More

    ಗ್ರಾಪಂ ಸದಸ್ಯರ ಖರೀದಿಗೆ ಮುಂದಾದ ಶಾಸಕರು

    ರಿಪ್ಪನ್​ಪೇಟೆ: ಜನರಿಗೆ ಪೊಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಜನಪರ ಯೋಜನೆ ರೂಪಿಸದೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಸಾಮರಸ್ಯ ಕದಡುತ್ತಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

    ಪಟ್ಟಣದಲ್ಲಿ ಭಾನá-ವಾರ ನೂತನ ಗ್ರಾಪಂ ಸದಸ್ಯರನ್ನು ಸನ್ಮಾನಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಗಳ ಕಾರ್ಯವೈಖರಿ ಜನತೆಗೆ ಬೇಸರ ತರಿಸಿದೆ. ಬಿಜೆಪಿ ಅವರ ಆಶ್ವಾಸನೆಗಳು ಸುಳ್ಳು ಎಂದು ಅರಿತ ಜನರು ಸರ್ಕಾರದ ಬಗ್ಗೆ ಭ್ರಮ ನಿರಸನಗೊಂಡಿದ್ದಾರೆ. ಆದ್ದರಿಂದ ಗ್ರಾಮಾಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆಮಾಡಿದ್ದಾರೆ ಎಂದು ಹೇಳಿದರು.

    ಸರ್ಕಾರವಿದ್ದರೂ ನಿರೀಕ್ಷಿತ ಸದಸ್ಯರನ್ನು ಗೆಲ್ಲಿಸಿಕೊಳ್ಳಲು ವಿಫಲರಾಗಿರುವ ಶಾಸಕರು ಈಗ ಗೆದ್ದ ಸದಸ್ಯರನ್ನು ಹಣ, ಅಧಿಕಾರದ ಆಸೆ ತೋರಿಸಿ ಸದಸ್ಯರ ಖರೀದಿಗೆ ತಯಾರಾಗಿದ್ದಾರೆ. ಗುತ್ತಿಗೆದಾರರಿಂದ ಕಮಿಷನ್ ಪಡೆಯುವ ಶಾಸಕರು ಕಾರ್ಯಕರ್ತರನ್ನು ಗೆಲ್ಲಿಸುಕೊಳ್ಳುವ ಯೋಗ್ಯತೆ ಇಲ್ಲದೆ ವಾಮಮಾರ್ಗದಲ್ಲಿ ಹೊರಟಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

    ತಾಪಂ ಸದಸ್ಯ ಎನ್.ಚಂದ್ರೇಶ್, ಮುಖಂಡರಾದ ಅಬೂಬಕರ್, ಫ್ಯಾನ್ಸಿ ರಮೇಶ್, ಜಿ.ಆರ್.ಗೋಪಾಲಕೃಷ್ಣ, ಕೆ.ರವೀಂದ್ರ, ಮಂಜಾನಾಯ್ಕ, ರಫೀಕ್, ಸದಸ್ಯರಾದ ಆಸೀಫ್, ಡಿ.ಈ.ಮಧುಸೂದನ, ಗಣಪತಿ ಗವಟೂರು, ಪ್ರಕಾಶ್ ಪಾಲೇಕರ್, ಧನಲಕ್ಷ್ಮೀ, ಅಶ್ವಿನಿ, ಸಾರಾಭಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts