More

    ಲಸಿಕೆ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತಕ್ಕೆ ಬಿಲ್​ ಗೇಟ್ಸ್​ ಪ್ರಶಂಸೆ

    ನ್ಯೂಯಾರ್ಕ್​/ನವದೆಹಲಿ: ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳ ಉತ್ಪಾದನೆ ನಡೆಯುತ್ತಿರುವ ಘಟಕಗಳು ಸೀಮಿತ ಸಂಖ್ಯೆಯಲ್ಲಿವೆ. ಲಸಿಕೆ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಿದ ದೇಶಕ್ಕೆ ಒಂದು ಮಹಾನ್ ಉದಾಹರಣೆ ಅಂದ್ರೆ ಭಾರತ ಎಂದು ಮೈಕ್ರೊಸಾಫ್ಟ್​ ಸ್ಥಾಪಕ ಬಿಲ್​ ಗೇಟ್ಸ್​ ಹೇಳಿದ್ದಾರೆ.

    ಗೇಟ್ಸ್​ ಫೌಂಡೇಶನ್​​ನ ಗೋಲ್​ಕೀಪರ್ಸ್​ ವೆಬ್​ಸೈಟ್​ನಲ್ಲಿ ಅಪ್ಲೋಡ್​ ಮಾಡಿರುವ ವಿಡಿಯೋದಲ್ಲಿ ಬಿಲ್​​ ಗೇಟ್ಸ್,​ ಕರೊನಾ ನಿರ್ವಹಣೆಗಾಗಿ ಮತ್ತು ಸಾಮಾನ್ಯ ಲಸಿಕೀಕರಣಕ್ಕಾಗಿ ದೊಡ್ಡ ಪ್ರಮಾಣಗಳಲ್ಲಿ ಲಸಿಕೆಗಳನ್ನು ತಯಾರಿಸುವುದು ಎಲ್ಲಾ ರಾಷ್ಟ್ರಗಳಿಗೂ ದೊಡ್ಡ ಸವಾಲಾಗಿದೆ ಎಂದಿದ್ದಾರೆ. ಭಾರತವು ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಮೂಲಸೌಕರ್ಯ ನಿರ್ಮಿಸಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕರೊನಾ ವಿರುದ್ಧದ ಹೋರಾಟದಲ್ಲಿ ಟೀಂ ಇಂಡಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

    “ಕೆಲವು ದಶಕಗಳ ಹಿಂದೆ, ಭಾರತ ತನ್ನ ಆರೋಗ್ಯ ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡಿತು. ಬೆಂಗಳೂರು, ಹೈದರಾಬಾದ್, ಚೆನ್ನೈ, ಅಹಮದಾಬಾದ್ ಮತ್ತು ಪುಣೆಯಂತಹ ನಗರಗಳಲ್ಲಿ ಸಂಶೋಧನೆಯ ಮೂಲಸೌಕರ್ಯಗಳನ್ನು ನಿರ್ಮಿಸಿತು. ಇಂದು ಜಗತ್ತಿನ ಮೂರನೇ ಎರಡರಷ್ಟು ಮಕ್ಕಳು ಭಾರತದಲ್ಲಿ ತಯಾರಾದ ಲಸಿಕೆಯನ್ನು ಪಡೆಯುತ್ತಿದ್ದಾರೆ” ಎಂದು ಗೇಟ್ಸ್​ ಹೇಳಿದ್ದಾರೆ. (ಏಜೆನ್ಸೀಸ್)

    ಎಎಪಿ ಚಿಂತನ-ಮಂಥನ: ಶಾಲಾ ಶುಲ್ಕ ಪಾವತಿಸಲು ಸರ್ಕಾರದ ನೆರವಿಗೆ ಪೋಷಕರ ಆಗ್ರಹ

    ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್​ ನಾಯಕರ ಚಿತಾವಣೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts