More

    ಈ 2 ಪಕ್ಷಗಳ ಬಗ್ಗೆ ಮುಸ್ಲಿಮರಿಗೆ ಎಚ್ಚರವಿರಲಿ… ಮುಂದಿನ ಲೋಕಸಭಾ ಚುನಾವಣೆಗೆ ಬಿಹಾರ ಸಿಎಂ ಹೊಸ ತಂತ್ರಗಾರಿಕೆ

    ಪಟನಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕ್​ ವಿಭಜನೆ ಆಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಹೊಸ ತಂತ್ರಗಾರಿಕೆಯನ್ನು ಹೆಣೆದಿದ್ದಾರೆ.

    ಸೋಮವಾರ ಮುಸ್ಲಿಂ ಮುಖಂಡರ ಜೊತೆ ಮುಚ್ಚಿದ ಬಾಗಿಲಿನ ಸಭೆ ನಡೆಸಿದ ನಿತೀಶ್​ ಕುಮಾರ್​, ಬಿಜೆಪಿ ಮತ್ತು ಎಐಎಂಐಎಂ ವಿರುದ್ಧ ಎಚ್ಚರಿಕೆ ಕರೆ ನೀಡಿದರು. ಎರಡು ಪಕ್ಷಗಳು “ಕೋಮು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುತ್ತವೆ” ಎಂದು ಹೇಳಿದರು.

    ಸಿಎಂ ನಿತೀಶ್​ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ವಿವಿಧ ಪಂಗಡಗಳಿಗೆ ಸೇರಿದ ಮುಸ್ಲಿಂ ಮುಖಂಡರುಗಳು ಭಾಗವಹಿಸಿದ್ದರು. ಆದರೆ, ಜನತಾ ದಳ ಯುನೈಟೆಡ್‌ನ ಮುಸ್ಲಿಂ ಮುಖಂಡರನ್ನು ಸಭೆಗೆ ಆಹ್ವಾನಿಸಿರಲಿಲ್ಲ.

    ಸಭೆಯಲ್ಲಿ 2024 ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯು ರಾಜಕೀಯದಲ್ಲಿ ಸಕ್ರಿಯವಾಗುವುದರ ಬಗ್ಗೆ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನದ ಬಗ್ಗೆ ನಿತೀಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು. ವಿಭಜಕ ಶಕ್ತಿಗಳ ವಿರುದ್ಧ ಮುಸ್ಲಿಂ ಮುಖಂಡರುಗಳು ಹೆಚ್ಚು ಜಾಗೃತರಾಗಬೇಕು ಎಂದು ನಿತೀಶ್​ ಮನವಿ ಮಾಡಿದರು.

    ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರ ಪಕ್ಷದ ಬಗ್ಗೆ ಎಚ್ಚರವಿರಲಿ ಎಂದು ಹೇಳಿದರು. ನಿತೀಶ್​ ಕುಮಾರ್​ ಅವರ ಪ್ರಕಾರ ಎಐಎಂಐಎಂ ಪಾರ್ಟಿಯು ಬಿಜೆಪಿಯ ಬಿ ಟೀಮ್ ಆಗಿದ್ದು, ಎಚ್ಚರಿಕೆ ವಹಿಸುವಂತೆ ನಿತೀಶ್​ ಅವರು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದರು. ಅಸಾದುದ್ದೀನ್ ಓವೈಸಿಯಂತಹ ನಾಯಕರು ಕೋಮು ವಾತಾವರಣವನ್ನು ಸೃಷ್ಟಿಸಲು ದ್ವೇಷದ ಕಾಮೆಂಟ್‌ಗಳನ್ನು ಬಳಸಿದರು, ಇದು ಮುಸ್ಲಿಂ ಮತಗಳ ವಿಭಜನೆಗೆ ಕಾರಣವಾಯಿತು ಎಂದು ಅವರು ಹೇಳಿದರು.

    ಬಿಹಾರದಲ್ಲಿ ಮುಸ್ಲಿಮರ ಉನ್ನತಿ ಮತ್ತು ಅಭಿವೃದ್ಧಿಗಾಗಿ ಕಳೆದ 18 ವರ್ಷಗಳಲ್ಲಿ ತಮ್ಮ ಸರ್ಕಾರವು ಹೇಗೆ ಕೆಲಸ ಮಾಡಿದೆ ಎಂಬುದನ್ನು ನಿತೀಶ್​ ಕುಮಾರ್​ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

    ಎಐಎಂಐಎಂ ಪಾರ್ಟಿಯು ಸೀಮಾಂಚಲ್ ಪ್ರದೇಶದಲ್ಲಿ ಹಲವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ನಂತರ 2020ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗಿದ್ದನ್ನು ನಿತೀಶ್​ ನೆನಪಿಸಿಕೊಂಡು ಈ ಎಚ್ಚರಿಕೆಯನ್ನು ನೀಡಿದ್ದಾರೆ. ವೋಟ್ ಬ್ಯಾಂಕ್ ವಿಭಜನೆಯಾಗದಂತೆ ಮುಸ್ಲಿಂ ಮತದಾರರನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವುದು ನಿತೀಶ್​ ಅವರ ಹೊಸ ತಂತ್ರವಾಗಿದೆ. ಒಡೆದ ಮತಬ್ಯಾಂಕ್ ಸಾರ್ವತ್ರಿಕ ಚುನಾವಣೆಯಲ್ಲಿ ಕೇಸರಿ ಪಕ್ಷದ ಗೆಲುವಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ನಿತೀಶ್​ ಈ ನಿರ್ಧಾರ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

    500 ರೂ. ಡ್ರಾ ಮಾಡಲು ಹೋದ್ರೆ ಸಿಗುತ್ತಿದೆ 2500 ರೂ.! ಎಟಿಎಂನಲ್ಲಿ ಹಣದ ಮಳೆ, ಮುಗಿಬಿದ್ದ ಜನರು

    ನಗರದಲ್ಲಿ ಹೆಚ್ಚಿದ ಪುಂಡರ ಹಾವಳಿ: ರಾತ್ರಿಯಾಗ್ತಿದ್ದಂತೆಯೇ ರಸ್ತೆಗಿಳಿದು ಡೆಡ್ಲಿ ವ್ಹೀಲಿಂಗ್, ಅಪಘಾತಕ್ಕೆ ಆಹ್ವಾನ

    ಮೂವರು ಬಿ.ಟೆಕ್​ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ: ಕೋಮಾಗೆ ಜಾರಿದ ಓರ್ವ ವಿದ್ಯಾರ್ಥಿನಿ, ಪಾಲಕರ ಆಕ್ರಂದನ

    Nitish

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts