More

    ಕರೊನಾ 2ನೇ ಅಲೆ ಮಧ್ಯೆಯೇ ಬಿಹಾರದಲ್ಲಿ 75 ಸಾವಿರ ಲೆಕ್ಕವಿಲ್ಲದ ಸಾವುಗಳು: ಪ್ರಶ್ನೆ ಹುಟ್ಟುಹಾಕಿದ ದತ್ತಾಂಶ

    ನವದೆಹಲಿ: 2021ರ ಮೊದಲ ಐದು ತಿಂಗಳಲ್ಲಿ ವಿವರಿಸಲಾಗದ ಕಾರಣಗಳಿಂದ ಬಿಹಾರದಲ್ಲಿ ಸುಮಾರು 75 ಸಾವಿರ ಮಂದಿ ಮೃತಪಟ್ಟಿದ್ದು, ಕಾಕತಾಳೀಯ ಎಂಬಂತೆ ಕರೊನಾ ಎರಡನೇ ಅಲೆಯಲ್ಲಿ ಅದು ಹೊಂದಿಕೆಯಾಗಿರುವಂತೆ ಹೊಸ ದತ್ತಾಂಶವು ತೋರಿಸುತ್ತಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಇದು ರಾಜ್ಯದ ಅಧಿಕೃತ ಸಾಂಕ್ರಾಮಿಕ ಸಾವಿನ ಅಂಕಿ-ಅಂಶಕ್ಕಿಂತ ಸುಮಾರು 10 ಪಟ್ಟು ಹೆಚ್ಚಾಗಿದ್ದು, ರಾಜ್ಯವು ತನ್ನ ಕೋವಿಡ್ ಸಾವುಗಳನ್ನು ಇನ್ನು ಲೆಕ್ಕಹಾಕುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

    2019ರಲ್ಲಿ ಜನವರಿಯಿಂದ ಮೇ ವರೆಗೆ ಸುಮಾರು 1.3 ಲಕ್ಷ ಸಾವಿನ ಪ್ರಕರಣಗಳು ಬಿಹಾರದಲ್ಲಿ ವರದಿಯಾಗಿದ್ದವು. 2021ರಲ್ಲಿ ಇದೇ ಅವಧಿಯಲ್ಲಿ 2.2 ಲಕ್ಷ ಸಾವಿನ ಪ್ರಕರಣಗಳು ವರದಿಯಾಗಿವೆ. ರಾಜ್ಯದ ನಾಗರಿಕ ನೋಂದಣಿ ವ್ಯವಸ್ಥೆಯ ಮಾಹಿತಿಯ ಪ್ರಕಾರ, ಸುಮಾರು 82,500 ವ್ಯತ್ಯಾಸವನ್ನು ತೋರಿಸುತ್ತಿದೆ. ಶೇಕಡ 62 ರಷ್ಟು ಹೆಚ್ಚಳದಲ್ಲಿ ಅರ್ಧಕ್ಕಿಂತ ಹೆಚ್ಚಿನವು ಈ ವರ್ಷದ ಮೇ ತಿಂಗಳಲ್ಲಿಯೇ ವರದಿಯಾಗಿದೆ.

    ಆದಾಗ್ಯೂ, 2021ರ ಜನವರಿಯಿಂದ ಮೇ ವರೆಗೆ ಬಿಹಾರದ ಅಧಿಕೃತ ಕೋವಿಡ್ ಸಾವಿನ ಸಂಖ್ಯೆ 7,717 ಆಗಿದೆ. ರಾಜ್ಯವು ಒಟ್ಟು 3,951 ಹೆಚ್ಚಿನದನ್ನು ಸೇರಿಸಿದ ನಂತರ ಈ ತಿಂಗಳ ಆರಂಭದಲ್ಲಿ ಈ ಅಂಕಿ-ಅಂಶ ಬಂದಿದೆ. ಪರಿಷ್ಕೃತ ಅಂಕಿ ಅಂಶದಲ್ಲಿ ದಾಖಲಾಗಿರುವಂತೆ ಈ ಸಾವುಗಳು ಯಾವಾಗ ಸಂಭವಿಸಿದವು ಎಂದು ಅಧಿಕಾರಿಗಳು ನಿರ್ದಿಷ್ಟಪಡಿಸದಿದ್ದರೂ, ಅವು 2021ರಲ್ಲಿ ಸಂಭವಿಸಿವೆ ಎಂದು ಊಹಿಸಲಾಗುತ್ತಿದೆ.

    ಇನ್ನೂ, ಬಿಹಾರ ರಾಜ್ಯದಲ್ಲಿ ಒಟ್ಟಾರೆ ಅಧಿಕೃತ ಕೋವಿಡ್ ಸಾವುಗಳ ಸಂಖ್ಯೆ ಅದರ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ ದಾಖಲಾದ ಹೆಚ್ಚುವರಿ ಸಾವುಗಳ ಒಂದು ಭಾಗ ಮಾತ್ರ. ನಿಖರವಾಗಿ ಹೇಳುವುದಾದರೆ 74,808 ವ್ಯತ್ಯಾಸ ತೋರಿಸುತ್ತಿದೆ. ಸದ್ಯಕ್ಕೆ, ಈ ವ್ಯತ್ಯಾಸವು ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಪರಿಷ್ಕೃತ ಸಂಖ್ಯೆಗಳ ಹೊರತಾಗಿಯೂ, ರಾಜ್ಯವು ಇನ್ನೂ ಕೋವಿಡ್ ಸಾವುಗಳನ್ನು ಲೆಕ್ಕಹಾಕುತ್ತಿದೆಯೇ? ಎಂಬ ಅನುಮಾನ ಮೂಡಿದೆ.

    ಕೋವಿಡ್​ ಸಾವುಗಳನ್ನು ದಾಖಲಿಸುವಾಗ ಬಿಹಾರವು ಐತಿಹಾಸಿಕವಾಗಿ ಕಳಪೆ ದಾಖಲೆಯನ್ನು ಹೊಂದಿದೆ. ಅಂತಹ ಸಂಭವನೀಯ ಅಂಡರ್‌ಕೌಂಟಿಂಗ್ ಅನ್ನು ಶಂಕಿಸಲಾಗಿರುವ ಇತ್ತೀಚಿನ ರಾಜ್ಯ ಬಿಹಾರವಾಗಿದೆ. ಇದಕ್ಕೂ ಮೊದಲು ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ದೆಹಲಿಯಲ್ಲೂ ಇದೇ ರೀತಿಯ ಪ್ರವೃತ್ತಿಗಳು ಕಂಡುಬಂದಿವೆ. ಈ ಐದು ರಾಜ್ಯಗಳಲ್ಲಿ ಮಾತ್ರ 4.8 ಲಕ್ಷ ವಿವರಿಸಲಾಗದ ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿವೆ. (ಏಜೆನ್ಸೀಸ್​)

    ಟಿವಿ ನೋಡೋ ಆಸೆಯಿಂದ ಮನೆಗೆ ಬಂದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ ಬೆಚ್ಚಿಬೀಳಿಸುವಂತಿದೆ!

    ‘ಜಗತ್ತನ್ನೇ ಬದಲಿಸುವ ವ್ಯಕ್ತಿ ನೀವು.. ‘ ರಾಹುಲ್ ಗಾಂಧಿ ಬರ್ತ್​ಡೇಗೆ ಸ್ಪೆಷಲ್​ ವಿಷ್ ಮಾಡಿದ ರಮ್ಯಾ

    VIDEO: ಸರ್ಕಾರಿ ಗೌರವಗಳೊಂದಿಗೆ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಅಂತ್ಯಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts