More

    ಕದ್ದ ಬೈಕ್ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿ ಸಿಕ್ಕಿಬಿದ್ದ ದರೋಡೆಕೋರ

    ಉಪ್ಪಿನಂಗಡಿ: ನೆಲ್ಯಾಡಿ ಸಮೀಪದ ಆರ್ಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಬೆದರಿಸಿ ಮೊಬೈಲ್, ನಗದು ಹಾಗೂ ಬೈಕನ್ನು ದರೋಡೆ ಮಾಡಿದ ತಂಡ, ಬಳಿಕ ಗಾಂಧಿಪಾರ್ಕ್ ಬಳಿ ನಿಲ್ಲಿಸಿದ್ದ ಬೈಕನ್ನೂ ಕಳವುಗೈದಿದೆ. ಕಳವಾದ ಬೈಕ್‌ಗೆ ಶಿರಾಡಿ ಗ್ರಾಮದ ಅಡ್ಡಹೊಳೆ ಬಳಿ ಲಾರಿ ಡಿಕ್ಕಿ ಹೊಡೆದಿದ್ದು, ದರೋಡೆಕೋರ ತಂಡದ ಸದಸ್ಯನೊಬ್ಬ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಗುರುವಾರ ರಾತ್ರಿ ನೆಲ್ಯಾಡಿ ಬಳಿ ಹೆದ್ದಾರಿ ವಿಸ್ತರಣೆ ಕಾಮಗಾರಿ ನಿರ್ವಹಿಸುತ್ತಿದ್ದ ಕಾರ್ಮಿಕರಿದ್ದ ಬಾಡಿಗೆ ಮನೆ ಬಳಿ ಬಂದಿದ್ದ ದರೋಡೆಕೋರರ ತಂಡ ಕಾರ್ಮಿಕರನ್ನು ಬೆದರಿಸಿ 1.30 ಲಕ್ಷ ರೂ ನಗದು, ಮೊಬೈಲ್‌ಗಳು ಹಾಗೂ ಬೈಕನ್ನು ದರೋಡೆಗೈದಿದ್ದರು. ಈ ಬಗ್ಗೆ ಆಂಧ್ರಪ್ರದೇಶದ ಕೋಮ್ಮವರಂ ಗ್ರಾಮದ ಬತ್ತಲು ವೆಂಕಟೇಶ್ವರಲು (30) ಎಂಬುವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು.

    ಅದೇ ದಿನ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ನಿವಾಸಿ ಮಹಮ್ಮದ್ ಎಂಬುವರು ಕಾರ್ಯ ನಿಮಿತ್ತ ಹೊರಜಿಲ್ಲೆಗೆ ತೆರಳುವ ವೇಳೆ ಗಾಂಧಿ ಪಾರ್ಕ್ ಬಳಿಯ ಜೈನ ಬಸದಿ ಸಮೀಪ ಬೈಕನ್ನು ನಿಲ್ಲಿಸಿದ್ದು, ದರೋಡೆಕೋರರು ನಕಲಿ ಕೀ ಬಳಸಿ ಬೈಕನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಮಹಮ್ಮದ್ ಅವರ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಬೈಕ್ ನಂಬರ್ ಆಧಾರದಲ್ಲಿ ತನಿಖೆ: ಕದ್ದೊಯ್ದ ಬೈಕ್ ಶಿರಾಡಿ ಗ್ರಾಮದ ಅಡ್ಡೊಳೆ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದಾನೆಂದು ತಿಳಿದುಬಂದಿದೆ. ಬೈಕ್ ನೋಂದಣಿ ಸಂಖ್ಯೆ ಆಧಾರದಲ್ಲಿ ತನಿಖೆ ನಡೆಸಿದಾಗ ಅದು ಮಹಮ್ಮದ್ ಅವರಿಗೆ ಸೇರಿದ್ದೆಂದು ಗೊತ್ತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts