More

    25 ವರ್ಷಗಳಲ್ಲಿ ಕೋವಿಡ್​ ಮೊದಲ ಸಲ ನಮ್ಮನ್ನು ಬೇರೆ ಮಾಡಿದೆ; ತಬೂ ದಿನೇಶ್​ ಗುಂಡೂರಾವ್…

    ಬೆಂಗಳೂರು: ‘ಲವ್ ಇನ್​ ದಿ ಟೈಮ್​ ಆಫ್​ ಕಾಲರಾ’ ಎಂಬ ಒಂದು ಪ್ರಖ್ಯಾತ ಕಾದಂಬರಿ ಇದೆ. ನಂತರ ಇದೇ ಹೆಸರಿನಲ್ಲಿ ಇದು ಸಿನಿಮಾ ಕೂಡ ಆಯಿತು. ಗೇಬ್ರಿಯಲ್​ ಗಾರ್ಸಿಯಾ ಮಾರ್ಕ್ವೆಜ್​ ಬರೆದ ಈ ಸ್ಪ್ಯಾನಿಷ್ ಕಾದಂಬರಿಯ ಶೀರ್ಷಿಕೆ ಸಣ್ಣ ಬದಲಾವಣೆಯೊಂದಿಗೆ ಆಗಾಗ ಪ್ರಸ್ತಾಪ ಆಗುತ್ತಲೇ ಇರುತ್ತದೆ.

    ಇದೀಗ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರ ಪತ್ನಿ ತಬೂ ರಾವ್ ಕೂಡ ಅದನ್ನೇ ಸ್ವಲ್ಪ ಬದಲಿಸಿ ಹೇಳಿಕೊಂಡಿದ್ದಾರೆ. ‘ಬರ್ತ್​ಡೇ ಇನ್​ ದಿ ಟೈಮ್​ ಆಫ್​ ಕೋವಿಡ್​’ ಎನ್ನುತ್ತಲೇ ಅವರು ಪತಿಗೆ ಜನ್ಮದಿನದ ಶುಭಾಶಯ ಕೋರಿಕೊಂಡಿದ್ದಾರೆ.

    ‘ಇವತ್ತು ಇವರ ಜನ್ಮದಿನ. 25 ವರ್ಷಗಳಲ್ಲೇ ಇದೇ ಮೊದಲ ಸಲ ಕೋವಿಡ್​ ನಮ್ಮನ್ನು ಬೇರೆ ಮಾಡಿದೆ. ಹೀಗಾಗಿ ನಾವು ಬೇರೆ ಇದ್ದರೂ ಮಾನಸಿಕವಾಗಿ ಯಾವತ್ತಿಗೂ ಒಂದೇ ಆಗಿರುತ್ತೇವೆ’ ಎನ್ನುವ ಮೂಲಕ ಅವರು ಪತಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
    ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಕೆಲದಿನಗಳಿಂದ ಕ್ವಾರಂಟೈನ್​ನಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts