More

    ಹಕ್ಕಿ ಜ್ವರ: ಕರ್ನಾಟಕದಲ್ಲಿ ಹೈ ಅಲರ್ಟ್​ ಘೋಷಣೆ

    ಬೆಂಗಳೂರು: ಕರೊನಾ ಸೋಂಕಿನ ಭೀತಿಯಿಂದ ಹೊರಬರಲು ಇನ್ನೂ ಆಗಿಲ್ಲ. ಅದರ ಬೆನ್ನಲ್ಲೇ ಕರೊನಾ ರೂಪಾಂತರಿ ಆವರಿಸಿಕೊಂಡಿದೆ. ಈಗ ಹಕ್ಕಿ ಜ್ವರ!

    ನೆರೆಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲೂ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ. ಹಾಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಚಿವ ಪ್ರಭು ಚವ್ಹಾಣ್ ಹೈ ಅಲರ್ಟ್​ ಘೋಷಿಸಿದ್ದಾರೆ.

    ಹಕ್ಕಿ ಜ್ವರದ ಸರ್ವೇಕ್ಷಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿರುವ ಪ್ರಭು ಚವ್ಹಾಣ್​, ಕೇರಳಕ್ಕೆ ಹೊಂದಿಕೊಂಡ ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ರೋಗ ತಡೆಗಟ್ಟಲು ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ರೋಗ ನಿಯಂತ್ರಣ ಸಮಿತಿ ಸಭೆ ಜರುಗಿಸಿ ಸೂಕ್ತ ಮುಂಜಾಗ್ರತ ಕ್ರಮಕೈಗೊಳ್ಳಲು ತಿಳಿಸಿದ್ದಾರೆ. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

    ರಾಜ್ಯದಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲವಾದರೂ ಮುಂಜಾಗ್ರತಾಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಕೇರಳ ರಾಜ್ಯದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್​ಗಳನ್ನು ಸ್ಥಾಪಿಸಿ ಕೇರಳದಿಂದ ಕೋಳಿ/ ಕುಕ್ಕುಟ ಹಾಗೂ ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಗೆ ನಿರ್ಬಂಧ ಏರಲಾಗಿದೆ. ಕೇರಳ ರಾಜ್ಯದಿಂದ ಒಳ ಬರುವ ಕೋಳಿ ಸಾಗಾಣಿಕೆ ವಾಹನಗಳನ್ನು ನೈರ್ಮಲ್ಯೀಕರಿಸಿ (disinfection /Sanitization) ಒಳಬಿಡಲು ಸೂಚನೆ ನೀಡಲಾಗಿದೆ.

    ಗಡಿ ಜಿಲ್ಲೆಗಳಲ್ಲಿ ಇರುವ ಕುಕ್ಕುಟ ಕ್ಷೇತ್ರಗಳಿಂದ ಪ್ರತಿ ವಾರ ರ್ಯಾಂಡಮ್ ಆಗಿ ತಲಾ 5 ಸೀರಂ ಮಾದರಿಗಳು, 5 ಕ್ಲೋಯಕಲ್/ ಟ್ರೇಕಿಯಲ್ ಮಾದರಿಗಳು ಮತ್ತು 5 ಪರಿಸರ ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಸಲ್ಲಿಸಲು ತಿಳಿಸಲಾಗಿದೆ.  ಇದನ್ನೂ ಓದಿರಿ ಹಕ್ಕಿ ಜ್ವರ ಭೀತಿಗೆ 156 ಚಿಕನ್ ಸೆಂಟರ್ ಬಂದ್!

    ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರಗಳಲ್ಲಿ ವಿಶೇಷವಾಗಿ, ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು. ಕೋಳಿಗಳು/ಹಿತ್ತಲ ಕೋಳಿಗಳು/ಹಕ್ಕಿಗಳು/ ಕಾಡು ಹಕ್ಕಿಗಳು/ ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಅಥವಾ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದ್ದಾರೆ.

    ಕೆಳಗೆ ಬಿದ್ದ ಶಾಸಕಿ ಸೌಮ್ಯರೆಡ್ಡಿ, ತುಳಿದುಕೊಂಡೇ ಮುನ್ನಡೆದ ಕಾರ್ಯಕರ್ತರು! ಕೈ ಪ್ರತಿಭಟನೆ ವೇಳೆ ಅವಘಡ

    ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts