More

    30 ವರ್ಷಗಳಲ್ಲಿ 3 ಕಿ.ಮೀ. ಉದ್ದದ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ಆಧುನಿಕ ಭಗೀರಥ!

    ಬಿಹಾರ: ಗ್ರಾಮದ ಜಮೀನುಗಳಿಗೆ ನೆರವಾಗಲೆಂದು ಬಿಹಾರದ ವ್ಯಕ್ತಿಯೊಬ್ಬ ಸುಮಾರು 3 ಕಿ.ಮೀ ಉದ್ದ ಕಾಲವೆಯನ್ನು ತೋಡಿ ಕೆರೆಗೆ ಮಳೆ ನೀರು ಹರಿಸುವ ಮೂಲಕ ಆಧುನಿಕ ಭಗೀರಥನೆಂಬ ಖ್ಯಾತಿಯನ್ನು ಗಳಿಸಿದ್ದಾರೆ.

    ಲೌಂಗಿ ಭುಯಿಯಾನ್​ ಆಧುನಿಕ ಭಗೀರಥ. ಈತ ಗಯಾದ ಲಥುವಾ ಏರಿಯಾದಲ್ಲಿ ಬರುವ ಕೊಥಿಲವಾ ಗ್ರಾಮದ ನಿವಾಸಿ. ನೀರಿನ ಅಭಾವ ತಪ್ಪಿಸಲು ಗ್ರಾಮದ ಸಮೀಪದ ಬೆಟ್ಟದ ಇಳಿಜಾರಿಗೆ ಅನುಗುಣವಾಗಿ ಕಾಲುವೆ ಕೊರೆದು ಮಳೆ ನೀರು ಹರಿದು ಕೆರೆಗೆ ಸೇರುವಂತೆ ಮಾಡಿದ್ದಾರೆ.

    ಇದನ್ನೂ ಓದಿ: ಮದುವೆ ಬೆನ್ನಲ್ಲೇ ಪತಿ ಆತ್ಮಹತ್ಯೆ: ಶಾಪಿಂಗ್​ ಮಾಲ್​ನ ಮೂರನೇ ಮಹಡಿಯಿಂದ ಜಿಗಿದ ನವವಧು

    ಈ ಬಗ್ಗೆ ಮಾತನಾಡಿರುವ ಲೌಂಗಿ, ಕಾಲುವೆ ಕೊರೆಯಲು ಸುಮಾರು 30 ವರ್ಷಗಳು ತೆಗೆದುಕೊಂಡಿತು. ಈ ಕಾಲವೆಯಿಂದ ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಮಳೆ ನೀರು ಹರಿದು ಹೋಗುತ್ತದೆ ಎಂದರು.

    ಕಳೆದ 30 ವರ್ಷಗಳಲ್ಲಿ ನಾನು ದನಗಳನ್ನು ಮೇಯಿಸಲು ಹತ್ತಿರದ ಕಾಡಿಗೆ ಹೋಗುತ್ತಿದೆ. ಇದರ ಜತೆಯಲ್ಲೇ ಕಾಲುವೆಯನ್ನು ತೋಡುತ್ತಿದ್ದೆ. ನನ್ನ ಈ ಪ್ರಯತ್ನದಲ್ಲಿ ಯಾರೊಬ್ಬರು ಕೈಜೋಡಿಸಲಿಲ್ಲ. ಗ್ರಾಮಸ್ಥರು ಜೀವನ ನಡೆಸಲು ನಗರಕ್ಕೆ ಹೋಗಿ ಸಂಪಾದಿಸುತ್ತಿದ್ದರು. ಆದರೆ, ಕಾಲುವೆ ಮಾಡಲು ನಾನೇ ನಿರ್ಧರಿಸಿದೆ. ಒಬ್ಬನೇ ಕಾಲುವೆ ಕೊರೆದೆ ಎನ್ನುತ್ತಾರೆ ಲೌಂಗಿ. (ಏಜೆನ್ಸೀಸ್​)

    ನಿನ್ನ ಬಿಟ್ಟು ಅರೆ ಕ್ಷಣ ಇರಲಾರೆ ಎಂದಾಕೆ ಕಾಲ್​ ಮಾಡಿದ್ರೂ ಸ್ವೀಕರಿಸಿಲ್ಲ ಎಂದು ಈತ ಹೀಗೆ ಮಾಡೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts