More

    ಬಿಜೆಪಿ ಸಂಸ್ಥಾಪನಾ ದಿನ; ಕಾರ್ಯಕರ್ತರಿಗೆ ಐದು ಅಂಶಗಳ ಸಂದೇಶ ನೀಡಿದ ಪ್ರಧಾನಿ ಮೋದಿ…

    ನವದೆಹಲಿ: ಇಂದು ಬಿಜೆಪಿ ಪಕ್ಷದ 40ನೇ ಸಂಸ್ಥಾಪನಾ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಐದು ಅಂಶಗಳ ಸಂದೇಶವನ್ನು ನೀಡಿದ್ದಾರೆ.

    ಕರೊನಾ ವೈರಸ್​ನಿಂದ ದೇಶವನ್ನು ಪಾರು ಮಾಡುವುದೇ ಆದ್ಯತೆ ಆಗಿರಬೇಕು ಎಂದು ಬೆಳಗ್ಗೆ ನರೇಂದ್ರ ಮೋದಿಯವರು ಹೇಳಿದ್ದಾರೆ. ಅದಕ್ಕೂ ಮೊದಲು ಟ್ವೀಟ್​ ಮಾಡಿರುವ ಅವರು, ಪಕ್ಷದ ಕಾರ್ಯಕರ್ತರಿಗೆ ಐದು ಸಂದೇಶಗಳನ್ನು ನೀಡಿದ್ದು, ಅವು ಹೀಗಿವೆ

    ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ. ಬಿಜೆಪಿ ಕಾರ್ಯಕರ್ತರಿಗೆ ಐದು ಅಂಶಗಳ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ.

    1. ಸಂಸ್ಥಾಪನಾ ದಿನವಾದ ಇಂದು ಬಿಜೆಪಿಯ ಕಾರ್ಯಕರ್ತರು ಒಂದು ಹೊತ್ತಿನ ಊಟ ಬಿಡಬೇಕು. ಈ ಮೂಲಕ ಲಾಕ್​ಡೌನ್​ ಸಂದರ್ಭದಲ್ಲಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರ ಜತೆ ನಾವಿದ್ದೇವೆ ಎಂಬ ಒಗ್ಗಟ್ಟಿನ ಸಂದೇಶ ಸಾರಬೇಕು. ಹಾಗೇ ಬಿಜೆಪಿ ಕಾರ್ಯಕರ್ತರು ಬಡ ಜನರಿಗೆ ಪಡಿತರ ತಲುಪಿಸುವ ಅವಿರತ ಕೆಲಸ ಮಾಡಬೇಕಿದೆ.
    2. ಬಡ ಜನರಿಗೆ ಹಾಗೂ ಅಗತ್ಯವಿರುವವರಿಗೆ ಮಾಸ್ಕ್ ವಿತರಿಸುವುದು.
    3. ಕೊರೊನಾ ವಿರುದ್ದ ಅವಿರತ ಹೋರಾಡುತ್ತಿರುವ ವೈದ್ಯರು, ನರ್ಸ್​​​ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೊಲೀಸರು, ಅಗತ್ಯ ಸರಕು ಸೇವೆ ಒದಗಿಸುತ್ತಿರುವರಿಗೆ ಕೃತಜ್ಞತೆ ಸಲ್ಲಿಸುವುದು.
    4. ಕೊರೊನಾ ಬಗ್ಗೆ ಸಮಗ್ರ ಮಾಹಿತಿ ನೀಡುವ ಆರೋಗ್ಯ ಸೇತು ಮೊಬೈಲ್ ಆಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು ಮತ್ತು ಸುತ್ತಲಿನ ಜನರ ಮೊಬೈಲ್​ಗೂ ಮಾಡಿಸಬೇಕು.
    5. ಕೊರೊನಾ ವಿರುದ್ದ ಹೋರಾಡಲು ಪ್ರಧಾನಿ ಕೇರ್ ಫಂಡ್ ಗೆ ದೇಣಿಗೆ ನೀಡಲು ಜನರಿಗೆ ಮಾಹಿತಿ ತಲುಪಿಸಲು ಸಲಹೆ. ಓರ್ವ ಕಾರ್ಯಕರ್ತ ಕನಿಷ್ಠ 40 ಜನರನ್ನು ಪ್ರೇರೇಪಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts