More

    ಸುರೇಶ್ ರೈನಾ 34ನೇ ಜನ್ಮದಿನಕ್ಕೆ ವಿಶೇಷ ಸಂಕಲ್ಪ, 34 ಸರ್ಕಾರಿ ಶಾಲೆಗಳಿಗೆ ನೆರವು

    ನವದೆಹಲಿ: ಟೀಮ್ ಇಂಡಿಯಾದ ಮಾಜಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಶುಕ್ರವಾರ 34ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಉತ್ತರ ಪ್ರದೇಶ, ಜಮ್ಮು ಮತ್ತು ಎನ್‌ಸಿಆರ್‌ನ 34 ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸಹಿತ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವ ಸಂಕಲ್ಪ ಮಾಡಿದ್ದಾರೆ.

    ಮಗಳು ಗ್ರೇಸಿಯಾ ಹೆಸರಿನಿಂದ ರಚಿಸಿರುವ ಗ್ರೇಸಿಯಾ ರೈನಾ ಫೌಂಡೇಷನ್ (ಜಿಆರ್‌ಎ್) ಮೂಲಕ ಸುರೇಶ್ ರೈನಾ ಈ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಪತ್ನಿ ಪ್ರಿಯಾಂಕಾ ಈ ಫೌಂಡೇಷನ್‌ನ ಸಹ-ಸಂಸ್ಥಾಪಕಿಯಾಗಿದ್ದಾರೆ.

    ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕೈ-ಪಾತ್ರ ತೊಳೆಯುವ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಜತೆಗೆ ಸ್ಮಾರ್ಟ್ ಕ್ಲಾಸ್ ರೂಂ ವ್ಯವಸ್ಥೆಯನ್ನೂ ನಿರ್ಮಿಸಲಾಗುತ್ತದೆ. ಈ ಕೊಡುಗೆಯಿಂದ ದೇಶದ ಸುಮಾರು 10 ಸಾವಿರ ಮಕ್ಕಳಿಗೆ ನೆರವಾಗಲಿದೆ. ಜತೆಗೆ 500 ಬಡ ತಾಯಂದಿರಿಗೆ ರೇಷನ್ ಕಿಟ್ ಕೂಡ ನೀಡಲು ಸುರೇಶ್ ರೈನಾ ದಂಪತಿ ನಿರ್ಧರಿಸಿದೆ.

    ‘ಈ ಕೊಡುಗೆಯ ಮೂಲಕ ನನ್ನ 34ನೇ ಜನ್ಮದಿನವನ್ನು ಆಚರಿಸಲು ಭಾರಿ ಖುಷಿಯಾಗುತ್ತಿದೆ. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಇದರೊಂದಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗಳನ್ನು ಶಾಲೆಗಳಲ್ಲಿ ಪಡೆಯುವುದು ಕೂಡ ಅವರ ಹಕ್ಕು ಆಗಿರುತ್ತದೆ’ ಎಂದು ಸುರೇಶ್ ರೈನಾ ಹೇಳಿದ್ದಾರೆ.

    ಕಳೆದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೋಷಿಸಿದ್ದ ರೈನಾ, ವೈಯಕ್ತಿಕ ಕಾರಣದಿಂದಾಗಿ ಕಳೆದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಕಣಕ್ಕಿಳಿದಿರಲಿಲ್ಲ. ಸುರೇಶ್ ರೈನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಉತ್ತರ ಪ್ರದೇಶದಲ್ಲಿ ಪ್ರಚಾರ ರಾಯಭಾರಿಯೂ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts