More

    ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ರಾಜು ಕುರುಡಗಿ ಪದಗ್ರಹಣ, ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು: ಸಿ.ಸಿ. ಪಾಟೀಲ ಸಲಹೆ

    ವಿಜಯವಾಣಿ ಸುದ್ದಿಜಾಲ ಗದಗ
    ಲೋಕಸಭಾ ಚುನಾವಣೆ ಜರುಗುವ ಸಂದರ್ಭದಲ್ಲಿ ಆಯ್ಕೆಯಾ ನೂತನ ಜಿಲ್ಲಾಧ್ಯಕ್ಷ ರಾಜು ಕುರಡಗಿಗೆ ಪರೀೆ ತಂದೊಡ್ಡಿದೆ. ಪಕ್ಷ ಸಂಟನೆ ಜತೆಗೆ ಮುಂಬರು ಲೋಕಸಭಾ, ಜಿಪಂ ಹಾಗೂ ತಾಪಂ ಚುನಾವಣೆಯಲ್ಲೂ ಶ್ರಮ ವಹಿಸಿ, ಎಲ್ಲರನ್ನೂ ಭರವಸೆಗೆ ತೆಗೆದುಕೊಂಡು ಮುನ್ನಡೆಯಬೇಕಿದೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಜರುಗಿದ ನೂತನ ಜಿಲ್ಲಾಧ್ಯಕ್ಷ ರಾಜು ಕುರಡಗಿ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜು ಸೌಮ್ಯ ಸ್ವಭಾವದ ವ್ಯಕ್ತಿ. ಜಿಲ್ಲಾಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಅವರಲ್ಲಿದೆ. ಇದೊಂದು ಪರೀೆಯ ಕಾಲ. ಮುಂಬರುವ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಅವರೊಂದಿಗೆ ಎಲ್ಲರೂ ಜತೆಗೂಡಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.
    ಸಂಸದ ಶಿವಕುಮಾರ್​ ಉದಾಸಿ ಅವರು ಪೂರ್ವದಲ್ಲೇ ಲೋಕಸಭೆಗೆ ಸ್ಪಧಿರ್ಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆ ಆಕಾಂಕ್ಷಿಗಳು ಅಧಿಕವಾಗಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಲ್ಲ. ಟಿಕೆಟ್​ ಲಭಿಸದ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸುವ ಸ್ಥಿತಿ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಅದೇನೆ ಇರಲಿ ನಮ್ಮ ಅಭ್ಯಥಿರ್ ಕಮಲ ಎಂದು ಚುನಾವಣೆ ಎದುರಿಸಬೇಕು ಎಂದರು.
    ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಮಾತನಾಡಿ, ಕಾರ್ಯಕರ್ತರೆ ಪಕ್ಷದ ಆಸ್ತಿ. ಪಕ್ಷಕ್ಕೆ ದುಡಿದವರನ್ನು ಪಕ್ಷ ಗುರುತಿಸುತ್ತದೆ. ಅದಕ್ಕೆ ಜೀವಂತ ಸಾಕ್ಷಿಯೇ ರಾಜು ಕುರಡಗಿ. ಜಿಲ್ಲಾಧ್ಯಕ್ಷ ಸ್ಥಾನ ಎನ್ನುವುದು ಹೂವಿನ ಹಾಸಿಗೆಯಲ್ಲ. ಹಲವು ಸವಾಲುಗಳು ಎದುರಾಗುತ್ತವೆ. ಪಕ್ಷ ಸಂಘಟನೆಯಲ್ಲಿ ಹಲವು ಎಳುಬೀಳು ಬರುತ್ತವೆ. ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು ಸಮಟನೆಗೆ ಮುನ್ನಡೆಯಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿ ಕಾಂಗ್ರೆಸ್​ ಮುಕ್ತ ಗದಗ ಜಿಲ್ಲೆ ಮಾಡೋಣ ಎಂದರು.
    ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಜಿಲ್ಲೆಯಲ್ಲಿ ಈ ಮೊದಲು ಬಿಜೆಪಿ ಕಚೇರಿ ಇರಲಿಲ್ಲ. ಅನಾನುಕೂಲದ ಆಗರವಿತ್ತು. ಸಂಘಟನೆಯ ಸದಸ್ಯರಾಗಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಪಕ್ಷ ಬಲಿಷ್ಠವಾಗಿದೆ. ಎಲ್ಲರೂ ಸೇರಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ ಎಂದರು.
    ಎಂ.ಎಸ್​. ಕರಿಗೌಡ್ರ, ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ರಾಜಕಾರಣ ಚಿತ್ರ ಬದಲಾಗುತ್ತದೆ. ಅದೇ ರೀತಿ ಜಿಲ್ಲೆಯಲ್ಲೂ ರಾಜಕಾರಣ ಬದಲಾಗಿ ರಾಜು ಕುರಡಗಿ ಅಧ್ಯಕ್ಷರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸಂಸದ ಚುನಾವಣೆಯಲ್ಲಿ ಪ್ರಭಾರಿ ಆಗಿ, ಗೋವಾ ಚುನಾವಣೆಯಲ್ಲಿ ಪ್ರಭಾರಿ ಆಗಿ ಕೆಲಸ ಮಾಡಿದ ಅನುಭವ ರಾಜು ಕುರಡಗಿ ಅವರಿಗಿದೆ ಎಂದರು.
    ಶಾಸಕ ಚಂದ್ರು ಲಮಾಣಿ, ನಿಕಟಪೂರ್ವ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತಮಾತೆ ಹಾಗೂ ದೀನದಯಾಳ್​ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆದ ರಾಜು ಕುರಡಗಿ ಅವರಿಗೆ ಬಿಜೆಪಿ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.
    ಪಿ. ರಾಜೀವ, ನಾಗರಾಜ ಕುಲಕಣಿರ್, ಉಷಾ ದಾಸರ, ರಾಜು ಕುರಡಗಿ ಸುನಂದಾ ಬಾಕಳೆ, ಶ್ರೀಪತಿ ಉಡುಪಿ, ವಿಜಯಕುಮಾರ ಗಡ್ಡಿ, ಹೇಮಗಿರಿಶ ಹಾವನಾಳ ಇತರರು ಇದ್ದರು.

    ಕೋಟ್​:
    ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದೆ. ಪಕ್ಷ ನಿಷ್ಠಯಾಗಿ ದುಡಿಯುತ್ತೇನೆ. ಜಿಲ್ಲೆಯ ಹಿರಿಯರ ಮಾರ್ಗದರ್ಶನದಂತೆ ಪಕ್ಷದ ಏಳ್ಗೆಗಾಗಿ ಶ್ರಮವಹಿಸುತ್ತೇನೆ. ಮುಂಬರು ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಅದಕ್ಕೆ ಪೂರ್ವ ತಯಾರಿಯು ಅಗತ್ಯವಿದೆ.
    -ರಾಜು ಕುರಡಗಿ, ಬಿಜೆಪಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts