More

    ಸಚಿವ ಉದಯನಿಧಿಗೆ ಬಿಹಾರ ಕೋರ್ಟ್ ಸಮನ್ಸ್..! ಏನಾಯ್ತು..

    ಚೆನ್ನೈ: ಸನಾತನ ಧರ್ಮದ ಕುರಿತು ಅವಹೇಳನಕರ ಹೇಳಿಕೆ ನೀಡಿದ್ದ ತಮಿಳುನಾಡಿನ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಗೆ ಬಿಹಾರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

    ಇದನ್ನೂ ಓದಿ: ಅಯೋಧ್ಯೆ ಬಾಲರಾಮ ದೇವರ ದರ್ಶನ, ಆರತಿ ಸಮಯದಲ್ಲಿ ಬದಲಾವಣೆ..ಇಲ್ಲಿದೆ ಮಾಹಿತಿ

    ರಾಜ್ಯ ಜಾತ್ಯತೀತ ಲೇಖಕರು ಮತ್ತು ಕಲಾವಿದರ ಸಂಘದ ಆಶ್ರಯದಲ್ಲಿ ಸನಾತನ ಧರ್ಮ ನಿರ್ಮೂಲನೆ ಕುರಿತು ಚೆನ್ನೈಯಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಸಚಿವ ಉದಯನಿಧಿ ಪಾಲ್ಗೊಂಡು ಡೆಂಗೆ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವಂತೆ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಟೀಕೆ ಮಾಡಿದ್ದು, ಇದು ದೇಶದಾದ್ಯಂತ ವಿವಾದಕ್ಕೀಡಾಗಿತ್ತು.

    ಬಿಜೆಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಉದಯನಿಧಿ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಉದಯನಿಧಿ ವಿರುದ್ಧ ಹಲವು ರಾಜ್ಯಗಳ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದೇ ಹಿನ್ನೆಲೆಯಲ್ಲಿ ವಕೀಲ ಧರಣೀಧರ್ ಪಾಂಡೆ ಅವರು ಬಿಹಾರದ ಔರಾ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣದ ವಿಚಾರಣೆಗೆ ಬಂದಾಗ ಮ್ಯಾಜಿಸ್ಟ್ರೇಟ್ ಮನೋರಂಜನ್ ಕುಮಾರ್ ಝಾ ಅವರು ಉದಯನಿಧಿ ಮತ್ತು ಅವರ ವಕೀಲರಿಗೆ ನೇರವಾಗಿ ಹಾಜರಾಗಿ ವಿವರಣೆ ನೀಡುವಂತೆ ಸಮನ್ಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದರು.

    ಆ ತಪ್ಪು ಮಾಡಿದರೆ ‘ಪರಮಾಣು ಯುದ್ಧ’ ಅನಿವಾರ್ಯ..ಅಮೆರಿಕಾಕ್ಕೆ ಪುಟಿನ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts