More

    ಬಿಲ್​ ಗೇಟ್ಸ್​ ಪುತ್ರಿಯ​ ವಿವಾಹ: ಈಜಿಪ್ಟಿನ ಕುದುರೆ ಸವಾರನ ಕೈಹಿಡಿದ ಜೆನ್ನಿಫರ್​

    ನ್ಯೂಯಾರ್ಕ್: ಜಗತ್ತಿನ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾದ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ರ ಹಿರಿಯ ಪುತ್ರಿ ಜೆನ್ನಿಫರ್​ ಗೇಟ್ಸ್​ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನ್ಯೂಯಾರ್ಕ್​ನ ವೆಸ್ಟ್​ಚೆಸ್ಟರ್ ಕೌಂಟಿಯಲ್ಲಿ ನಡೆದ ಆಪ್ತರನ್ನೊಳಗೊಂಡ ಸಮಾರಂಭದಲ್ಲಿ, ಜೆನ್ನಿಫರ್​, ಈಜಿಪ್ಟಿನ ಕುದುರೆ ಸವಾರಿ ಆಟಗಾರ 30 ವರ್ಷದ ನಯೇಲ್ ನಸ್ಸರ್​ ಕೈಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಬಿಲ್​ ಗೇಟ್ಸ್​ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಒಟ್ಟಿಗೆ ಜೆನ್ನಿಫರ್​ರನ್ನು ವಿವಾಹ ವೇದಿಕೆಗೆ ಕರೆದುಕೊಂಡುಹೋದರು. ಸಮಾರಂಭದಲ್ಲಿ ಕುಟುಂಬಗಳ ಸದಸ್ಯರೂ ಸೇರಿದಂತೆ ಸುಮಾರು 300 ಜನರು ಭಾಗವಹಿಸಿದ್ದರು ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ. ಆದರೆ ಈ ವಿವಾಹದ ಯಾವುದೇ ಚಿತ್ರಗಳು ಇನ್ನೂ ಹೊರಬಿದ್ದಿಲ್ಲ.

    ಇದನ್ನೂ ಓದಿ: ಕಲಬುರಗಿ ಸರ್ಕಾರಿ ಶಾಲೆಯಲ್ಲಿ ನಿದ್ದೆ ಮಾಡಲು ಹೋಗಿ ಭೂಕಂಪನಕ್ಕೆ ಬೆಚ್ಚಿಬಿದ್ದ ಸಂಸದ!

    25 ವರ್ಷ ವಯಸ್ಸಿನ ಜೆನ್ನಿಫರ್​ ಗೇಟ್ಸ್​ ಬಾಯ್​ ಫ್ರೆಂಡ್​ ನಯೇಲ್ ನಸ್ಸರ್​ರೊಂದಿಗಿನ ಎಂಗೇಜ್​ಮೆಂಟನ್ನು 2020ರ ಜನವರಿಯಲ್ಲಿ ಘೋಷಿಸಿದ್ದರು. ನಿನ್ನೆಯ ವಿವಾಹದ ಸಂದರ್ಭದಲ್ಲಿ ಪಾರಂಪರಿಕ ಫಾದರ್​-ಡಾಟರ್​ ಡ್ಯಾನ್ಸ್​ನಲ್ಲಿ ಜೆನ್ನಿಫರ್ ಮತ್ತು ಬಿಲ್​ ಗೇಟ್ಸ್​ ಎಲ್ಟನ್​ ಜಾನ್​ರ ‘ಕ್ಯಾನ್ ಯು ಫೀಲ್ ದ ಲವ್ ಟುನೈಟ್’​ ಹಾಡಿಗೆ ಹೆಜ್ಜೆ ಹಾಕಿದರು ಎನ್ನಲಾಗಿದೆ. (ಏಜೆನ್ಸೀಸ್)

    ರಾಂಪ್​ ವಾಕ್​ ಮಾಡಿ ಗಮನ ಸೆಳೆದ ಕರೀನಾ; ‘ನನ್ನ ಆಯ್ಕೆಗೆ ಬಿಟ್ಟಿದ್ದರೆ, ಕಫ್ತಾನ್ ತೊಟ್ಟಿರುತ್ತಿದ್ದೆ’ ಎಂದರು!

    ಪ್ರೀತಿಸಿ ಮದುವೆಯಾದವಳ ಮೇಲೇ ಸಂಶಯ; ನಡೆದೇ ಹೋಯ್ತು ದುರಂತ

    ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts