ಬೆಂಗಳೂರು : ರಾಜ್ಯ ಸರ್ಕಾರದಲ್ಲಿನ ಗೊಂದಲಗಳಿಗೆ ಪರಿಹಾರ ಸೂತ್ರದಾರ ಎಂದೇ ಬಿಂಬಿತರಾಗಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದರೂ, ಮೂರು ಪಕ್ಷಗಳ ಸರ್ಕಾರವಿದೆ‌ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಕಾಣಿಸುತ್ತಿರಲಿಲ್ಲ. ಆದರೆ, ಸಭೆ ಆರಂಭವಾಗಿ ಕೆಲಹೊತ್ತಿನ ನಂತರ ತಡವಾಗಿ ಯೋಗೇಶ್ವರ್ ಎಂಟ್ರಿ ಕೊಟ್ಟರು.

    ಬಿಜೆಪಿ ರಾಜ್ಯ ಕಚೇರಿಯಲ್ಲಿ ಏರ್ಪಡಿಸಿರುವ ಸಚಿವರ ಮಹತ್ವದ ಸಭೆಗೆ ಬಿಜೆಪಿ ರಾಜ್ಯ‌‌ ಉಸ್ತುವಾರಿ ಅರುಣ್ ಸಿಂಗ್ ಸಮಕ್ಷಮ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ. ಇಲಾಖೆ ಪ್ರಗತಿ, ಕಾರ್ಯಸಾಧನೆ, ಕರೊನಾ ನಿರ್ವಹಣೆ, ಸಮನ್ವಯತೆ ಹಾಗೂ ಸಚಿವರು ಮತ್ತು ಶಾಸಕರ ಮಧ್ಯೆ ವಿಶ್ವಾಸ ಇನ್ನಿತರ ವಿಷಯಗಳು ಚರ್ಚೆಯಾಗುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಆಸ್ಪತ್ರೆಯೊಳಗೆ ರೋಗಿ ನಾಪತ್ತೆಯಾದ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಗೆ ಕಾದಿತ್ತು ಶಾಕ್​!

    ಸಭೆಗೆ ಹಾಜರಾದವರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆ.ಸಿ.ನಾರಾಯಣ್ ಗೌಡ, ಜೆ.ಸಿ.ಮಾಧುಸ್ವಾಮಿ, ಎಸ್.ಸುರೇಶ್ ಕುಮಾರ್, ಬಿ.ಶ್ರೀರಾಮಲು, ಕೆ.ಎಸ್.ಈಶ್ವರಪ್ಪ, ಪ್ರಭು ಚವ್ಹಾಣ್, ಲಕ್ಷ್ಮಣ್ ಸವದಿ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಅಶ್ವತ್ಥ ನಾರಾಯಣ, ಜಗದೀಶ್ ಶೆಟ್ಟರ್, ಆರ್.ಶಂಕರ್, ಬಿ.ಸಿ.ಪಾಟೀಲ್, ಗೋವಿಂದ್ ಕಾರಜೋಳ್, ಎಸ್.ಟಿ.ಸೋಮಶೇಖರ್, ಆರ್ ಅಶೋಕ್, ಡಾ.ಕೆ.ಸುಧಾಕರ್, ಬಸವರಾಜ ಬೊಮ್ಮಯಿ, ಶಿವರಾಮ್ ಹೆಬ್ಬಾರ್, ಆನಂದ್ ಸಿಂಗ್, ಸಿ.ಸಿ.ಪಾಟೀಲ್, ಕೋಟ ಶ್ರೀನಿವಾಸ್ ಪೂಜಾರಿ, ಎಸ್.ಅಂಗಾರ, ಬೈರತಿ ಬಸವರಾಜ್, ಎಂ.ಟಿ.ಬಿ.ನಾಗರಾಜ್, ಕೆ.ಗೋಪಾಲಯ್ಯ, ಶ್ರೀಮಂತ ಪಾಟೀಲ್ ಮತ್ತು ಸಿ.ಪಿ.ಯೋಗೇಶ್ವರ್.

    ಹೈದರಾಬಾದ್​​ಗೆ ತೆರಳಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ನಂತರ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 5.15 ಕ್ಕೆ ವಿಸ್ತಾರ್ ವಿಮಾನದಲ್ಲಿ ಬಂದರು. ಅಲ್ಲಿಂದ ನೇರ ಸಭೆಯ ಸ್ಥಳ ತಲುಪಿದರು ಎನ್ನಲಾಗಿದೆ.

    ಆರ್​ಟಿಇ ಸೀಟು ಹಂಚಿಕೆ : ಜೂನ್ 22 ಕ್ಕೆ ಮೊದಲ ಲಾಟರಿ ಫಲಿತಾಂಶ

    ಕರೊನಾ ಮರೆತು ‘ಪೂಲ್ ಪಾರ್ಟಿ’! 61 ಜನರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts