ನವದೆಹಲಿ: ಇತ್ತೀಚೆಗೆ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಮತ್ತೆ ಟ್ವೀಟ್ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.
ಬಿಜೆಪಿ ಮೂರು ವಿಚಾರಗಳಲ್ಲಿ ಸುಳ್ಳುಗಳನ್ನೇ ಸತ್ಯವೆಂದು ನಂಬಿಸುತ್ತಿದೆ. ಕೊವಿಡ್ 19 ಸಾಂಕ್ರಾಮಿಕ ರೋಗ, ಭಾರತದ ಆರ್ಥಿಕತೆ ಮತ್ತು ಭಾರತ-ಚೀನಾ ಗಡಿ ಬಿಕ್ಕಟ್ಟು ಈ ಮೂರು ವಿಷಯಗಳಲ್ಲಿ ಕೇಂದ್ರ ಸರ್ಕಾರ ಸುಳ್ಳುಗಳನ್ನೇ ಸಾಂಸ್ಥಿಕಗೊಳಿಸಿ, ಅದನ್ನೇ ಜನರ ತಲೆಯಲ್ಲಿ ತುಂಬುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೊವಿಡ್-19 ಟೆಸ್ಟ್ಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಹಾಗೂ ಸಾವುಗಳ ಬಗ್ಗೆ ತಪ್ಪಾಗಿ ವರದಿ ನೀಡಲಾಗುತ್ತಿದೆ. ಇನ್ನು ಆರ್ಥಿಕತೆ ವಿಚಾರಕ್ಕೆ ಬಂದರೆ ಕೇಂದ್ರ ಸರ್ಕಾರ ಹೊಸ ಲೆಕ್ಕಾಚಾರ ವಿಧಾನವನ್ನೇ ಅಳವಡಿಸಿಕೊಂಡು, ಜಿಡಿಪಿ ಬಗ್ಗೆ ಸುಳ್ಳು ಹೇಳುತ್ತಿದೆ. ಹಾಗೇ ಮೂರನೇಯದಾಗಿ ಮಾಧ್ಯಮಗಳನ್ನು ಬೆದರಿಸುವ ಮೂಲಕ ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಪಟ್ಟ ವಾಸ್ತವವನ್ನು ಮುಚ್ಚಿಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
ರಾಜಸ್ಥಾನ ರಾಜಕೀಯ ಆಖಾಡಕ್ಕಿಳಿದ ಗೃಹ ಸಚಿವಾಲಯ; ಫೋನ್ ಟ್ಯಾಪಿಂಗ್ ವಿವರಣೆ ನೀಡಲು ಸೂಚನೆ