More

    7,926 ಕೋಟಿ ರೂಪಾಯಿ ವಂಚನೆ ಬೆಳಕಿಗೆ; ಹಲವು ಸ್ಥಳಗಳ ಮೇಲೆ ಸಿಬಿಐ ದಾಳಿ

    ನವದೆಹಲಿ: ಹೈದರಾಬಾದ್ ಮೂಲದ ಟ್ರಾನ್ಸ್​ಟ್ರಾಯ್ ಇಂಡಿಯಾ ಲಿಮಿಟೆಡ್ ಮತ್ತು ಇದರ ನಿರ್ದೇಶಕರ ವಿರುದ್ಧ -ಠಿ; 7,926 ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ. ಇದು ಬ್ಯಾಂಕಿಂಗ್ ವಂಚನೆಯ ದೊಡ್ಡ ಪ್ರಕರಣ ಎಂದು ಸಿಬಿಐ ಹೇಳಿದೆ. ಟ್ರಾನ್ಸ್​ಟ್ರಾಯ್ ಇಂಡಿಯಾ ಸಂಸ್ಥೆ ಮತ್ತು ಅದರ ನಿರ್ದೇಶಕರಿಗೆ ಸಂಬಂಧಿತ ಹೈದರಾಬಾದ್, ಗುಂಟೂರಿನ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದ್ದು, ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

    ಈ ಕಂಪನಿಗೆ ಸಾಲ ನೀಡಿ ವಂಚನೆಗೆ ಒಳಗಾಗಿರುವ ಬ್ಯಾಂಕ್​ಗಳು ಕೆನರಾ ಬ್ಯಾಂಕ್ ನೇತೃತ್ವದಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಟ್ರಾನ್ಸ್​ಟ್ರಾಯ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಚೆರುಕುರಿ ಶ್ರೀಧರ್, ಹೆಚ್ಚುವರಿ ನಿರ್ದೇಶಕರಾದ ರಾಯಪತಿ ಸಾಂಬಶಿವ ರಾವ್ ಮತ್ತು ಅಕ್ಕಿನೇನಿ ಸತೀಶ್ ವಿರುದ್ಧ ಎಫ್​ಎಫ್​ಆರ್ ದಾಖಲಾಗಿದೆ. ಸುಳ್ಳು ದಾಖಲೆ, ನಕಲಿ ಲೆಕ್ಕಪತ್ರ ತೋರಿಸಿ ಅನೇಕ ಬ್ಯಾಂಕ್​ಗಳಿಂದ ದೊಡ್ಡ ಮೊತ್ತದ ಸಾಲ ಪಡೆದಿರುವ ಆರೋಪ ಇವರ ಮೇಲಿದೆ ಎಂದು ಸಿಬಿಐ ವಕ್ತಾರ ಆರ್.ಕೆ. ಗೌರ್ ಹೇಳಿದ್ದಾರೆ.

    ಇದನ್ನೂ ಓದಿ: ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ

    ಲಂಡನ್​ನಲ್ಲಿ ಬಂಧನದಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ ವಿರುದ್ಧ 6 ಸಾವಿರ ಕೋಟಿ ರೂ. ಮತ್ತು ಈತನ ಸಂಬಂಧಿ ಮೆಹುಲ್ ಚೋಕ್ಸಿ ವಿರುದ್ಧ 7,080.86 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆಯ ಪ್ರಕರಣ ದಾಖಲಾಗಿರುವುದು ಈವರೆಗಿನ ದೊಡ್ಡ ಮೊತ್ತವಾಗಿತ್ತು ಎಂದು ಸಿಬಿಐ ಹೇಳಿದೆ.

    • ಹೈದರಾಬಾದ್ ಮೂಲದ ಕಂಪನಿ ವಿರುದ್ಧ ಪ್ರಕರಣ
    • ನೀರವ್ ಮೋದಿಗಿಂತಲೂ ಅಧಿಕ ಮೊತ್ತದ ಹಗರಣ

    ವಂಚನೆ ಹೇಗೆ?

    • ಸುಳ್ಳು ದಾಖಲೆ, ನಕಲಿ ಲೆಕ್ಕಪತ್ರ ತೋರಿಸಿ ಸಾಲ
    • ಕಂಪನಿಯ ಬ್ಯಾಲೆನ್ಸ್ ಶೀಟ್​ನಲ್ಲಿ ತಪ್ಪು ಲೆಕ್ಕ
    • ಷೇರು ಲೆಕ್ಕಾಚಾರದಲ್ಲೂ ಅಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts