More

    ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್​ ಸ್ವೀಪ್​

    ಉಡುಪಿ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.

    ಇನ್ನು ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ತನ್ನ ಗೆಲುವಿನ ನಗೆ ಬೀರಿದೆ ಮತ್ತು ಕರಾವಳಿ ಕರ್ನಾಟಕದಲ್ಲಿನ ನೆಲೆಯನ್ನು ವಿಸ್ತರಿಸಿದೆ.

    ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಶ್‌ಪಾಲ್ ಸುವರ್ಣ ಕಾಂಗ್ರೆಸ್​ನ ಪ್ರಸಾದ್​ ಕಾಂಚನ್​ ಹಾಗೂ ಜೆಡಿಎಸ್​ನ ದಕ್ಷತ್​ ಆರ್​ ಶೆಟ್ಟಿ ವಿರುದ್ಧ 32,776 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಗೆಲುವಿನ ನಗೆ ಬೀರಿದ್ಧಾರೆ.
    ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಂಧನ ಸಚಿವ ಸುನೀಲ್​ ಕುಮಾರ್​ ಕಾಂಗ್ರೆಸ್​ನ ಉದಯ್​ ಶೆಟ್ಟಿ ಮುನಿಯಾಲ್​ ವಿರುದ್ಧ 4,602 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
    udupi BJP
    ಕಾಪು: ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುರ್ಮೆ ಸುರೇಶ್​ ಶೆಟ್ಟಿ ಕಾಂಗ್ರೆಸ್​ನ ವಿನಯ್​ ಕುಮಾರ್​ ಸೊರಕೆ ವಿರುದ್ಧ 13,004 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

    ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆ; ಕಷ್ಟದ ದಿನಗಳನ್ನು ನೆನೆದು ಡಿಕೆಶಿ ಭಾವುಕ

    ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುರುರಾಜ್​ ಶೆಟ್ಟಿ ಘಂಟಿಹೊಳೆ ಕಾಂಗ್ರೆಸ್​ನ ಗೋಪಾಲ್​ ಪೂಜಾರಿ ವಿರುದ್ಧ 16,135 ಸಾವಿರ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ಧಾರೆ.
    ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಿರಣ್​ ಕುಮಾರ್​ ಕೊಡ್ಗಿ ಕಾಂಗ್ರೆಸ್​ನ ದಿನೇಶ್​ ಹೆಗ್ಡೆ ವಿರುದ್ಧ 41,556 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts