More

    ಬಿಜೆಪಿಗೆ ಎಂದೂ ಸಿಕ್ಕಿಲ್ಲ ಸ್ಪಷ್ಟ ಬಹುಮತ – ಅಲ್ಲಂ ವೀರಭದ್ರಪ್ಪ

    ಕುರುಗೋಡು: ರಾಜ್ಯದಲ್ಲಿ ಬಿಜೆಪಿ ಯಾವತ್ತಿಗೂ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರನ್ನು ಕುದರೆ ವ್ಯಾಪಾರ ಮಾಡಿ, ವಾಮಾಮಾರ್ಗದಿಂದ ಸರ್ಕಾರ ರಚಿಸಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ದೂರಿದರು.

    ಇದನ್ನೂ ಓದಿ: ಬಿಜೆಪಿಗೆ ೧೩೦ ಸ್ಥಾನಗಳೊಂದಿಗೆ ಬಹುಮತ ಖಚಿತ: ಸದಾನಂದ ಗೌಡ

    ಕಾಂಗ್ರೆಸ್‌ಗೆ ಪೂರ್ಣ ಬಹುಮತ

    ಬಡವರಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಬೇಕು. ಬಡ ಹಾಗೂ ಮಧ್ಯಮ ವರ್ಗದವರಿಗೆ ಪೂರಕವಾಗಿದ್ದ ಹಲವು ಯೋಜನೆಗಳನ್ನು ರದ್ದುಪಡಿಸುವ ಮೂಲಕ ಬಿಜೆಪಿ ಸರ್ಕಾರ ಬಡವರ ವಿರೋಧಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ರಾಜಕೀಯದಲ್ಲಿ ಪ್ರತಿಷ್ಠೆ ಇರಬಾರದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗೆ ಎರಡು ಸಾವಿರ ಕೋಟಿ ರೂ. ನೀಡಲಾಗುವುದು. ಕ್ಷೇತ್ರದ ಜನರು ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್.ಗಣೇಶ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

    ಮಾಜಿ ಸಚಿವ ಹಾಗೂ ಎಐಸಿಸಿ ವೀಕ್ಷಕ ವಸಂತ ಪುರಕೆ ಮಾತನಾಡಿ, ಬಿಜೆಪಿ ಸರ್ಕಾರ ಬಡವರನ್ನು ಬದುಕಲು ಬಿಡುತ್ತಿಲ್ಲ. ದಲಿತ ಹಾಗೂ ಹಿಂದುಳಿದ ವರ್ಗದವರು ರಾಜಕೀಯದಲ್ಲಿ ಉನ್ನತ ಹುದ್ದೆಗಳನ್ನು ಅನುಭವಿಸಲು ಕಾರಣ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಹೇಳಿದರು.

    ಸೈನಿಕರ ಮೇಲೆ ದಾಳಿ, ಹೆಸರಾಂತ ವ್ಯಕ್ತಿಗಳ ಕೊಲೆ ನಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

    ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು. ಕೆಪಿಸಿಸಿ ಸದಸ್ಯರಾದ ಅಲಂ ಪ್ರಶಾಂತ್, ಕಲ್ಲುಕಂಬ ಪಂಪಾಪತಿ, ಕಾರ್ಮಿಕ ವಿಭಾಗದ ಕಾರ್ಯದರ್ಶಿ ಕೆ.ಗಾದಿಲಿಂಗಪ್ಪ, ಮುಖಂಡರಾದ ಹರೀಶ್ ರೆಡ್ಡಿ, ನಾರಾಯಣ ರೆಡ್ಡಿ, ಸುರೇಶ್ ರೆಡ್ಡಿ, ಹೊನ್ನೂರ್ ಸಾಬ್, ಶೆಟ್ಟಿ ಖಾಸಿಂ ಸಾಬ್, ಚಾನಾಳ್ ಚನ್ನಬಸವರಾಜ, ಓಂಕಾರಪ್ಪ, ಶೇಖಣ್ಣ, ನಾಗಭೂಷಣ, ಸಿ.ಷಣ್ಮುಖ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts