More

    ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ ಜಯಂತಿ ಆಚರಣೆ

    ಗದಗ: ಸಮಾಜಿಕ ಸಮಾನತೆಗಾಗಿ, ಜನರ ಹಕ್ಕುಗಳ ಪಾಲನೆಗಾಗಿ ಸಂವಿಧಾನವನ್ನು ರಚಸಿದ ಮಾಹಾನ್​ ಮಾನವತಾವಾದಿ ಬಾಬಾಸಹೇಬ ಅಂಬೇಡ್ಕರ ಅವರ ದೂರ ದೃಷ್ಠಿಯಿಂದ ರಚಿಸಿದ ಸಂವಿಧಾನದಿಂದ ಆಡಿಯಲ್ಲಿ ಇಂದು ನಾವೇಲ್ಲರು ಸುರತ ಹಾಗೂ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯಿಂದ ಬದುಕುಲು ಸಾಧ್ಯವಗಿದೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
    ನಗರದ ಜಿಲ್ಲಾಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಬಾಬಾಸಹೇಬ ಅಂಬೇಡ್ಕರ ಅವರದು ಅತಿ ಸಂರ್ಷದ ಜೀವನ. ಹೆಜ್ಜೆ ಹೆಜ್ಜೆಗೂ ಅವರು ದಿಟ್ಟತನದಿಂದ ಸಮಾಜದ ಸವಾಲುಗಳನ್ನು ಎದುರುಸಿ ತಮ್ಮ ಬ್ಯಾರಿಷ್ಟರ್​ ಪದವಿ ಮುಗಿಸಿ ದೇಶ ಮತ್ತು ಜನರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. 4 ವಿವಿಧ ಸ್ನಾತಕೋತ್ತರ ಪದವಿಗಳನ್ನು ಪಡೆದ ಏಕೈಕ ವ್ಯಕ್ತಿ ಬಾಬಾಸಾಹೇಬ ಅಂಬೇಡ್ಕರ ಆಗಿದ್ದರು. ಅಂಬೇಡ್ಕರ ಅವರು ಸರಸ್ವತಿ ಪುತ್ರ ಅನ್ನಿಸಿಕೊಂಡಿದ್ದರು ಎಂದು ಸಿ.ಸಿ. ಪಾಟೀಲ ಹೇಳಿದರು.
    ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಮಾತನಾಡಿ, ಬಾಬಾಸಹೇಬ ಅಂಬೇಡ್ಕರ ಅವರ ಸಂರ್ಷದ ಜೀವನ ಇಂದಿನ ಯುವಕರಿಗೆ ಪ್ರೇರಣೆ. ಎಂತಹ ಕಷ್ಟ ಬಂದರು ತಮ್ಮ ನಿರ್ಧಾರ ಬದಲಾಯಿಸದೇ ತನ್ನ ಗುರಿಯನ್ನು ಹೇಗೆ ಸಾಧಿಸಬೇಕು ಎಂದು ಅವರ ಜೀವನ ಚರಿತ್ರೆ ಮಾರ್ಗಸೂಚಿಯಾಗಿದೆ ಎಂದು ಹೇಳಿದರು.
    ರಾಜು ಕುರಡಗಿ, ಎಂ. ಎಸ್​. ಹಿರೇಮಠ, ನಿರ್ಮಾಲಾ ಕೊಳ್ಳಿ, ಉಷಾ ದಾಸರ್​, ಸುನಂದಾ ಬಾಕಳೆ, ಎಂ.ಎಂ.ಹಿರೇಮಠ, ದತ್ತಣ್ಣ ಜೊಶಿ, ರಾಜು ಹೊಂಗಲ, ಶ್ರಿನಿವಾಸ ಹುಬ್ಬಳ್ಳಿ, ಕೆ.ಪಿ. ಕೋಟಿಗೌಡರ, ಶಶೀದರ ದಿಂಡೂರ, ಕಾಂತಿಲಾಲ ಬನ್ಸಾಲಿ, ತೋಟುಸಾ ಬಾಂಡಗೆ, ಬಿ. ಎಚ್​. ಲದ್ವಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts