More

    ‘ಕಾಗೆ ಹಿಕ್ಕೆ ಹಾಕಿದ್ರೂ ಮೂಗು ತೂರಿಸೋರು ಈಗ್ಯಾಕೆ ಮಾತಾಡ್ತಿಲ್ಲ?’ ಸಿದ್ದರಾಮಯ್ಯನ ಕಾಲೆಳೆದ ಬಿಜೆಪಿ

    ಬೆಂಗಳೂರು: ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್​ ಹೆಸರು ಕೇಳಿಬರುತ್ತಿದ್ದಂತೆಯೇ ಆಡಳಿತ ಪಕ್ಷವು ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಕಾಲೆಳೆಯಲಾರಂಭಿಸಿದೆ.

    ಕಾಗೆ ಹಿಕ್ಕೆ ಹಾಕಿದರೂ ಸಿದ್ದರಾಮಯ್ಯನವರು ಅದರಲ್ಲಿ ಮೂಗು ತೂರಿಸುತ್ತಾರೆ. ಆದರೆ ಈ ಸಿಡಿ ಷಡ್ಯಂತ್ರದಲ್ಲಿ ಡಿ.ಕೆ.ಶಿವಕುಮಾರ್​ ಅವರ ಪಾತ್ರದ ಬಗ್ಗೆ ಅವರೇಕೆ ಇನ್ನೂ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದೆ. ಈ ರೀತಿ ಷಡ್ಯಂತ್ರದಲ್ಲಿ ಭಾಗವಹಿಸುವುದು ಯಾವ ಸೆಕ್ಷನ್ ಪ್ರಕಾರ ಪರಾಧವಾಗುತ್ತದೆ ಎಂದು ಜನರ ಮುಂದೆ ತೆರೆದಿಡಿ ಎಂದು ಕೇಳಿದೆ.

    ಸಹಾಯ ಮಾಡುವುದಕ್ಕೂ ಷಡ್ಯಂತ್ರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ. ಷಡ್ಯಂತ್ರದ ಭಾಗವಾಗಿದ್ದುಕೊಂಡ ಕಾರಣದಿಂದಲೇ ಹೆಗಲುಮುಟ್ಟಿ ನೋಡಿಕೊಂಡಿದ್ದಲ್ಲವೇ!? ಮಹಾನಾಯಕರೇ, ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್‌ಗಳೊಂದಿಗೆ ಅಸರಲ್ಲೂ ಈ ಪ್ರಕರಣ ಬೆಳಕಿಗೆ ಬಂದ ನಂತರವೂ ಸಂಬಂಧ ಹೊಂದಿರಲು ಅದು ಹೇಗೆ ಸಾಧ್ಯ? ಎಂದು ಬಿಜೆಪಿ ಮತ್ತೊಂದು ಟ್ವೀಟ್​ನಲ್ಲಿ ಡಿ.ಕೆ.ಶಿವಕುಮಾರ್​ರನ್ನು ಪ್ರಶ್ನಿಸಿದೆ.

    ಶಿವಕುಮಾರ್​ ಅವರೇ, ಆರಂಭದಲ್ಲಿ ಹೆಗಲು ಮುಟ್ಟಿಕೊಡು ನನ್ನನ್ನು ಸಿಲುಕಿಸುವ ಪ್ರಯತ್ನ ಎಂದಿರಿ. ಈಗ ಸಂತ್ರಸ್ಥೆ ನನ್ನ ಭೇಟಿಗೆ ಪ್ರಯತ್ನಿಸಿದ್ದು ನಿಜ, ನರೇಶ್ ಮನೆಗೆ ಹೋಗಿದ್ದೇನೆ ಎನ್ನುತ್ತಿದ್ದೀರಿ. ಅಂದರೆ ಪ್ರಕರಣದ ಎಲ್ಲಾ ಆಗುಹೋಗುಗಳು ನಿಮ್ಮ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಸ್ಪಷ್ಟ ಅಲ್ಲವೇ? ಎಂದೂ ಪ್ರಶ್ನೆ ಕೇಳಲಾಗಿದೆ.

    ಐ ಫೋನ್​ ಆರ್ಡರ್​ ಮಾಡಿದವನಿಗೆ ಬಂದಿದ್ದು ಅವನಷ್ಟೇ ಎತ್ತರದ ಐ ಫೋನ್​! ಏನಿದರ ಒಳಗುಟ್ಟು?

    ಬಾಂಗ್ಲಾದೇಶದ ಕಾಳಿ ಮಂದಿರದಲ್ಲಿ ಮೋದಿ ಪ್ರಾರ್ಥನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts