More

    ಮೇ ಮೂರರವರೆಗೆ ಧಮ್ ಕಟ್ಕೊಂಡು ಕೂರ್ತೀವಿ ಎಂದ ಡಿ.ಕೆ. ಶಿವಕುಮಾರ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ನೇ ತಾರೀಖಿನವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿರುವುದರಿಂದ ಅಲ್ಲಿಯವರೆಗೂ ನಾವು ಧಮ್ ಕಟ್ಟಿಕೊಡು ಇರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ‘‘ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನಾವು ಕೊಡುತ್ತೇವೆ. ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಸರ್ಕಾರ ಪಾರದರ್ಶಕವಾಗಿ ಇರಬೇಕು. ಕೆಲವೆಡೆ ಸರ್ಕಾರ ಅಗತ್ಯ ವಸ್ತುಗಳ ಹಂಚಿಕೆಯಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ. ಸ್ವಪಕ್ಷದವರಿಗೆ ಒಂದು, ಬೇರೆ ಪಕ್ಷದವರಿಗೆ ಒಂದು ಮಾಡುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ನಾವು ಸಿಎಂ ಅವರನ್ನು ಭೇಟಿ ಮಾಡಿ ನಮ್ಮ ದೂರು ಕೊಡುತ್ತೇವೆ’’ ಎಂದು ಸುದ್ದಿಗಾರರಿಗೆ ತಿಳಿಸಿದರು.

    ‘‘ದೇಶದ ವಿವಿಧೆಡೆಯಿಂದ ಗುಜರಾತಿ ವಲಸೆ ಕಾರ್ಮಿಕರನ್ನು ಗುಜರಾತಿನ ಮುಖ್ಯಮಂತ್ರಿ ತಮ್ಮ ರಾಜ್ಯಕ್ಕೆ ಕರೆಸಿಕೊಂಡ ರೀತಿಯಲ್ಲಿ ನಮ್ಮ ರಾಜ್ಯದ ವಲಸೆ ಕಾರ್ಮಿಕರನ್ನೂ ವಿವಿಧ ರಾಜ್ಯಗಳಿಂದ ಸುರಕ್ಷಿತವಾಗಿ ಕರೆಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು. ರಾಜ್ಯ ಸರ್ಕಾರ ವಲಸೆ ಕಾರ್ಮಿಕರ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲ. ಗಡಿ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಕಾರುಗಳಲ್ಲೇ ಮಲಗುತ್ತಿದ್ದಾರೆ. ನಮಗೆ ತುಂಬಾ ದೂರುಗಳು ಬರುತ್ತಿವೆ. ಅವರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು’’ ಎಂದು ಆಗ್ರಹಿಸಿದರು.

    ‘‘ರಾಜ್ಯದಲ್ಲಿ ಕೆಲ ಬಿಜೆಪಿ ನಾಯಕರು ಮನಸೋಇಚ್ಛೆ ಹೇಳಿಕೆ ಕೊಡುತ್ತಿದ್ದಾರೆ. ಗುಂಡು ಹಾರಿಸಿ ಎನ್ನುತ್ತಿದ್ದಾರೆ. ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಅವರ ವಿರುದ್ಧ ಯಾಕೆ ದೂರು ದಾಖಲು ಮಾಡಿಕೊಂಡಿಲ್ಲ’’ ಎಂದು ಪ್ರಶ್ನಿಸಿದರು.

    ಪರೀಕ್ಷೆಗಳ ಮರು ನಿಗದಿಗೆ ಮುಂದಾದ ಯುಪಿಎಸ್​ಸಿ, ಮೇ 3ರ ನಂತರ ಶುರುವಾಗಲಿದೆ ಸಂದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts