More

    1 : 4 ಅನುಪಾತದ ಪ್ರತೀಕಾರ ತಗೊಳ್ತೇವೆ- ಟಿಎಂಸಿಗೆ ಬಿಜೆಪಿ ಕಡಕ್ ವಾರ್ನಿಂಗ್ !

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಸಮರ ತೀವ್ರಗೊಂಡಿದೆ. ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಇದೇ ರೀತಿ ಇನ್ನೂ ಮುಂದುವರಿಸಿದರೆ, ನಿಮ್ಮದೇ ಶೈಲಿಯಲ್ಲಿ ನಾವು ಪ್ರತೀಕಾರ ತೀರಿಸುತ್ತೇವೆ ಎಂದು ಬಿಜೆಪಿ ನಾಯಕರು ಟಿಎಂಸಿಗೆ ಎಚ್ಚರಿಕೆ ನೀಡಿದ್ದಾರೆ.

    ಮುರ್ಷಿದಾಬಾದ್​ ಜಿಲ್ಲೆಯಲ್ಲಿ ಬಿಜೆಪಿ ನಾಯಕರಾದ ಸುದೀಪ್ತೋ ಚಟರ್ಜಿ ಮತ್ತು ತಾಪಸ್ ಘೋಷ್​ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಬಿಜೆಪಿ ನಾಯಕರಿಂದ ಈ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಭಾನುವಾರ ಪಕ್ಷದ ಕಾರ್ಯಾಗಾರ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಅವರ ಕಾರಿನ ಮೇಲೆ ದೋಮ್​ಕೋಲ್ ಎಂಬಲ್ಲಿ ಬಾಂಬ್ ದಾಳಿ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಇಬ್ಬರು ನಾಯಕರು ಬಚಾವ್ ಆಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿಸ್ವಪ್ರಿಯೋ ರಾಯ್​ ಚೌಧರಿ ತಿಳಿಸಿದ್ದಾರೆ.

    ಇದನ್ನೂ ಓದಿ: Web Exclusive| ‘ಭಾನುವಾರ ಮಾರುಕಟ್ಟೆ’ ನನೆಗುದಿಗೆ

    ಕೋಲ್ಕತದ ತಿತಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನೋರ್ವ ನಾಯಕ ಮನೀಶ್ ಶುಕ್ಲಾ ಅವರನ್ನು ಅಕ್ಟೋಬರ್ 4ರಂದು ಸಾರ್ವಜನಿಕವಾಗಿಯೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಇದು ಕೂಡ ಆಡಳಿತಾರೂಢ ಟಿಎಂಸಿಯ ಪಿತೂರಿಯೇ ಆಗಿದೆ ಎಂದು ಆರೋಪಿಸಿದ ಅವರು, ಪ್ರತಿನಿತ್ಯ ನಮ್ಮ ಕಾರ್ಯಕರ್ತರು, ನಾಯಕರು ದಾಳಿಗೆ ಒಳಗಾಗುತ್ತಿದ್ದಾರೆ. ಕೆಲವರು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳ ಬಗ್ಗೆ ಸರಿಯಾದ ತನಿಖೆ, ವಿಚಾರಣೆ ನಡೆಯುತ್ತಿಲ್ಲ. ಮೊದಲು ನಾವು ಪ್ರತಿಭಟಿಸುತ್ತೇವೆ. ನಂತರ ಪ್ರತಿರೋಧ ತೋರುತ್ತೇವೆ. ಅನಿವಾರ್ಯವಾದರೆ ಪ್ರತೀಕಾರದ ದಾಳಿ ನಡೆಸುವುದಕ್ಕೂ ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಸ್ಥಾನದ ಬಳಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ತಡೆ

    ಕೇರಳದಲ್ಲಿ ನೋಡಿದರೆ ಅಲ್ಲೂ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಮಾರ್ಕ್ಸಿಸ್ಟ್​ಗಳಿಂದ ನಿರಂತರ ಹಲ್ಲೆ ನಡೆಯುತ್ತಿತ್ತು. ಪ್ರಜಾಸತ್ತಾತ್ಮಕ ರೀತಿಯ ಪ್ರತಿಭಟನೆ, ಪ್ರತಿರೋಧಗಳು ವಿಫಲವಾದವು ಅಲ್ಲಿ. ಕೊನೆಗೆ ನಮ್ಮ ಆರೆಸ್ಸೆಸ್​-ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆದರೆ, ಅವರ ಪೈಕಿ ನಾಲ್ವರ ಮೇಲೆ ಹಲ್ಲೆ ಆಗಿರುತ್ತಿತ್ತು. ಇಂತಹ ಪ್ರತೀಕಾರದ ದಾಳಿಯೂ ನಮಗೆ ಗೊತ್ತು. ಇದೇ ಫಾರ್ಮುಲಾವನ್ನು ನಾವು ಇಲ್ಲಿಯೂ ಅನುಸರಿಸಬೇಕಾದೀತು ಎಂದು ಚೌಧರಿ ಟಿಎಂಸಿ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. (ಏಜೆನ್ಸೀಸ್)

    ವರ್ಚುವಲ್ ನ್ಯಾಯಾಂಗ ವ್ಯವಸ್ಥೆ ಅನಿವಾರ್ಯ: ಸಜ್ಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts