More

    ಮಠಾಧೀಶರು ಬಿಎಸ್​ವೈ ಬೆನ್ನಿಗೆ ನಿಂತಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕ!

    ದಾವಣಗೆರೆ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಮಠಾಧೀಶರು ಬಿಎಸ್​ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಶಾಸಕ ಎಸ್​.ಎ.ರವೀಂದ್ರನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರ ಶಾಸಕ ಎಸ್.ಎ.ರವೀಂದ್ರನಾಥ್ ಅಸಮಾಧಾನ ಹೊರಹಾಕಿದ್ದಾರೆ. ಮಠಾಧೀಶರು ರಾಜಕೀಯ ಮಾಡಬಾರಬಾರದು. ವೀರಶೈವರು, ಲಿಂಗಾಯತರು ಎಲ್ಲರೂ ಅವರ ಭಕ್ತರೇ. ನಾನು ವೀರಶೈವ ಲಿಂಗಾಯತನೆ ಹಾಗೆಯೇ ಜಗದೀಶ ಶೆಟ್ಟರ್, ನಿರಾಣಿ, ಉಮೇಶ್ ಕತ್ತಿ ಎಲ್ಲರೂ ಲಿಂಗಾಯತರೇ. ಒಬ್ಬರ ಪರವಾಗಿಯೇ ಎಲ್ಲರೂ ಈ ರೀತಿ ಮಾತನಾಡಬಾರದು ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್ ಬೆಂಬಲಿಸಿರುವ ಬಗ್ಗೆಯೂ ಮಾತನಾಡಿರುವ ಅವರು, “ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಈ ಮಾತನ್ನು ಹೇಳಲಿ ಒಪ್ಪಿಕೊಳ್ಳೇನೆ. ಕಾಂಗ್ರೆಸ್‌ನಲ್ಲಿ ಇದ್ದು, ವೀರಶೈವ ಅಂದ್ರೆ ಹೇಗೆ? ಹಿಂದೆ ಬಿಎಸ್‌ವೈ ಅಧಿಕಾರಕ್ಕೆ ಬರೋ ಮುಂಚೆ ಬೇರೆಯಾಗಿದ್ರಾ? ಯಡಿಯೂರಪ್ಪ ಅಧಿಕಾರ ಬರುವ ಮುಂಚೆ ಸಪೋರ್ಟ್ ಮಾಡಬೇಕಿತ್ತು. ಇಂತಹ ಸಂದರ್ಭದಲ್ಲಿ ಈ ರೀತಿ ಹೇಳಿಕೆ ಕೊಡಬಾರದು. ಬೇರೆ ಪಕ್ಷದಲ್ಲಿ ಇದ್ದು ಸಪೋರ್ಟ್ ಮಾಡ್ತೀವಿ ಅನ್ನೋದು ನ್ಯಾಯಯುತವಲ್ಲ” ಎಂದು ನುಡಿದಿದ್ದಾರೆ.

    ಪಕ್ಷದ ವರಿಷ್ಠರ ತೀರ್ಮಾನ ಒಪ್ಪಿಕೊಳ್ಳುತ್ತೇನೆ ಎಂದು ಸಿಎಂ ಬಿಎಸ್‌ವೈ ‌ಹೇಳಿದ್ದಾರೆ. ಹಾಗೆಯೇ ನಾನೂ ವರಿಷ್ಠರ ತೀರ್ಮಾನ ಒಪ್ಪಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

    ನನ್ನ ಪರವಾಗಿ ಯಾರೂ ಹೇಳಿಕೆ ಕೊಡಬೇಡಿ, ಪ್ರತಿಭಟನೆ ಮಾಡಬೇಡಿ; ಬಿಎಸ್​ವೈ ಮನವಿ

    ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

    ಪಿಯುಸಿ ಆಯ್ತು ಮುಂದೇನು?: ವಿವಿಧ ಕೋರ್ಸ್​ಗಳು, ಉದ್ಯೋಗಾವಕಾಶಗಳ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts