More

    ರಾಜ್ಯಸಭೆ ಅಡ್ಡಮತದಾನದ ಅಡ್ಡಪರಿಣಾಮ; ಕಾಂಗ್ರೆಸ್​ ಬಳಿಕ ಬಿಜೆಪಿಯಿಂದ ಶಾಸಕಿಯ ಉಚ್ಚಾಟನೆ..

    ಜೈಪುರ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರ ಅಡ್ಡಪರಿಣಾಮ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಶಾಸಕರೊಬ್ಬರ ಉಚ್ಚಾಟನೆಗೆ ಕಾರಣವಾಗಿತ್ತು. ಇದೀಗ ಬಿಜೆಪಿಯವರಿಗೂ ಆ ಅಡ್ಡ ಪರಿಣಾಮ ತಟ್ಟಿದ್ದು, ಭಾರತೀಯ ಜನತಾ ಪಕ್ಷ ತನ್ನ ಶಾಸಕಿಯೊಬ್ಬರನ್ನು ಉಚ್ಚಾಟನೆ ಮಾಡಿದೆ.

    ಅಡ್ಡಮತ ಚಲಾಯಿಸಿದ್ದಕ್ಕೆ ಹರಿಯಾಣದ ಅದಂಪುರ ಕ್ಷೇತ್ರದ ಶಾಸಕ ಕುಲದೀಪ್ ಬಿಷ್ಣೊಯ್​ ಅವರನ್ನು ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಂದಲೂ ಉಚ್ಚಾಟನೆ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದರು. ಇವರು ಕಾಂಗ್ರೆಸ್​​ನ ಅಜಯ ಮಾಕೆನ್ ಅವರಿಗೆ ಮತ ಚಲಾಯಿಸುವ ಬದಲು ಬಿಜೆಪಿಯ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದ್ದರು.

    ರಾಜ್ಯಸಭೆಯ ಚುನಾವಣೆಯ ಅಡ್ಡಮತದಾನ ಹಿನ್ನೆಲೆಯಲ್ಲಿ ರಾಜಸ್ಥಾನದ ಶಾಸಕಿ ಶೋಭಾರಾರಣಿ ಕುಷ್​ವಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ನಿಮ್ಮನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಹಾಗೂ ಪಕ್ಷ ನೀಡಿದ್ದ ಎಲ್ಲ ಜವಾಬ್ದಾರಿಗಳನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ಕಾರ್ಯದರ್ಶಿ ಓಂ ಪಟ್ನಾಯಕ್​ ಪತ್ರಮುಖೇನ ತಿಳಿಸಿದ್ದಾರೆ. ಶಿಸ್ತು ಉಲ್ಲಂಘಿಸಿದ್ದಕ್ಕೆ ಆಕೆಯ ವಿರುದ್ಧ ಪ್ರತ್ಯೇಕ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಪ್ರಮೋದ್ ತಿವಾರಿ ಪರವಾಗಿ ಶೋಭಾರಾಣಿ ಅಡ್ಡಮತ ಚಲಾಯಿಸಿದ್ದರು. ಈಕೆ ಬಿಎಸ್​ಪಿಯ ಮಾಜಿ ಶಾಸಕ ಬಿ.ಎಲ್. ಕುಷ್​ವಾ ಅವರ ಪತ್ನಿ. ಇವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾಗಿ ಅನರ್ಹಗೊಂಡಿದ್ದರು.

    ಕೋವಿಡ್​ನಿಂದಾಗಿ ಏನೂ ನೆನಪಿಲ್ಲ; ಇ.ಡಿ. ವಿಚಾರಣೆ ವೇಳೆ ಬಂಧಿತ ಸಚಿವನ ಉತ್ತರ!

    ಸಾಂಬಾರು ಪಾತ್ರೆಗೆ ಬಿದ್ದು ಬಿಸಿಯೂಟದ ಅಡುಗೆ ಸಹಾಯಕಿ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts