More

    ಮೋದಿಯವರೆ ಇದ್ದರೆ ಭಾರತ ಆರ್ಥಿಕತೆಯಲ್ಲಿ 2ನೇ ರಾಷ್ಟ್ರವಾಗಲಿದೆ; ವಿಶ್ವನಾಥ ಭಟ್

    ರಾಣೆಬೆನ್ನೂರ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಇನ್ನೂ 10 ವರ್ಷಗಳ ಕಾಲ ನಡೆದರೆ ಭಾರತ ದೇಶ ಆರ್ಥಿಕವಾಗಿ ಅಮೇರಿಕಾದ ನಂತರ 2ನೇ ರಾಷ್ಟ್ರದ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಆರ್ಥಿಕ ತಜ್ಞ ಡಾ. ವಿಶ್ವನಾಥ ಭಟ್ ಹೇಳಿದರು.
    ನಗರದ ಸ್ಟೇಷನ್ ರಸ್ತೆ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಪ್ರಧಾನಿ ಮೋದಿಯವರ 9 ವರ್ಷಗಳ ಸಾಧನೆ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಕೋವಿಡ್‌ನಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯವರು ದೇಶಿಯವಾಗಿ 1 ಲಕ್ಷ ಮಿಲಿಯನ್ ಹಣ ಖರ್ಚು ಮಾಡಿ ಲಸಿಕೆ ಉತ್ಪಾದಿಸಿ ಹೊರ ರಾಷ್ಟ್ರದಿಂದ ತರಿಸಲು ಕೊಡಬೇಕಾಗಿದ್ದ 23 ಲಕ್ಷ ಮಿಲಿಯನ್‌ನಷ್ಟು ಹಣ ಉಳಿಸಿದ್ದಾರೆ. ದೇಶದಲ್ಲಿ 5ಜಿ ಹಾಗೂ ರೈಲ್ವೆ ಅಭಿವೃದ್ಧಿ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಮೋದಿಯವರ ಬದಲು ಕಾಂಗ್ರೆಸ್ ಬಂದಿದ್ದರೆ ದೇಶ ಇಷ್ಟೊತ್ತಿಗೆ ಎಲ್ಲಿರುತ್ತಿತ್ತೋ ಗೊತ್ತಿಲ್ಲ ಎಂದರು.
    ದೇಶದ ರೈತರಿಗೆ ಒಂದು ಕ್ವಿಂಟಲ್ ಗೊಬ್ಬರಕ್ಕೆ 700 ರೂ.ನಿಂದ 1700 ರೂ.ವರೆಗೆ ಸಬ್ಸಿಡಿ ಕೊಟ್ಟರು. ಯುವಕರಿಗೆ 6 ಸಾವಿರ ರೂ.ವರೆಗೆ ಸಹಾಯಧನ ನೀಡಿದರು. ಈ ದೇಶದ ಯಾರೋಬ್ಬರೂ ಉಪವಾಸ ಇರುವುದು ಬೇಡ ಎಂದು ಪ್ರತಿ ತಿಂಗಳು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ದೇಶ ಅಭಿವೃದ್ಧಿ ಆದರೆ ವರ್ತಕರ ಅಭಿವೃದ್ಧಿ ಸಾಧ್ಯವಾಗಲಿದೆ ಎಂಬುದನ್ನು ಮನಗಂಡಿರುವ ಮೋದಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ದೇಶದಲ್ಲಿ 9 ಕೋಟಿ ವರ್ತಕರಿದ್ದು 28 ಕೋಟಿ ಜನ ಅವರನ್ನು ಅವಲಂಬಿಸಿದ ಬಂಧುಗಳಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts