More

    ಬಿಜೆಪಿಯವರು ನಮ್ಮ ಐಡಿಯಾ ಕಾಪಿ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

    ಬೆಂಗಳೂರು: ಆನ್‌ಲೈನ್ ಸಮಾರಂಭ ನಡೆಸುವ ನಮ್ಮ ಐಡಿಯಾವನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

    ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅಧಿಕಾರ ಸ್ವೀಕರಿಸುವ ಸಮಾರಂಭವನ್ನು ಹತ್ತೂವರೆ ಸಾವಿರ ಕಡೆ ಲೈವ್ ಆಗಿ ತೋರಿಸುವ ಯೋಜನೆಯನ್ನು ನಾವು ರೂಪಿಸಿದ್ದೆವು. ಅದನ್ನೇ ಕಾಪಿ ಮಾಡಿರುವ ಬಿಜೆಪಿಯವರು ಬಿಹಾರದಲ್ಲಿ ಎಲ್ಇಡಿ ಬಳಸಿ 40 ಲಕ್ಷ ಜನರನ್ನು ಸೇರಿಸಿ ಆನ್‌ಲೈನ್ ಸಭೆ ಮಾಡಿದ್ದಾರೆ. ದೇಶದಲ್ಲಿ ಅವರಿಗೆ ಒಂದು ಕಾನೂನು ನಮಗೊಂದು ಕಾನೂನು ಇದೆಯೇ?’’ ಎಂದು ಪ್ರಶ್ನಿಸಿದರು.

    ಮೊದಲು ಮೇ 31, ನಂತರ ಜೂ. 7ರಂದು ನಮ್ಮ ಕಾರ‌್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಿದ್ದೆವು. ಅನುಮತಿ ಕೊಡಲಿಲ್ಲ. ನಂತರ ಸಿಎಂ, ಸಿಎಸ್, ಪೊಲೀಸ್ ಆಯುಕ್ತರ ಜತೆ ಖುದ್ದು ಮಾತನಾಡಿ ಮೌಖಿಕವಾಗಿ ಅನುಮತಿ ಪಡೆದು ಜೂ. 14ರ ದಿನಾಂಕವನ್ನು ಕಾರ್ಯಕ್ರಮ ಆಯ್ಕೆ ಮಾಡಿದ್ದೆವು. ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಕೇಂದ್ರದ ಮಾರ್ಗಸೂಚಿ ಪ್ರಕಾರ ಅವಕಾಶ ಇಲ್ಲ ಅಂತ ಸಿಎಂ ಅಧಿಕಾರಿಗಳಿಂದ ಪತ್ರ ಬರೆಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹೆದರಿ ಯಡಿಯೂರಪ್ಪ ಈ ರೀತಿ ಮಾಡಿದ್ದಾರೆ ಎಂದು ದೂರಿದರು.

    ನಾನೇನು ಕದ್ದುಮುಚ್ಚಿ ಕಾರ್ಯಕ್ರಮ ಮಾಡುತ್ತಿಲ್ಲ. ಅರಮನೆ ಮೈದಾನದಲ್ಲೂ ಮಾಡುತ್ತಿಲ್ಲ. ನೂರು ಶಾಸಕರು, ಐವತ್ತು ಹಿರಿಯರು ಸೇರಿ ಕೆಪಿಸಿಸಿ ಮುಂದೆ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದೆವು. ಈಗಾಗಲೇ ಯಾರೆಲ್ಲ ಸಚಿವರು ಹೇಗೆ ಕಾರ್ಯಕ್ರಮ ನಡೆಸಿದರು ಎಂದು ಗೊತ್ತಿದೆ, ಅವರ ಬಗ್ಗೆ ಮಾತಾಡಲ್ಲ, ಅವರೆಲ್ಲ ಅಣ್ಣಂದಿರು ಎಂದು ಸಚಿವ ಶ್ರೀರಾಮುಲು ಅವರ ಹೆಸರು ಹೇಳದೆ ವ್ಯಂಗ್ಯವಾಡಿದರು.

    ಕೆಪಿಸಿಸಿ ಅಧ್ಯಕ್ಷನಾಗಲು ಹಿಂದಿನ ಪದ್ಧತಿಯಂತೆ ಹಿರಿಯರ ಆಶೀರ್ವಾದ ಪಡೆದು ಪಕ್ಷದ ಧ್ವಜ ಸ್ವೀಕರಿಸಬೇಕಿದೆ. ಮತ್ತೆ ಸಿಎಂ, ಸಿಎಸ್‌ಗೆ ಪತ್ರ ಬರೆದು ಅನುಮತಿ ಕೇಳುತ್ತೇನೆ. ಕಾನೂನಿಗೆ ಗೌರವ ಕೊಡುತ್ತೇನೆ ಎಂದು ಹೇಳಿದರು.

    ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರಕ್ಕೆ ಅಡ್ಡಿ ಮೇಲೆ ಅಡ್ಡಿ!

    ದೇವೇಗೌಡರ ಮನೆಯಲ್ಲಿ ಡಿ.ಕೆ. ಶಿವಕುಮಾರ್ ಭೋಜನ!

    ಮೇ ಮೂರರವರೆಗೆ ಧಮ್ ಕಟ್ಕೊಂಡು ಕೂರ್ತೀವಿ ಎಂದ ಡಿ.ಕೆ. ಶಿವಕುಮಾರ್

    ಪಕ್ಷ ಸಂಘಟನೆಗೆ ಹೊಸ ರೂಪ: ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಮತ

    ನನ್ಗೆ ತೊಂದ್ರೆ ಕೊಡೋದೇ ಕೆಲವ್ರಿಗೆ ಖುಷಿ ಎಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts