More

    ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ

    ಬೀಳಗಿ: ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿದ ಪ್ರತಿಯೊಂದು ಯೋಜನೆಗಳನ್ನು ನೈಜ ಲಾನುಭವಿಗಳ ಮನೆ ಬಾಗಿಲಿಗೆ ಮುಟ್ಟಿಸುವುದರ ಜತೆಗೆ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.

    ತಾಲೂಕಿನ ರಬಕವಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಂಡಗನೂರ ಗ್ರಾಮದಲ್ಲಿ ನೀರಾವರಿ ನಿಗಮದಿಂದ ಅಂದಾಜು 70-50 ಲಕ್ಷ ರೂ.ನಲ್ಲಿ ಲಿಂಗನೂರ ಮುಖ್ಯರಸ್ತೆಯಿಂದ ಮುಂಡಗನೂರ ಪುನರ್ವಸತಿ ಕೇಂದ್ರ (ಆರ್‌ಸಿ) ವರೆಗೆ ರಸ್ತೆ ನಿರ್ಮಾಣ, 12 ಲಕ್ಷ ರೂ.ನಲ್ಲಿ ಸಿಸಿ ಕಾಂಕ್ರೀಟ್ ರಸ್ತೆ ಕಾಮಗಾರಿ ಹಾಗೂ ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗದಿಂದ ಮುಂಡಗನೂರದಲ್ಲಿ 39 ಲಕ್ಷ ರೂ. ವೆಚ್ಚದ ಕಾಮಗಾರಿ, ರಬಕವಿಯಲ್ಲಿ 18 ಲಕ್ಷ ರೂ.ನಲ್ಲಿ ಕುಡಿಯುವ ನೀರು ಪೂರೈಕೆ, ಮನೆ ಮನೆಗೆ ನಳ ಜೋಡಣೆ ಹಾಗೂ ವಿವಿಧ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಲಾಗಿದೆ ಎಂದರು.

    ಸರ್ಕಾರಿ ಕಾಮಗಾರಿಗಳು ಗುಣಮಟ್ಟದ್ದಾಗಬೇಕು. ಗ್ರಾಮಸ್ಥರು ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸಬೇಕು. ಗ್ರಾಮಸ್ಥರ ಸಹಕಾರದಿಂದ ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದರು.

    ನಂದಿ ಶುಗರ್ಸ್‌ ಉಪಾಧ್ಯಕ್ಷ ತಿಮ್ಮಣ್ಣ ಅಮಲಝರಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆನಂದ ಇಂಗಳಗಾಂವಿ, ಜಿಪಂ ಸದಸ್ಯ ಮಗಿಯಪ್ಪ ದೇವನಾಳ, ತಾಪಂ ಅಧ್ಯಕ್ಷ ರಾಮಣ್ಣ ಬಿರಾದಾರ, ಹೊಳಬಸು ಬಾಳಶೆಟ್ಟಿ, ಜಗದೀಶ ಶಿರಾಳಶಟ್ಟಿ, ಸಿದ್ದಪ್ಪ ಕಡಪಟ್ಟಿ, ಹನುಮಂತ ಶಿಂಗರಡ್ಡಿ, ತಿಪ್ಪಣ್ಣ ಸಂಜೀವಪ್ಪಗೋಳ, ಎಇಇ ಎಸ್.ಎಸ್. ಕೊಳ್ಳಿ, ಜೆಇ ರವಿಕಿರಣ ಡಂಬಳ, ಚನ್ನಪ್ಪ ಜಮಖಂಡಿ, ಯಲ್ಲಪ್ಪ ಹನಮರ, ಈಶ್ವರ ಕಾಡಪ್ಪನ್ನವರ, ಸುರೇಶ ಮಿಸಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts