More

    ಕರೊನಾ ಲಕ್ಷಣಗಳಿದ್ದರೂ ಮದುವೆಯಾದ..ಎರಡೇ ದಿನದಲ್ಲಿ ಸಾವನ್ನಪ್ಪಿದ; 90 ಮಂದಿ ಅಪಾಯದಲ್ಲಿ

    ಪಟನಾ: ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ 90ಕ್ಕೂ ಹೆಚ್ಚು ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಅವರಲ್ಲಿ ಕರೊನಾ ಸೋಂಕು ಇದೆ ಎಂದು ಗೊತ್ತಾಗಿದ್ದೇ ಮದುಮಗನ ಸಾವಿನ ಬಳಿಕ

    ಬಿಹಾರದ ಪಟನಾದ ಹಳ್ಳಿಯೊಂದರಲ್ಲಿ ವಿವಾಹ ಸಮಾರಂಭ ನಡೆದಿತ್ತು. ವರನಿಗೆ 30 ವರ್ಷ. ಗುರ್​ಗಾಂವ್​​ ಮೂಲದ ಈತ ಸಾಫ್ಟ್​​ವೇರ್​ ಇಂಜಿನಿಯರ್​ ಆಗಿದ್ದ. ಈತ ವಿವಾಹವಾದ ಎರಡೇ ದಿನಕ್ಕೆ ಸಾವನ್ನಪ್ಪಿದ್ದಾನೆ. ಅವನಲ್ಲಿ ಕರೊನಾದ ಲಕ್ಷಣಗಳು ಇದ್ದರೂ ಕೂಡ, ಮೃತಪಟ್ಟ ಬಳಿಕವೂ ಕೊವಿಡ್​-19 ಟೆಸ್ಟ್​ಗೆ ಒಳಪಡಿಸದೆ ಅಂತ್ಯಸಂಸ್ಕಾರ ಮಾಡಲಾಗಿತ್ತು.

    ಆದರೆ ಪಟನಾದ ಜಿಲ್ಲಾಡಳಿತಕ್ಕೆ ಹೇಗೋ ಈ ವಿಚಾರ ತಿಳಿಯಿತು. ಪಲಿಗಂಜ್​ ಗ್ರಾಮದಲ್ಲಿ ಹೊಸದಾಗಿ ಮದುವೆಯಾದವನೊಬ್ಬ ಸಾವನ್ನಪ್ಪಿದ್ದಾನೆ. ಅವನ ಹತ್ತಿರ ಸಂಬಂಧಿಕರಿಬ್ಬರು ಸೇರಿ 15ಕ್ಕೂ ಹೆಚ್ಚುಜನರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕ ತಕ್ಷಣ, ಮದುವೆಯಲ್ಲಿ ಪಾಲ್ಗೊಂಡವನ್ನು ಟ್ರೇಸ್​ ಮಾಡಿ ಕರೊನಾ ತಪಾಸಣೆ ನಡೆಸಿದೆ. ಇದೀಗ 90ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

    ಆದರೆ ವರನನ್ನು ತಪಾಸಣೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ. ಕಾರಣ ಕುಟುಂಬದವರು ಯಾರಿಗೂ ಮಾಹಿತಿಯನ್ನೇ ನೀಡದೆ ಅಂತ್ಯಸಂಸ್ಕಾರ ನಡೆಸಿದ್ದಾರೆ.

    ಗುರ್​ಗಾಂವ್​​ನಲ್ಲಿ ಕೆಲಸ ಮಾಡುತ್ತಿದ್ದ ಈ ಮದುಮಗ ಮದುವೆ ಕಾಯಂ ಆಗಿದ್ದರಿಂದ ತನ್ನ ದೀಹಪಲ್ಲಿ ಗ್ರಾಮಕ್ಕೆ ಆಗಮಿಸಿದ್ದ. ಅದಾದ ಸ್ವಲ್ಪ ದಿನದಲ್ಲೇ ಅವನಿಗೆ ಜ್ವರ, ಕೆಮ್ಮು ಶುರುವಾಗಿತ್ತು. ಆದರೆ ಕುಟುಂಬ ಅದರ ಮಧ್ಯೆಯೂ ಮದುವೆ ಕಾರ್ಯವನ್ನು ಮುಂದುವರಿಸಿತ್ತು.

    ಮದುವೆಯಾಗಿ ಎರಡೇ ದಿನಕ್ಕೆ ಆತನ ಆರೋಗ್ಯ ಹದಗೆಡಲು ಶುರುವಾಯಿತು. ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾನೆ.
    ಮದುವೆಯಲ್ಲಿ ಎಲ್ಲ ನಿಯಮಗಳನ್ನೂ ಉಲ್ಲಂಘಿಸಲಾಗಿದೆ. ಮಾಸ್ಕ್​ ಧರಿಸಿರಲಿಲ್ಲ, ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಸರ್ಕಾರದ ಗೈಡ್​ಲೈನ್ಸ್​ನಲ್ಲಿರುವ ಒಂದೇ ಒಂದು ಸೂಚನೆಯನ್ನೂ ಪಾಲಿಸಲಿರಲಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. (ಏಜೆನ್ಸೀಸ್​)

    ರಾಯಗಢಕ್ಕೆ ಹೊರಟು ನಿಂತ ಗೋಲ್ಡನ್​ ಸ್ಟಾರ್; ಸುನಿ ಜತೆ ಮತ್ತೊಂದು ಹೊಸ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts