More

    ನಿಮ್ಮ ಮನೆಯಲ್ಲಿ ಪಾರಿವಾಳ ಗೂಡು ಕಟ್ಟಿದೆಯೇ? ಶುಭ, ಅಶುಭ ಫಲಗಳ ಕುರಿತು ಇಲ್ಲಿದೆ ನೋಡಿ ಮಾಹಿತಿ

    ಬೆಳಗ್ಗೆ ವಾಕ್ ಮಾಡುವ ಸ್ಥಳದಲ್ಲಿ ಇಲ್ಲವೇ ಎದುರಿಗೆ ಸಿಗುವ ಪಕ್ಷಿಗಳಿಗೆ ಆಹಾರ ನೀಡುವುದೆಂದರೆ ನಮಗೆ ಎಲ್ಲಿಲ್ಲದ ಹುಮ್ಮಸ್ಸು. ವಾಸ್ತವವಾಗಿ ನಾವೆಲ್ಲರೂ ಪಕ್ಷಿಗಳಿಗೆ ಆಹಾರ ನೀಡುವುದನ್ನು ಇಷ್ಟಪಡುತ್ತೇವೆ. ಆದರೆ ಅದೇ ಪಕ್ಷಿಗಳು ಆಕಸ್ಮಾತಾಗಿ ನಮ್ಮ ಮನೆಗಳಲ್ಲೇ ಗೂಡು ಕಟ್ಟುವುದನ್ನು ನೋಡಿದಾಗ ಒಂದು ಸಣ್ಣ ಅಳುಕು ಮನಸ್ಸಿನಲ್ಲಿ ಉಂಟಾಗಿ ಆತಂಕ ಎದುರಿಸುತ್ತೇವೆ. ಈ ಪಕ್ಷಿಗಳು ಮನೆಯ ಚಿಮಣಿಯ ಹೊರಗೋ ಎತ್ತರದ ಕಿಟಕಿ ಬಳಿಯಲ್ಲೋ ಗೂಡು ಕಟ್ಟುವುದನ್ನು ನೋಡಿದಾಗ, ಇದೇನು ಶುಭವೋ, ಅಶುಭವೋ, ಯಾವ ಗಡಾಂತರ ಕಾದಿದೆಯೋ ಎಂದು ಆತಂಕಗೊಳ್ಳುವುದು ಸಹಜ. ಅದಕ್ಕಾಗಿಯೇ ‘ಮೈಪಂಡಿತ್‌’ನ ಸಂಸ್ಥಾಪಕ ಮತ್ತು ಸಿಇಒ ಕಲ್ಪೇಶ್ ಶಾ, ಈ ಪಕ್ಷಿಗಳ ಕುರಿತು ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿfeದ ನಿಮ್ಮ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.
    ಮನೆಯಲ್ಲಿ ಪಾರಿವಾಳದ ಗೂಡು, ಶುಭವೋ ಅಶುಭವೋ: ಕಲ್ಪೇಶ್ ಶಾ ಹೇಳವಂತೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಪಕ್ಷಿಗಳು ಗೂಡು ಕಟ್ಟುವುದು ಅತ್ಯಂತ ಮಂಗಳಕರ ಮತ್ತು ಅದೃಷ್ಟ ಎನ್ನುತ್ತಾರೆ. ಹಾಗಾಗಿ ಪಾರಿವಾಳಗಳು ಸೇರಿದಂತೆ ಇನ್ನಾವುದೇ ಪಕ್ಷಿಗಳು ನಿಮ್ಮ ಮನೆಗಳಲ್ಲಿ ಗೂಡು ಕಟ್ಟಿದರೆ, ಅವುಗಳು ಗಲೀಜು ಮಾಡುತ್ತವೆ ಎಂತಲೋ ಅಥವಾ ಅದರಿಂದ ಅಶುಭ ಉಂಟಾಗುತ್ತದೆ ಎಂಬ ಅನುಮಾನದಿಂದಲೋ ಆ ಗೂಡುಗಳನ್ನು ಕಿತ್ತು ಹಾಕುವುದನ್ನು ಮೊದಲು ಬಿಡಬೇಕು ಎನ್ನುತ್ತಾರೆ ಕಲ್ಪೇಶ್. ಪಕ್ಷಿಗಳ ಆಗಮನವು ಜೀವನದ ಅದೃಷ್ಟದಲ್ಲಿ ಸುಧಾರಣೆ ಸೂಚಿಸುವುದಲ್ಲದೆ, ಅದರಲ್ಲೂ ಗುಬ್ಬಚ್ಚಿ ಗೂಡು ನಿರ್ದಿಷ್ಟವಾಗಿ ೧೦ ವಿವಿಧ ರೀತಿಯ ವಾಸ್ತು ದೋಷಗಳನ್ನು ಅಳಿಸಿ ಹಾಕುತ್ತದೆ ಎನ್ನುತ್ತಾರೆ.

    ಗುಬ್ಬಚ್ಚಿಗಳು ಮತ್ತು ಪರಿವಾಳಗಳು ಆಗಾಗ್ಗೆ ಮನೆಗಳಲ್ಲಿ ಗೂಡುಗಳನ್ನು ಕಟ್ಟುತ್ತಿರುತ್ತವೆ. ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಪಾರಿವಾಳಗಳನ್ನು ಲಕ್ಷ್ಮೀ ದೇವಿಯ ಆರಾಧಕರು ಎಂದು ಪರಿಗಣಿಸಲಾಗುತ್ತದೆ. ಪಾರಿವಾಳಗಳು ಮನೆಗೆ ಬರುವುದರಿಂದ ದುರಾದೃಷ್ಟವು ಅದೃಷ್ಟವಾಗಿ ಪರಿವರ್ತಿತವಾಗುತ್ತದೆ. ಪಾರಿವಾಳಗಳು ನೆಲೆಸುವ ಮನೆಗಳು ಯಾವಾಗಲು ಸಂತೋಷ ಮತ್ತು ಸಾಮರಸ್ಯದಿಂದ ತುಂಬಿರುತ್ತವೆ. ಹಾಗಾಗಿ ಮನೆಯಲ್ಲಿರುವ ಪಾರಿವಾಳ ಗೂಡನ್ನು ಯಾವುದೇ ಕಾರಣಕ್ಕೆ ಕಿತ್ತುಹಾಕಬಾರದು, ಅವುಗಳು ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ ಎನ್ನುತ್ತಾರೆ ಕಲ್ಪೇಶ್.

    ದೇವತೆಗಳ ವಾಹನಗಳಾಗಿ ಪಕ್ಷಿಗಳು: ನಮ್ಮ ಹಿಂದು ಧರ್ಮದ ಹಲವು ದೇವಾದಿ ದೇವತೆಗಳು ಪಕ್ಷಿಗಳನ್ನು ತಮ್ಮ ವಾಹನಗಳನ್ನಾಗಿ ಮಾಡಿಕೊಂಡಿರುವುದು ನಮಗೇ ಗೊತ್ತೇ ಇದೆ. ಭಗವಾನ್ ಕಾರ್ತಿಕೇಯನಿಗೆ ನವಿಲು, ಸರಸ್ವತಿ ದೇವಿಗೆ ಹಂಸ, ವಿಷ್ಣುವಿಗೆ ಗರುಡ, ಶನಿ ದೇವರಿಗೆ ಕಾಗೆ, ಮಾತೆ ಲಕ್ಷ್ಮೀ ದೇವಿಯು ಗೂಬೆ ಹೀಗೆ ಹೇಳುತ್ತಾ ಹೋದರೆ ನೂರಾರು ಉದಾಹರಣೆಗಳು ಸಿಗುತ್ತವೆ. ಹಾಗಾಗಿ ಪಕ್ಷಿಗಳು ನಮ್ಮ ಮನೆಗಳಲ್ಲಿ ಗೂಡು ಕಟ್ಟಿದರೆ ಅವುಗಳನ್ನು ಅಶುಭಗಳೆಂದು ಭಾವಿಸಿ, ಅದರ ಗೂಡುಗಳನ್ನು ಕಿತ್ತುಹಾಕದೆ ಅವುಗಳಿಗೆ ಆಹಾರ, ನೀರು ಕೊಟ್ಟು ಪೋಷಿಸುವುದನ್ನು ರೂಢಿಸಿಕೊಳ್ಳೋಣ. ಒಂದು ವೇಳೆ, ಪಕ್ಷಿಗಳ ಗೂಡು ನಮ್ಮ ಮನೆಗಳಲ್ಲಿ ಇರಕೂಡದೆಂದು ನಿರ್ಧರಿಸದರೆ, ಆ ಗೂಡುಗಳನ್ನು ನಾಶ ಪಡಿಸುವುದರ ಬದಲು ಬೇರೆಡೆಗೆ ಸ್ಥಳಾಂತರಿಸುವ ಕೆಲಸವನ್ನಾದರೂ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts