More

    ಗ್ರಾಪಂ ಅಭಿವೃದ್ಧಿಗೊಳಿಸಿದರೆ 10 ಲಕ್ಷ ರೂ. ಅನುದಾನ

    ಚಿಕ್ಕಮಗಳೂರು: ಸದಸ್ಯರು ಒಗ್ಗೂಡಿ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ತಯಾರಿಸಿ ಅನುಷ್ಠಾನಗೊಳಿಸಬೇಕು. ಅಂಥ ಸಾಧನೆ ಮಾಡುವ ಗ್ರಾಪಂಗೆ 10 ಲಕ್ಷ ರೂ. ವಿಶೇಷ ಅನುದಾನ ಒದಗಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

    ಚಿಕ್ಕಮಗಳೂರು ಕ್ಷೇತ್ರದ ವಿವಿಧ ಗ್ರಾಪಂಗಳಿಗೆ ಆಯ್ಕೆಯಾದ ಬಿಜೆಪಿ ಬೆಂಬಲಿತರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

    ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತದೆ. ಉತ್ತಮ ಆಡಳಿತ ನೀಡಿದ ಗ್ರಾಪಂ ಸದಸ್ಯರಿಗೆ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದಿಂದ ಪ್ರಶಸ್ತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

    ಗ್ರಾಪಂಗಳಲ್ಲಿ ಲಭ್ಯವಿರುವ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಯೋಜನಾ ಕರ್ತೃಗಳಾಗಿ ಸದಸ್ಯರು ಪಂಚಾಯಿತಿ ಮಟ್ಟದಲ್ಲಿ ಆಳವಾಗಿ ಪ್ರಜಾಪ್ರಭುತ್ವ ಬೇರೂರುವಂತೆ ಮಾಡಬೇಕು. ಅಪಹಾಸ್ಯ ಮಾಡುವವರಿಗೆ ಗೌರವ ನೀಡುವುದರ ಜತೆಗೆ ದಿಟ್ಟತನದ ವ್ಯಕ್ತಿತ್ವ ಪರಿಚಯ ಆಗುವಂತೆ ಮಾಡಬೇಕು. ಮಂಡಲ ಪ್ರಧಾನರಾದ ಬಹಳಷ್ಟು ಮಂದಿ ಶಾಸಕರಾಗಿ ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದಾರೆ. ಗ್ರಾಪಂಗಳು ಇಂಥ ಸಾಮರ್ಥ್ಯ ವರ್ಧನೆಯ ಅಖಾಡವಾಗಿ ಗ್ರಾಮೀಣ ಪ್ರದೇಶದಲ್ಲಿ ನಾಯಕತ್ವ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

    ಗೆದ್ದವರು ಬೀಗಬಾರದು. ಬಾಗಬೇಕು. ಬೀಗಿದವರು ಬೀಲುತ್ತಾರೆ. ಬಾಗಿದವರು ಉಳಿಯುತ್ತಾರೆ. ಆಡಳಿತದಲ್ಲಿ ಅನುಭವ ಪಡೆದುಕೊಳ್ಳಬೇಕು. ಸದಸ್ಯರು ಕೈಗೊಳ್ಳುವ ಕೆಲಸದ ಜತೆಗೆ ನಡೆದುಕೊಳ್ಳುವ ರೀತಿ ಆಧರಿಸಿ ಜನರು ಅಳತೆ ಮಾಡುವುದರಿಂದ ವ್ಯವಸ್ಥೆ ಅರ್ಥ ಮಾಡಿಕೊಂಡು ತಾಳ್ಮೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿ.ಟಿ.ರವಿ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts