More

    ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಬೆದರಿಕೆ

    ರಾಯಚೂರು: ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್ ದೇವಿನಗರ, ಅಸ್ಕಿಹಾಳ ಸೇರಿ ಹಲವು ಬಡಾವಣೆಗಳಲ್ಲಿನ ಮತದಾರರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದು, ಈ ಕುರಿತು ಚುನಾವಣಾಧಿಕಾರಿಗೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ತಿಳಿಸಿದರು.

    ಮತ ಹಾಕಲು ಬಾರದಂತಹ ಸ್ಥಿತಿ

    ಸೋಲುವ ಭೀತಿಯಿಂದ ಜನರಲ್ಲಿ ಭಯ, ಭೀತಿ ಹುಟ್ಟು ಹಾಕುವ ಮೂಲಕ ಭಯದ ವಾತಾವರಣ ಸೃಷ್ಟಿಸಿ ಜನರು ಮತ ಹಾಕಲು ಬಾರದಂತಹ ಸ್ಥಿತಿ ತಂದಿಡುತ್ತಿದ್ದಾರೆ. ದೇವಿನಗರದಲ್ಲಿ ಶಾಸಕರ ಕುಮ್ಮಕ್ಕಿನಿಂದ ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸಿ ಮನೆಯಿಂದ ಹೊರಗೆ ಬರದಂತೆ ಮಾಡಿದ್ದಾರೆ. ಕೆಲವರ ಮೇಲೆ ದೌರ್ಜನ್ಯ ನಡೆಸಲಾಗಿದೆ.

    ಇದನ್ನೂ ಓದಿ: ಖರ್ಗೆ ಕುಟುಂಬಕ್ಕೆ ಬೆದರಿಕೆ ಆರೋಪ; ಬಿಜೆಪಿ ವಿರುದ್ಧ ಕಾಂಗ್ರೆಸ್​ ಟ್ವೀಟಾಸ್ತ್ರ

    ಅಸ್ಕಿಹಾಳದಲ್ಲಿ ಪಕ್ಷದ ಕಾರ್ಯಕರ್ತ ಮಲ್ಲಿಕಾರ್ಜುನಗೆ ಕಾಂಗ್ರೆಸ್ ಪರ ಪ್ರಚಾರ ನಡೆಸಿದರೆ ಆತನ ಡಾಬಾ ಮುಚ್ಚಿಸುವ ಬೆದರಿಕೆಯನ್ನು ಶಾಸಕರ ಸಹೋದರ ಹಾಕಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    10 ವರ್ಷ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ, ದುರಾಡಳಿತ ನಡೆಸಿದ ಡಾ.ಶಿವರಾಜ ಪಾಟೀಲ್, ಈಗ ಹಣದ ಮೂಲಕ ಮತದಾರರನ್ನು ಖರೀದಿಸುವ ಪ್ರಯತ್ನ ನಡೆಸಿದ್ದಾರೆ. ಹಣ ಹಂಚಿಕೆಗೆ ಕಡಿವಾಣ ಹಾಕುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ರವಿ ಬೋಸರಾಜು ಆರೋಪಿಸಿದರು.

    ಕಾಂಗ್ರೆಸ್ ಅಭ್ಯರ್ಥಿ ಮಹ್ಮದ್ ಶಾಲಂ ಮಾತನಾಡಿ, ಮುಸ್ಲಿಂ ಮತಗಳನ್ನು ಒಡೆಯಲು ಶಾಸಕರೇ ಮುಜಿಬುದ್ದೀನರನ್ನು ಕಣಕ್ಕಿಳಿಸಿದ್ದು, ಮುಸ್ಲಿಂ ಸಮುದಾಯದವರು ಎಚ್ಚೆತ್ತುಕೊಳ್ಳಬೇಕು ಎಂದು ನಾನು ಹೇಳಿದ ಮಾತುಗಳನ್ನು ತಿರುಚಿ ಹಿಂದು, ಮುಸ್ಲಿಮರ ನಡುವೆ ದ್ವೇಷ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಮುಖಂಡರಾದ ಬಷೀರುದ್ದೀನ್, ರುದ್ರಪ್ಪ ಅಂಗಡಿ, ಆಂಜನೇಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts