More

    ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಲಿ

    ಯಲಬುರ್ಗಾ: ಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣಮಾಡುತ್ತಿದ್ದ ನಾಟಕಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಬಿಜೆಪಿ ಮುಖಂಡ ಅಯ್ಯನಗೌಡ ಕೆಂಚಮ್ಮನವರ್ ಹೇಳಿದರು.

    ತಾಲೂಕಿನ ನರಸಾಪುರ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ನಿಮಿತ್ತ ಅಮರ ಪಂಚಾಕ್ಷರಿ ಗವಾಯಿ ನಾಟ್ಯ ಸಂಘ ಏರ್ಪಡಿಸಿದ್ದ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಆಧುನಿಕ ಯುಗದಲ್ಲಿ ಅತಿಯಾದ ಸಾಮಾಜಿಕ ಜಾಲತಾಣ ಬಳಕೆಯಿಂದ ಕಲೆ, ಸಾಹಿತ್ಯ ಮತ್ತು ರಂಗಭೂಮಿ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ನಾಟಕ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.

    ವಕೀಲ ಮಲ್ಲನಗೌಡ ಪಾಟೀಲ್, ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಮಾತನಾಡಿದರು. ಮಕ್ಕಳ್ಳಿಯ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಪಂ ಸದಸ್ಯರಾದ ಆದಿಬಸಪ್ಪ ಮಾಲಿ ಪಾಟೀಲ್, ಗುರಪ್ಪ ರಾಥೋಡ, ಪ್ರಮುಖರಾದ ಮರೇಗೌಡ ಮಾಲಿ ಪಾಟೀಲ್, ಶಿವಪ್ಪ ಕೊಪ್ಪದ, ಮುತ್ತಣ್ಣ ಮುರುಡಿ, ಈಶಪ್ಪ ಬಡಿಗೇರ, ಬಸಪ್ಪ ಕೋಳೂರು, ರಮೇಶ ಮಾಲಿ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts