More

    ಸ್ವಯಂ ನಿವೃತ್ತಿ ತೆಗೆದುಕೊಂಡ್ರು ಬಿಹಾರ ಡಿಜಿಪಿ; ಚುನಾವಣೆಗೆ ನಿಲ್ತಾರೆ ಅನ್ನೋ ವದಂತಿ

    ಪಟನಾ: ವಿಧಾನ ಸಭೆ ಚುನಾವಣೆಗೆ ಬಿಹಾರದ ಜನತೆ ಸಿದ್ಧರಾಗುತ್ತಿದ್ದು, ಇದೇ ವೇಳೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗುಪ್ತೇಶ್ವರ ಪಾಂಡೆ ಮಂಗಳವಾರ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ರಾಜ್ಯಪಾಲ ಫಗು ಚೌಹಾಣ್ ಅಂಗೀಕರಿಸಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ.

    ಪಾಂಡೆ ಅವರಿಂದ ತೆರವಾದ ಸ್ಥಾನವನ್ನು ಹಂಗಾಮಿಯಾಗಿ ಹೋಮ್​ ಗಾರ್ಡ್ಸ್ ಮಹಾನಿರ್ದೇಶಕ ಎಸ್​.ಕೆ.ಸಿಂಘಾಲ್ ಅವರಿಗೆ ವಹಿಸಲಾಗಿದೆ. ಚುನಾವಣೆ ಸಮೀಪದಲ್ಲಿರುವ ಪಾಂಡೆ ರಾಜೀನಾಮೆ ನೀಡಿರುವ ಕಾರಣ, ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆಂಬ ವದಂತಿ ಜೋರಾಗಿ ಕೇಳಿಬಂದಿದೆ. ಪಾಂಡೆ 1987ರ ಬ್ಯಾಚಿನ ಐಪಿಎಸ್ ಅಧಿಕಾರಿ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಿಮಿತ್ತ ಮುಂಬೈಗೂ ತೆರಳಿದ್ದರು. ಈ ಪ್ರಕರಣದಲ್ಲಿ ಶಿವಸೇನೆ ಸರ್ಕಾರ ನಿತೀಶ್ ಸರ್ಕಾರವನ್ನು ದೂಷಿಸಿದಾಗ, ನಿತೀಶ್ ಕುಮಾರ್ ಆಡಳಿತವನ್ನು ಪ್ರಬಲವಾಗಿ ಬೆಂಬಲಿಸಿ ಹೇಳಿಕೆಯನ್ನು ನೀಡಿದ್ದರು.

    ಇದನ್ನೂ ಓದಿ: ಅಂತರ್ಜಾಲದ ಆಟಗಳು ಮುಂದೊಡ್ಡಿದ ಅಪಾಯ

    ಈ ಹಿಂದೆ 2009ರಲ್ಲೂ ಲೋಕಸಭೆ ಚುನಾವಣೆಗೆ ಮೊದಲು ಅವರು ರಾಜೀನಾಮೆ ಸಲ್ಲಿಸಿದ್ದರು. ಆದರೆ, ಅಂದು ಸರ್ಕಾರ ಅವರ ಸ್ವಯಂ ನಿವೃತ್ತಿ ಅರ್ಜಿಯನ್ನು ಅಂಗೀಕರಿಸದೇ ಕೆಲಸದಲ್ಲಿ ಮುಂದುವರಿಯುವಂತೆ ಸೂಚಿಸಿತ್ತು. (ಏಜೆನ್ಸೀಸ್)

    ಗಡಿಯಲ್ಲಿ ದ್ವಿಗುಣವಾದ ಚೀನಾ ವೈಮಾನಿಕ ವ್ಯವಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts