More

    ಸಿಟಿ ರವಿಗೆ ಸಂಕಟ ತಂದಿಟ್ಟ ಬಿಜೆಪಿ ಹೈಕಮಾಂಡ್​ ಹೊಸ ಜವಾಬ್ದಾರಿ..!

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಹೈಕಮಾಂಡ್​ ನೀಡಿರುವ ಹೊಸ ಜವಾಬ್ದಾರಿಯಿಂದ ಹೊಸ ಸಂಕಟ ಎದುರಾಗಿದೆ.

    ಬಿಜೆಪಿ ಹೈಕಮಾಂಡ್​ ಮೂರು ರಾಜ್ಯಗಳ ಉಸ್ತುವಾರಿಯ ಜವಾಬ್ದಾರಿಯನ್ನು ಸಿ.ಟಿ. ರವಿಗೆ ನೀಡಿದೆ. ಗೋವಾ, ಮಹಾರಾಷ್ಟ್ರ ಹಾಗೂ ತಮಿಳುನಾಡು ಬಿಜೆಪಿ ಉಸ್ತುವಾರಿಯಾಗಿ ಸಿ.ಟಿ.ರವಿ ಅವರನ್ನು ನೇಮಕ ಮಾಡಿದೆ. ಆದರೆ, ಈ ಹೊಸ ಜವಾಬ್ದಾರಿ ಸಿ.ಟಿ.ರವಿಗೆ ಹೊಸ ಸಂಕಟ ತಂದಿದೆ.

    ಇದನ್ನೂ ಓದಿ: ಕೆಟ್ಟುಹೋದ ಮೊಬೈಲ್‌ ಬದಲಿಸಿಕೊಟ್ಟಿಲ್ಲವೆಂದು ನೊಂದು ಬೆಂಕಿಹಚ್ಚಿಕೊಂಡ ವ್ಯಕ್ತಿ!

    ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರದೊಂದಿಗೆ ರಾಜ್ಯದ ಜಲ ಮತ್ತು ಗಡಿ ವಿವಾದ ಇರುವ ಹಿನ್ನೆಲೆಯಲ್ಲಿ ಪರ-ವಿರೋಧ ಏನೇ ಮಾತನಾಡಿದರೂ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇರುವುದರಿಂದ ಹೊಸ ಜವಾಬ್ದಾರಿ ತಲೆನೋವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.

    ಮಹಾದಾಯಿ, ಕಾವೇರಿ ಹಾಗೂ ಬೆಳಗಾವಿ ಗಡಿ ವಿವಾದದಿಂದ ಸಿ.ಟಿ.ರವಿಗೆ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ. ಈ ವಿವಾದದ ಬಗ್ಗೆ ಏನೇ ನಿಲುವು ವ್ಯಕ್ತಪಡಿಸಿದ್ರು ರವಿಗೆ ಇಕ್ಕಟ್ಟು ಖಂಡಿತ. ಮಹಾದಾಯಿ ಬಗ್ಗೆ ರಾಜ್ಯದ ಪರವಾಗಿ ಮಾತನಾಡಿದ್ರೆ ಗೋವಾದಲ್ಲಿ ಆಕ್ರೋಶ ಎದುರಿಸಬೇಕಾಗುತ್ತೆ. ಇನ್ನು ಗೋವಾ ಪರ ನಿಲುವು ತಾಳಿದ್ರೆ ರಾಜ್ಯದಲ್ಲಿ ಆಕ್ರೋಶ ಎದುರಿಸಬೇಕಾಗುತ್ತೆ. ಇನ್ನು ಮಹಾರಾಷ್ಟ್ರ ಗಡಿ ಮತ್ತು ತಮಿಳುನಾಡಿನಲ್ಲಿ ಕಾವೇರಿ ವಿಚಾರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಸಿ.ಟಿ.ರವಿಯವರು ಇದನ್ನು ಹೇಗೆ ನಿಭಾಯಿಸುತ್ತಾರೆಂಬುದು ಕುತೂಹಲದ ವಿಚಾರವಾಗಿದೆ. (ದಿಗ್ವಿಜಯ ನ್ಯೂಸ್​)

    VIDEO: ಲೈವ್​ ರಿಪೋರ್ಟಿಂಗ್​ ಮಾಡುವಾಗಲೇ ಕುಸಿದ ಸೇತುವೆ; ಪತ್ರಕರ್ತೆ ಬಚಾವಾಗಿದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts