More

    ಭಾರತ್ ಬಂದ್ ಹಿಂದೆ ಪ್ರತಿಪಕ್ಷಗಳ ಷಡ್ಯಂತ್ರ: ಬಿಜೆಪಿ

    ಚಿತ್ರದುರ್ಗ: ಕೇಂದ್ರದ ಕೃಷಿ ಕಾಯ್ದೆಗಳ ತಿದ್ದುಪಡಿ ಜಾರಿ ವಿರುದ್ಧ ಕರೆಕೊಟ್ಟಿರುವ ಭಾರತ್ ಬಂದ್ ಪ್ರತಿಪಕ್ಷಗಳ ಷಡ್ಯಂತ್ರವೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಸುರೇಶ್ ಸಿದ್ದಾಪುರ ಆರೋಪಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೇಂದ್ರದ ಮೂರು ತಿದ್ದುಪಡಿ ಮಸೂದೆಗಳೂ ರೈತರ ಪರವಾಗಿವೆ.

    ಆದರೆ ಇದನ್ನು ಸಹಿಸದ ವಿರೋಧಿಗಳು ಕೇಂದ್ರದ ವಿರುದ್ಧ ಪ್ರತಿಭಟಿಸುವಂತೆ ರೈತರನ್ನು ಪ್ರಚೋದಿಸುತ್ತಿವೆ. ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ,ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ರೈತ ವಿ ರೋಧಿಯಾಗಿವೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತಿತರರ ಸಂಘಟನೆಗಳು ಕರೆ ನೀಡಿರುವ ಬಂದ್ ವಿಫಲವಾಗಿದೆ ಎಂದರು.
    ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ಲಾಭವಾಗಲಿದ್ದು,ವಿನಾ ಕಾರಣ ಅವರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಪ್ರತಿಪಕ್ಷಗಳು ಮಾಡ ಬಾ ರದು. ರೈತರ ಆದಾಯ ದ್ವಿಗುಣಕ್ಕಾಗಿ ಪ್ರಧಾನಿ ನರೇಂದ್ರಮೋದಿ ಕ್ರಮ ಕೈಗೊಂಡಿದ್ದಾರೆ. ಬೇವು ಲೇಪಿತ ಯೂರಿಯಾ ಪೂರೈಸಿ ಅದರ ಕೊರತೆ ನೀಗಿಸಿದ್ದಾರೆ.

    ಇದನ್ನೂ ಓದಿ: FACT CHECK | ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದ್ರಾ- ಏನೀ ವಿಡಿಯೋದ ಮರ್ಮ?

    ಹತ್ತಾರು ದಶಕಗಳಿಂದ ಕತ್ತಲ್ಲಿದ್ದ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದಾರೆ. ಕಿಸಾನ್ ಕಾರ್ಡ್,ಮಣ್ಣು ಪರೀಕ್ಷಾ ಪ್ರಯೋಗಾಲಯ,ಮಣ್ಣು ಫಲವತ್ತತೆ ಕಾರ್ಡ್,ಪ್ರಧಾನ ಮಂತ್ರಿ ಫಸಲ್ ಬೀಮಾ ಮೊದಲಾದ ಕಾರ‌್ಯಕ್ರಮಗಳು ಹೇಗೆ ರೈತ ವಿರೋಧಿಯಾಗುತ್ತವೆ ಎಂದು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು.

    ಇದನ್ನೂ ಓದಿ: ಜೀವನಕ್ಕೆ ನೀತಿ ಸಂಹಿತೆ ಹಾಕಿಕೊಟ್ಟದ್ದು ಬಸವ ಧರ್ಮ – ಡಾ.ಮಲ್ಲಿಕಾರ್ಜುನ ಶ್ರೀ

    ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್‌ಯಾದವ್ ಮಾತನಾಡಿ,ಕೋವಿಡ್ ಸಂಕಷ್ಟದಲ್ಲಿ ಕೇಂದ್ರದ ರೈತ ಪರ ನಿಲುವುಗಳನ್ನುವಿವರಿಸಿದರು. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್,ಪ್ರಧಾನ ಕಾರ್ಯದರ್ಶಿ ಜಿ.ಎಸ್.ಕಲ್ಲೇಶಯ್ಯ, ಮುಖಂಡ ರಾದ ನಾಗರಾಜ್ ಬೇದ್ರೆ,ಕೇಶವಮೂರ್ತಿ,ಎನ್.ತಿಪ್ಪೇಸ್ವಾಮಿ ಇದ್ದರು.

    ಕೃಷಿ ಕಾನೂನು ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಿದವರೇ ಪ್ರತಿಭಟನೆಯನ್ನೂ ನಡೆಸ್ತಿರೋದು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts