More

    ಬಿಜೆಪಿ ಮಾನ ಉಳಿಸಿದ ಮತ್ತಿಮಡು, ಜಾಧವ್

    ಕಲಬುರಗಿ: ಎಸ್ಸಿ ಮೀಸಲು ಕ್ಷೇತ್ರಗಳಾಗಿರುವ ಕಲಬುರಗಿ ಗ್ರಾಮೀಣದಲ್ಲಿ ಬಸವರಾಜ ಮತ್ತಿಮಡು ಮತ್ತು ಚಿಂಚೋಳಿಯಲ್ಲಿ ಡಾ.ಅವಿನಾಶ ಜಾಧವ್ ಅವರು ಮತ್ತೆ ಗೆಲುವು ದಾಖಲಿಸಿ, ಜಿಲ್ಲೆಯಲ್ಲಿ ಬಿಜೆಪಿ ಮಾನ ಉಳಿಸಿದ್ದಾರೆ.
    ಬಸವರಾಜ ಮತ್ತಿಮಡು ಅವರು ಲಿಂಗಾಯತ ವಿರೋಧಿ ಎಂದು ಬಿಂಬಿಸಿ ಸೋಲಿಸಲು ವಿರೋಧಿಗಳು ಎಷ್ಟೇ ಪ್ರಯತ್ನಿಸಿದರೂ ಫಲಿಸಲಲ್ಲ. ಮತ್ತಿಮಡು ದಂಪತಿ ಸದಾ ಕ್ಷೇತ್ರದಲ್ಲಿದ್ದು ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವುದರಿಂದಲೇ ಜನರು ಮತ್ತೊಮ್ಮೆ ಕೈಹಿಡಿದಿದ್ದಾರೆ. ಕ್ಷೇತ್ರದ ಜನರು ಖಾಸಗಿ ಕಾರ್ಯಕ್ರಮಗಳನ್ನು ಆಹ್ವಾನ ನೀಡಿದಾಗ ಮತ್ತಿಮಡು ಹೋಗದಿದ್ದರೆ, ಅವರ ಪತ್ನಿ ಜಯಶ್ರೀ ಹಾಜರಾಗುತ್ತಿದ್ದರು. ಇನ್ನೂ ಕಳೆದ ಅವಧಿಯಲ್ಲಿ ಹೆಚ್ಚಿನ ಸಮಯವನ್ನು ಕ್ಷೇತ್ರದ ಜನರೊಂದಿಗೆ ಕಳೆದು, ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ರೇವೂನಾಯಕ ಬೆಳಮಗಿ ತಮ್ಮ ಹಳೆಯ ಶೈಲಿಯಲ್ಲಿಯೇ ಹೊರಟರು. ನನ್ನ ಕೊನೆಯ ಚುನಾವಣೆ ಎಂಬ ಕಾರ್ಡ್ಗೆ ಜನರು ಸ್ಪಂದಿಸಲಿಲ್ಲ.
    ಚಿಂಚೋಳಿ ಕ್ಷೇತ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಮುಂದುವರಿಯಲಿದೆ. ಕ್ಷೇತ್ರದ ಜನರ ನೋವು ನಲಿವುಗಳಿಗೆ ಸಂಸದರಾದ ಡಾ.ಉಮೇಶ ಜಾಧವ್ ಇಲ್ಲವೆ ಅವರ ಪುತ್ರ ಶಾಸಕ ಡಾ.ಅವಿನಾಶ ಜಾಧವ್ ಅವರು ಸ್ಪಂದಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಮತ್ತೆ ಜನರು ಅವಿನಾಶಗೆ ಸೈ ಎಂದಿದ್ದಾರೆ. ಶಾಸಕರು, ಸಂಸದರು ಒಂದಲ್ಲ ಒಂದು ಕೆಲಸ ಮಾಡಬಹುದು ಎಂಬ ನಂಬಿಕೆ ಜನರಲ್ಲಿದ್ದು, ಕೈ ಅಲೆ ನಡುವೆಯೂ ಅವಿನಾಶ ಜಯದ ದಡಕ್ಕೆ ಬಂದತಿದೆ. ಗೆಲುವಿನ ಅಂತರ ಅತ್ಯಂತ ಕಡಿಮೆಯಾಗಿರುವುದು ನೋಡಿದಾಗ ಬಂಜಾರ ಸಮುದಾಯ ಮತಗಳು ಹಂಚಿಹೋದತಿದೆ.
    ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಮಾತಿತ್ತು. ಆದರೆ, ಈ ಸಲ ಅದು ಹುಸಿಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಚಿಂಚೋಳಿಯಲ್ಲಿ ಗೆದ್ದವರೇ ಅಧಿಕಾರಕ್ಕೆ ಬರುತ್ತಿದ್ದರು. ಇದೇ ಮೊದಲ ಸಲ ಇಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. 1968ರಿಂದ ಕಳೆದ ಅವಧಿಯವರೆಗೆ ಇತಿಹಾಸವನ್ನು ನೋಡಿದಾಗ ಚಿಂಚೋಳಿಯಲ್ಲಿ ಗೆದ್ದ ಶಾಸಕರ ಪಕ್ಷವೇ ಅಧಿಕಾರಕ್ಕೆ ಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts